ಕೃಷಿಯಲ್ಲಿ ನಾನಾ ರೀತಿಯ ಬೆಳೆಗಳನ್ನು ಬೆಳೆಯಬಹುದು ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆಗಳನ್ನು ಬೆಳೆದು ಅಧಿಕ ಇಳುವರಿಯನ್ನು ಪಡೆಯಬಹುದು. ಅದರ ಬಗ್ಗೆ ಮಾಹಿತಿ ತಿಳಿದಿರಬೇಕು ಹಾಗಾಗಿ ಕಡಿಮೆ ಖರ್ಚಿನಲ್ಲಿ ಶುಂಠಿ ಬೆಳೆಯನ್ನು ಬೆಳೆಯುವ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಬಣಕಾರ್ ಅವರು ತಮ್ಮ ಎರಡುವರೆ ಎಕರೆ ಹೊಲದಲ್ಲಿ 15ಗುಂಟೆ ಜಾಗದಲ್ಲಿ ಶುಂಠಿ ಬೆಳೆದಿದ್ದಾರೆ.ಬೀಜದಿಂದಲೆ ಬೆಳೆಯನ್ನು ಬೆಳೆಯಲಾಗಿದೆ. 2-3ಚೀಲ ಗೊಬ್ಬರವನ್ನು ಬಳಸಿದ್ದಾರೆ ಕಡಿಮೆ ಗೊಬ್ಬರವನ್ನು ಬಳಸಿ ಇಳುವರಿ ಪಡೆಯಬಹುದಾಗಿದೆ. ಶುಂಠಿ ಗಡ್ಡೆಯಲ್ಲಿ 44 ಮರಿಗಿಡಗಳನ್ನು ನೋಡಬಹುದು ಏಪ್ರೀಲ್ ತಿಂಗಳಿನಲ್ಲಿ ಶುಂಠಿ ಬೆಳೆಯನ್ನು ಹಾಕಿದ್ದಾರೆ ಇಷ್ಟು ಕಡಿಮೆ ಅವಧಿಯಲ್ಲಿ 44 ಗಿಡಗಳನ್ನು ಒಂದು ಗಡ್ಡೆಯಲ್ಲಿ ನೋಡಬಹುದಾಗಿದೆ. ಈ ಬೆಳೆ ಸುಮಾರು ಎಂಟು ತಿಂಗಳವರೆಗೆ ಬೆಳೆಯುತ್ತಿರುತ್ತದೆ ಎಲೆಗಳು ಒಣಗಿ ನೆಲದವರೆಗೆ ಬಾಗಬೇಕು.

ಒಂದು ಗಡ್ಡೆಯಲ್ಲಿ ಎರಡು ವರೆಯಿಂದ ನಾಲ್ಕು ಕೆ.ಜಿ ತೂಕ ಬರುತ್ತದೆ. ರಾಸಾಯನಿಕ ಔಷಧಿಯನ್ನು 2-3 ಸಲ ಮೌನೊಕುಡೊಪಾಸ್ ಕೊಡಲಾಗಿದೆ. ಗ್ರೀನ್ ಪ್ಯಾಂಟ್ ಸ್ಪ್ರೆ ಅನ್ನು 5-6ಸಲ ಹೊಡೆಯಲಾಗಿದೆ ಅಲ್ಲದೇ ಗೊಬ್ಬರ ಮತ್ತು ಎಣ್ಣೆಯನ್ನು ಹಾಕಲಾಗಿದೆ. ಮಳೆ ಹೆಚ್ಚು ಬಂದಿರುವ ಕಾರಣದಿಂದ ತಗ್ಗು ಪ್ರದೇಶಗಳಲ್ಲಿ ಕೊಳೆ ಬಂದಿರುವುದನ್ನು ಕಾಣಬಹುದು ಅದಕ್ಕೆ ಗ್ರೀನ್ ಪ್ಯಾಂಟ್ ನ ಔಷಧಿಯನ್ನು ಹಾಕುತ್ತಿರುವುದರಿಂದ ನಿಯಂತ್ರಣಕ್ಕೆ ಬಂದಿದೆ. ಹೀಗೆ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಶುಂಠಿ ಬೆಳೆಯನ್ನು ಬೆಳೆದು ಲಾಭ ಗಳಿಸಬಹುದು 11ಗುಂಟೆಯಲ್ಲಿ 70 ಕ್ವಿಂಟಲ್ ಶುಂಠಿ ಬೆಳೆಯನ್ನು ಬೆಳೆದಿರುವದನ್ನು ನೋಡಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಕೃಷಿಯಲ್ಲಿ ಆಸಕ್ತಿ ಇರುವ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *