ಸೀಬೆ ಹಣ್ಣು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಒಂದು ಹಣ್ಣು ಅಷ್ಟು ಮಾತ್ರವಲ್ಲದೆ ಪಟ್ಟಣಗಳ ಮಾರುಕಟ್ಟೆಯಲ್ಲೂ ಸಹ ಇದರ ಬೆಲೆ ತಕ್ಕಮಟ್ಟಿಗೆ ದುಬಾರಿಯಾದದ್ದೇ ಆಗಿದೆ ಆದರೆ ಜನರು ಬೇರೆ ಹಣ್ಣುಗಳಿಗೆ ಕೊಡುವ ಮಹತ್ವವನ್ನು ಸೀಬೆ ಹಣ್ಣಿಗೆ ಕೊಡುವುದು ಬಹಳ ಕಡಿಮೆ ಆದರೂ ಸಹ ಸೀಬೆ ಹಣ್ಣು ತಿನ್ನಲು ಬಹಳ ರುಚಿಯಾಗಿದ್ದು ಮೊದಲಿನಿಂದಲೂ ಸಹ ಅದರದ್ದೇ ಆದ ಮಹತ್ವವನ್ನು ಕಾಯ್ದುಕೊಂಡೇ ಬಂದಿದೆ ಈ ಕಾರಣ ಸೀಬೆ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯಬಾರದು ಸೀಬೆ ಹಣ್ಣಿನ ಮಹತ್ವ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವದನ್ನು ಮೊದಲಿನಿಂದಲೂ ತಿನ್ನುತ್ತಲೇ ಬಂದಿದ್ದೇವೆ ಮತ್ತು ಇಂದಿಗೂ ಕೂಡ ತಿನ್ನುತ್ತಲೇ ಇದ್ದೇವೆ ಅಷ್ಟು ಮಾತ್ರವಲ್ಲದೇ ಇಂತಹ ಸೀಬೆ ಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳನ್ನೂ ಸಹ ನಾವು ಗಮನಿಸಬಹುದಾಗಿದೆ ಅಲ್ಲದೆ ಅವು ನಮ್ಮ ಆರೋಗ್ಯದ ಮೇಲೆ ಬೀರುವ ಉತ್ತಮ ಪರಿಣಾಮಗಳನ್ನು ತಿಳಿದುಕೊಳ್ಳೋಣ ಬನ್ನಿ
ಸೀಬೆ ಕಾಯಿಯನ್ನು ಹಲ್ಲಿನಿಂದ ಕಚ್ಚಿ ತಿನ್ನುವುದರಿಂದ ನಿಮ್ಮ ಒಸಡುಗಳು ಗಟ್ಟಿಯಾಗುವುದಲ್ಲದೆ ವಸಡುಗಳಲ್ಲಿ ರಕ್ತ ಸ್ರಾವವಾಗುತ್ತಿದ್ದರೆ ಅದು ನಿಲ್ಲುತ್ತದೆ ಇನ್ನೂ ಎಳೆಯ ಸೀಬೆ ಕಾಯಿಗಳ ಕಷಾಯ ಮಾಡಿ ಅದನ್ನು ಮಜ್ಜಿಗೆಯ ಜೊತೆಗೆ ಬೆರೆಸಿ ಕುಡಿಯುವುದರಿಂದ ಅತಿಸಾರ ಆಮಶಂಕೆ ಮತ್ತು ಎದೆ ನೋವು ನಿವಾರಣೆಯಾಗುತ್ತದೆ, ಇನ್ನೂ ಸೀಬೆ ಎಲೆಗಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದಲ್ಲಿನ ಮೊಡವೆಗಳು ಕ್ರಮೇಣ ನಿವಾರಿಸುತ್ತವೆ ಮತ್ತು ಬಹಳಷ್ಟು ರುಚಿಕರವಾಗಿದೆ ಎಂದು ಯಾವುದೇ ಕಾರಣಕ್ಕೂ ಸೀಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ ಸೀಬೆ ಹಣ್ಣನ್ನು ಬಹಳ ನಿಯಮಿತವಾಗಿ ಸೇವಿಸುವುದ ಉತ್ತಮ ಹಾಗೂ ಸೀಬೆ ಹಣ್ಣನ್ನು ಉಪ್ಪು ಮತ್ತು ಕರಿ ಮೆಣಸಿನ ಪುಡಿಯೊಂದಿಗೆ ಸೇವಿಸುವುದು ಮತ್ತು ಸೀಬೆ ಹಣ್ಣಿನ ಬೀಜಗಳನ್ನು ತೆಗೆದು ಬರಿಯ ತಿರುಳನ್ನು ಮಾತ್ರವೇ ಸೇವಿಸುವುದೂ ಕೂಡ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು
ಸೀಬೆ ಹಣ್ಣಿನ ಬೀಜಗಳನ್ನು ತೆಗೆದು ಅದರ ತಿರುಳಿಗೆ ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ ಮಕ್ಕಳು ಮತ್ತು ಗರ್ಭಿಣಿಯರು ಸೇವಿಸುವುದರಿಂದ ಅದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಇನ್ನು ಸೀಬೆ ಎಲೆಗಳನ್ನು ಅರೆದು ಅದಕ್ಕೆ ಅರಿಶಿನದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ಹೇನು ನಾಶವಾಗುತ್ತವೆ ಹಾಗೂ ಸೀಬೆ ಎಲೆಗಳಿಂದ ಕಷಾಯವನ್ನು ತಯಾರಿಸಿ ಆ ಕಷಾಯಕ್ಕೆ ಒಂದಷ್ಟು ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿನ ಹುಣ್ಣುಗಳು ನಿವಾರಣೆಯಾಗುತ್ತವೆ, ಅಷ್ಟೇ ಅಲ್ಲದೆ ಸೀಬೆ ಎಲೆಯ ಚಿಗುರು ಅರಿಶಿನ ದೊಡ್ಡ ಪತ್ರೆ ಹಾಗಲಕಾಯಿ ಮೆಂತ್ಯ ಕೊತ್ತಂಬರಿ ಬೀಜ ಎಲ್ಲವನ್ನೂ ಸೇರಿಸಿ ಅರೆದು ಅದರೊಂದಿಗೆ ಮೊಸರನ್ನು ಮಿಶ್ರಣ ಮಾಡಿ ಮೈಗೆ ಹಚ್ಚಿಕೊಂಡು ಚೆನ್ನಾಗಿ ತಿಕ್ಕಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಮೈ ಮೇಲಿನ ಗಂಧೆಗಳು ಅಲರ್ಜಿ ಗುಳ್ಳೆಗಳು ಶಮನವಾಗುತ್ತವೆ.