Gruhalakshmi Scheme New Updates For Karnataka Govt: ಗೃಹಲಕ್ಷ್ಮಿ ಯೋಜನೆಯ ಬಗ್ಗೆ ದಿನಕ್ಕೊಂದು ಹೊಸ ಅಪ್ಡೇಟ್ ಸಿಗುತ್ತಲೇ ಇದೆ. ನಮ್ಮ ರಾಜ್ಯದಲ್ಲಿ ಈಗ ಸುಮಾರು 1.15 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದಾರೆ. ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕ ನಂತರ ಸುಮಾರು 65 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗಿದ್ದು, ಇನ್ನು 48 ಲಕ್ಷ ಜನರಿಗೆ ವರ್ಗಾವಣೆ ಆಗಬೇಕಿದೆ.
ಹಾಗೆಯೇ 7 ಲಕ್ಷ ಮಹಿಳೆಯರ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಆಗಿರುವ ಕಾರಣ, ಅವರ ಅಕೌಂಟ್ ಗೆ ಹಣ ವರ್ಗಾವಣೆ ಆಗಿಲ್ಲ. ಒಂದು ವೇಳೆ ನಿಮ್ಮ ಅಕೌಂಟ್ ಗೆ ಇನ್ನು ವರ್ಗಾವಣೆ ಆಗಿಲ್ಲ ಎಂದರೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಅಪ್ಲೈ ಮಾಡಿರುವ ಎಲ್ಲಾ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗುವುದು ಪಕ್ಕಾ ಎನ್ನುವುದನ್ನು ಸರ್ಕಾರವೇ ಕನ್ಫರ್ಮ್ ಮಾಡಿದೆ. ಕೆಲವು ಮಹಿಳೆಯರ ಅಕೌಂಟ್ ಗೆ ಹಣ ಬರದೆ ಇರುವುದಕ್ಕೆ ಕಾರಣ ತಾಂತ್ರಿಕ ದೋಷ ಎನ್ನಲಾಗಿದೆ.
ಆದರೆ ಈಗ ಅದನ್ನು ಸರಿ ಮಾಡಲಾಗಿದ್ದು, ಖುದ್ದು RBI ಹಂತ ಹಂತವಾಗಿ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಿದೆ. ಯಾವೆಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅರ್ಜಿ ಸ್ವೀಕರವಾಗಿದೆ ಎಂದು ಅವರಿಗೆ Acknowledgement ಸಿಕ್ಕಿದೆಯೋ ಅವರಿಗೆಲ್ಲಾ ಖಂಡಿತವಾಗಿ ಹಣ ಬಂದೆ ಬರುತ್ತದೆ. ಆದರೆ ಹಣ ಬರುವುದು ಸ್ವಲ್ಪ ತಡ ಆಗಬಹುದು. ಒಂದು ವೇಳೆ ನೀವು ಅರ್ಜಿ ಸಲ್ಲಿಸಿ ನಿಮಗೆ acknowledgement ಬಂದಿಲ್ಲ ಎಂದರೆ 8147500500 ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು SMS ಮಾಡಿ..
ನಿಮ್ಮ ಅರ್ಜಿ ಸ್ವೀಕೃತಿಯಾಗಿದ್ದರೆ, ಸ್ವೀಕೃತಿಯಾಗಿದೆ ಎಂದು ಕನ್ಫರ್ಮ್ ಮೆಸೇಜ್ ಬರುತ್ತದೆ. ಈ ರೀತಿ ಬಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಖಂಡಿತವಾಗಿ ಬರುತ್ತದೆ ಎಂದು ಅರ್ಥ. ಒಂದು ವೇಳೆ ಸ್ವೀಕೃತಿ ಆಗಿರುವ ಮೆಸೇಜ್ ಬರಲಿಲ್ಲ ಎಂದರೆ ಆಗ ನೀವು ಮತ್ತೆ ಅಪ್ಲೈ ಮಾಡಬಹುದು. ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿರುವ ಬಹುತೇಕ ಮಹಿಳೆಯರಿಗೆ ಈಗಾಗಲೇ ಹಣ ವರ್ಗಾವಣೆ ಆಗಿದೆ. ಒಂದು ವೇಳೆ ಮೊದಲ ಕಂತು ಇನ್ನು ಬಂದಿಲ್ಲ ಎಂದರೆ ಸೆಪ್ಟೆಂಬರ್ 30ನೇ ತಾರೀಕಿನ ಒಳಗೆ ಬಂದೆ ಬರುತ್ತದೆ ಎಂದು ತಿಳಿಸಿದ್ದಾರೆ..
Gruhalakshmi Scheme New Updates For Karnataka Govt
ಈ ಒಂದು ತಿಂಗಳು ಮಾತ್ರ ಈ ರೀತಿಯ ಸಮಸ್ಯೆ ಎದುರಾಗಿದ್ದು, ಆಕ್ಟೊಬರ್ ತಿಂಗಳಿನಿಂದ ಈ ಸಮಸ್ಯೆ ಬರುವುದಿಲ್ಲ. ಆಕ್ಟೊಬರ್ ಇಂದ ಪ್ರತಿ ತಿಂಗಳು 15ನೇ ತಾರೀಕಿನ ಒಳಗೆ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಇನ್ನು ಹಣ ಬಂದಿರದವರಿಗೆ ಮಾತ್ರ ಸೆಪ್ಟೆಂಬರ್ 30ರ ಒಳಗೆ ಹಣ ಬರಲಿದೆ. ನೀವು ಅಪ್ಲಿಕೇಶನ್ ಹಾಕುವಾಗ ಯಾವ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಟ್ಟಿರುತ್ತೀರೋ ಅದೇ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ₹2000 ರೂಪಾಯಿ ವರ್ಗಾವಣೆ ಆಗುತ್ತದೆ.
ಅರ್ಜಿ ಹಾಕುವಾಗ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಟ್ಟಿಲ್ಲ ಎಂದರೆ, ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುತ್ತೋ ಅದೇ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ. ಇಲ್ಲಿ ನೀವು ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸುವುದು ಕಡ್ಡಾಯ ಆಗಿದ್ದು, ಇನ್ನು ಲಿಂಕ್ ಮಾಡಿಸಿಲ್ಲ ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ರಾಂಚ್ ಗೆ ಹೋಗಿ ಲಿಂಕ್ ಮಾಡಿಸಿ. ಈ ಕೆಲಸವನ್ನು ತಪ್ಪದೇ ಮಾಡಿ. ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿ ಮಾಡಬೇಕಾದ ಕೆಲಸ ಆಗಿದೆ..
ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳುವುದು ಕೂಡ ಒಳ್ಳೆಯದೇ. ಸುಮಾರು 7 ಲಕ್ಷ ಮಹಿಳೆಯರ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇರುವುದರಿಂದ ಅಂಥವರ ಸಮಸ್ಯೆಯನ್ನು ಪರಿಹರಿಸಲು ಅಂಗನವಾಡಿ ಕಾರ್ಯಕರ್ತೆಯರ ಸಹಾಯ ತೆಗೆದುಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಮಹಿಳೆಯರಿಗೂ ಸಿಗಲಿದ್ದು, ಹಣ ಸಿಗುವುದಿಲ್ಲ ಎಂದು ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಸ್ವಲ್ಪ ತಡವಾದರೂ ಸಹ ನಿಮ್ಮ ಅಕೌಂಟ್ ಗೆ ಹಣ ಬಂದೆ ಬರುತ್ತದೆ.