Ultimate magazine theme for WordPress.

ಮತ್ತೊಮ್ಮೆ ಒಗಟಿನ ಭವಿಷ್ಯ ನುಡಿದ ಕೋಡಿ ಶ್ರೀಗಳು, ಕಟ್ಟಿಗೆ ಹಾಡುತ್ತೆ, ಕಬ್ಬಿಣ ಓಡುತ್ತೆ, ಗಾಳಿ ಮಾತನಾಡುತ್ತೆ ಈ ಮಾತಿನ ಅರ್ಥವೇನು ಗೊತ್ತಾ..

0 20,963

Kodi mutt Swamiji Bhavishya: ಇತ್ತೀಚೆಗೆ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಧಾರವಾಡದಲ್ಲಿ ತಮ್ಮ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ್ದರು, ಆ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿದ ಶ್ರೀಗಳು ಕೆಲವು ಮಾತುಗಳನ್ನು ಹೇಳಿದ್ದು, ಇದೀಗ ಶ್ರೀಗಳ ಮಾತುಗಳು ಕುತೂಹಲ ಸೃಷ್ಟಿಸಿದ್ದು, ಅವರ ಮಾತಿನ ಅರ್ಥ ಏನಿರಬಹುದು ಎಂದು ಜನರು ತಲೆಕೆಡಿಸಿಕೊಂಡಿದ್ದಾರೆ.

ಅಮಾವಾಸ್ಯೆ ಕಳೆದ ಮೇಲೆ ಮಳೆ ಶುರುವಾಗುತ್ತೆ, ಯಾರು ಚಿಂತೆ ಮಾಡಬೇಕಿಲ್ಲ ಎಂದು ಹೇಳಿದ್ದಾರೆ. ಆದರೆ ಕಾರ್ತೀಕಮಾಸದ ಸಮಯಕ್ಕೆ ಮತ್ತು ಸಂಕ್ರಾಂತಿ ಹಬ್ಬದ ಸಮಯಕ್ಕೆ ಕೆಲವು ಸಮಸ್ಯೆಗಳು ಎದುರಾಗಲಿದ್ದು, ಗೊತ್ತಿದ್ದರೂ ಮನುಷ್ಯ ತಪ್ಪು ಮಾಡಿದರೆ ದೇವರು ಕ್ಷಮೆ ನೀಡುವುದಿಲ್ಲ. ಈಗಿನ ಕಾಲದಲ್ಲಿ ಮನುಷ್ಯರು ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಕೂಡ ನೆಲ, ಜಲ, ಪ್ರಕೃತಿ ಇದೆಲ್ಲವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ..ಇದರಿಂದ ಪ್ರಕೃತಿ ವಿಕೋಪ ಉಂಟಾಗಬಹುದು ಎಂದು ಹೇಳಿದ್ದಾರೆ.

ಈ ಸಮಾಜಕ್ಕೆ ಮತ್ತು ಸುತ್ತಮುತ್ತ ಇರುವವರಿಗೆ ಯಾವ ವಿಚಾರ ಒಳ್ಳೆಯದನ್ನು ಮಾಡುತ್ತದೆಯೋ ಅದು ಧರ್ಮ. ವರ್ಷಗಳಿಂದ ನಾವು ಹೇಳಿರುವುದು ಸತ್ಯ, ಗುರುಗಳ ಆಸ್ತಿ ಕಾಲಜ್ಞಾನ. ಹಲವು ವರ್ಷಗಳ ಹಿಂದೆ ಕಾಲಜ್ಞಾನದಲ್ಲಿ ಕೆಲವು ಮಾತು ಹೇಳಲಾಗಿದೆ, ಕಟ್ಟಿಗೆ ಹಾಡುತ್ತದೆ, ಕಬ್ಬಿಣ ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ಹೇಳಲಾಗಿದೆ. ಆ ಮಾತು ಈಗ ನಿಜವಾಗುತ್ತಿದೆ. ಇದಕ್ಕೆ ಅರ್ಥ ತಿಳಿಸಿರುವ ಶ್ರೀಗಳು, ಕಟ್ಟಿಗೆ ಮತ್ತು ಕಬ್ಬಿಣ ಈ ಎರಡು ಪ್ರಪಂಚದಲ್ಲಿ ರೈಲು ಬಂದಿರುವುದನ್ನು ಸೂಚಿಸಿದರೆ, ಗಾಳಿ ಮಾತನಾಡುತ್ತದೆ ಎನ್ನುವ ಮಾತು ಮೊಬೈಲ್ ಫೋನ್ ಗಳನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಕಾಲಜ್ಞಾನದಲ್ಲಿ ಹೇಳಿರುವ ಹಾಗೆ ಕಲ್ಲಿನ ಕೋಳಿ ಕೂಗುತ್ತದೆ ಎನ್ನುವ ಮಾತು ಸಹ ನಿಜವಾಗಿದ್ದು, ಕಲ್ಲಿನ ಕೋಳಿ ಎಂದರೆ ಮೊಬೈಲ್ ಫೋನ್ ಒಳಗಿರುವ ಸಿಮ್ ಎಂದು ಹೇಳಿದ್ದಾರೆ. ಒಂದು ಸಿಮ್ ತಯಾರಿಸುವುದು ಕಲ್ಲಿನ ರೂಪದಲ್ಲಿ ಇರುವ ಖನಿಜಗಳನ್ನು ಬಳಸಿ, ಈಗ ಆ ಕಲ್ಲಿನ ಕೋಳಿ ಮಾತನಾಡುತ್ತಿದೆ ಎಂದು ಹೇಳಿರುವ ಶ್ರೀಗಳು, ಸರ್ಕಾರದ ಬಗ್ಗೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಕೂಡ ಮಾತನಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿ, ದೋಣಿ ನೀರಿನ ಮೇಲೆ ಸಾಗಬೇಕು, ಆದರೆ ದೋಣಿಯ ಒಳಗೆ ನೀರು ಬಂದರೆ ಅದರಿಂದ ತೊಂದರೆ ತಪ್ಪಲ್ಲ..ರಾಜಕೀಯದಲ್ಲಿ ಇರುವವರು, ಗುರುಗಳು ಎಲ್ಲರೂ ಕೂಡ ಶಾಂತಿ ತರುವಂಥ ಮಾತುಗಳನ್ನು ಆಡಬೇಕು. ಅಧಿಕಾರದಲ್ಲಿರುವ ಸರ್ಕಾರ ಯೋಜನೆಗಳನ್ನು ತಂದರೆ ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ. ನಮ್ಮ ರಾಜ್ಯ ಸಮೃದ್ಧಿಯಿಂದ ತುಂಬಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ತೊಂದರೆ ಆಗುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಇನ್ನು ಮುಂಬರುವ ಲೋಕಸಭಾ ಎಲೆಕ್ಷನ್ ಬಗ್ಗೆ ಮಾತನಾಡಿರುವ ಶ್ರೀಗಳು, ವಿಧಾನಸಭಾ ಎಲೆಕ್ಷನ್ ಸಮಯದಲ್ಲಿ ಒಂದೇ ಪಕ್ಷ ಗೆಲ್ಲುತ್ತೆ ಅಂತ ಹೇಳಿದ್ದೆ ಅದೇ ಥರ ಆಗಿದೆ.. ಲೋಕಸಭಾ ಚುನಾವಣೆಯಲ್ಲಿ ಪಕ್ಷಾಂತರ ಜಾಸ್ತಿ ಇದ್ದರು ಸಹ, ದೇಶದಲ್ಲಿ ಅಧಿಕಾರಕ್ಕೆ ಬರೋದು ಒಂದೇ ಪಕ್ಷ..ರಾಜಕೀಯದಲ್ಲಿ ಅತಂತ್ರ ಸ್ಥಿತಿ ಎನ್ನುವ ಹಾಗೆ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲ.. ಎಂದು ಶ್ರೀಗಳು ಹೇಳಿದ್ದಾರೆ.

Leave A Reply

Your email address will not be published.