Gruhalakshmi scheme 2023 karnataka: ನಮ್ಮ ರಾಜ್ಯದಲ್ಲಿ ಈಗ ರೇಷನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ ಎಂದು ಹೇಳಬಹುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಮುಖ್ಯವಾಗಿ ಬೇಕಿರುವುದು ಬಿಪಿಎಲ್ ರೇಷನ್ ಕಾರ್ಡ್. ರೇಷನ್ ಕಾರ್ಡ್ ಪ್ರಮುಖ ದಾಖಲೆ, ಇದರಿಂದ ಹಲವು ಸೌಲಭ್ಯಗಳನ್ನು ಪಡೆಯಬಹುದು. ರೇಷನ್ ಕಾರ್ಡ್ ನಲ್ಲಿ ನೀವು ನೀಡುವ ಎಲ್ಲಾ ಮಾಹಿತಿಗಳು ಸರಿಯಾಗಿ ಇರುವುದು ಬಹಳ ಮುಖ್ಯವಾಗುತ್ತದೆ.

ಮನೆಯ ಮುಖ್ಯಸ್ಥೆಯ ಸ್ಥಾನದಲ್ಲಿ ಮಹಿಳೆಯ ಹೆಸರು ಕಡ್ಡಾಯವಾಗಿ ಇರಬೇಕು, ಮನೆಯ ಎಲ್ಲಾ ಸದಸ್ಯರ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಕೂಡ ಸರಿಯಾಗಿರಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ನಿಧನರಾಗಿದ್ದರೆ, ಹೆಸರನ್ನು ತೆಗೆದು ಹಾಕಿಸಿರಬೇಕು, ಈ ಎಲ್ಲಾ ಅಪ್ಡೇಟ್ ಆಗಿರಬೇಕು. ಆದರೆ ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಜನರು ಪರದಾಡಬೇಕಾದ ಪರಿಸ್ಥಿತಿ ಬಂದಿದೆ.

ಸರ್ಕಾರ ಇನ್ನು ರೇಷನ್ ಕಾರ್ಡ್ ತಿದ್ದುಪಡಿಗೆ ಅನುಮತಿ ನೀಡಿಲ್ಲ, ಹಾಗಾಗಿ ಜನರು ತಮ್ಮ APL ಮತ್ತು BPL ರೇಶನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ..ಈ ಎಲ್ಲಾ ಮಾಹಿತಿಗಳು ಸರಿಯಾಗಿಲ್ಲ ಎಂದರೆ, ಜನರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗುವದಿಲ್ಲ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗಬೇಕು ಎಂದರೆ, ಮಹಿಳೆಯರ ರೇಷನ್ ಕಾರ್ಡ್ ನಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿರಬೇಕು.

Gruhalakshmi Scheme 2023 karnataka

ಆದರೆ ನಮ್ಮ ರಾಜ್ಯದಲ್ಲಿ ಇನ್ನು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು ಸರ್ಕಾರದ ಅನುಮತಿ ಸಿಕ್ಕಿಲ್ಲ. ಜನರು ಕೂಡ ಇದಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರ ಈಗ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮತ್ತು ತಿದ್ದುಪಡಿ ಮಾಡಿಸುವವರ ಮೇಲೆ ಹೆಚ್ಚು ಗಮನ ಕೊಡುತ್ತಿದೆ. ಯಾಕೆಂದರೆ, ನಮ್ಮ ರಾಜ್ಯದಲ್ಲಿ ಈಗ ಎಷ್ಟು ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಬೇಕಿತ್ತೋ, ಅದಕ್ಕಿಂತ ಹೆಚ್ಚಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ..

ಈ ಕಾರಣದಿಂದ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಹೊಸ BPL ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲು ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇದಿಷ್ಟೆ ಅಲ್ಲದೆ ಇನ್ನು ಹೆಚ್ಚು ಸಮಸ್ಯೆಗಳು ರೇಷನ್ ಕಾರ್ಡ್ ವಿಚಾರದಲ್ಲಿ ನಡೆದಿದೆ, ಕೆಲವು ಜನರಿಗೆ ಅನುಕೂಲ ಇದ್ದರೂ, ಸುಳ್ಳು ದಾಖಲೆ ನೀಡಿ ರೇಶನ್ ಕಾರ್ಡ್ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನು ಕೆಲವು ಜನರು ಸೌಲಭ್ಯ ಜಾಸ್ತಿ ಬೇಕು ಎಂದು, ಒಂದೇ ಅಡ್ರೆಸ್ ಗೆ ಎರಡು ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ..

ಇಂಥ ಉದಾಹರಣೆಗಳು ಕೂಡ ಜಾಸ್ತಿ ಇದ್ದು, ಈ ರೀತಿಯ ಕೇಸ್ ಗಳನ್ನೆಲ್ಲಾ ಚೆಕ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ, ಯಾರೆಲ್ಲಾ ರೇಶನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದಾರೋ ಅವರುಗಳ ಪೈಕಿ ಸುಮಾರು 70% ರೇಷನ್ ಕಾರ್ಡ್ ಗಳನ್ನು ಸರ್ಕಾರ ರಿಜೆಕ್ಟ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ.. ಸುಮಾರು 14 ಲಕ್ಷ APL ಕಾರ್ಡ್ ಬಳಕೆದಾರರು ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರು, ಆದರೆ ಅವರುಗಳ ಪೈಕಿ 53,000 ರೇಷನ್ ಕಾರ್ಡ್ ಗಳು ಮಾತ್ರ ತಿದ್ದುಪಡಿಯಾಗಿ ಜನರನ್ನು ತಲುಪಿದೆ.

ಇನ್ನು BPL ಕಾರ್ಡ್ ಗಳ ಪೈಕಿ, 3.71 ಲಕ್ಷ ರೇಷನ್ ಕಾರ್ಡ್ ಗಳು ತಿದ್ದುಪಡಿಗೆ ಅರ್ಜಿ ಸಲ್ಲಿಸಲಾಗಿತ್ತು, ಅವುಗಳ ಪೈಕಿ 1.27 ಲಕ್ಷ BPL ಕಾರ್ಡ್ ಗಳ ತಿದ್ದುಪಡಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮಾಹಿತಿ ಸಿಕ್ಕಿದೆ. BPL ಕಾರ್ಡ್ ಗಳಲ್ಲಿ ಒಟ್ಟು 93,000 ಅರ್ಜಿಗಳು ತಿರಸ್ಕಾರಗೊಂಡಿವೆ. ಇನ್ನು ಉಳಿದಿರುವ ಅರ್ಜಿಗಳನ್ನು ಚೆಕ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಅವುಗಳ ಕೆಲಸ ಪೂರ್ತಿಯಾಗಲಿದೆ. ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಬಳಿಕ, ರೇಷನ್ ಕಾರ್ಡ್ ತಿದ್ದುಪಡಿ ಕೆಲಸ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

 ಇದನ್ನೂ ಓದಿ ಹೋಮ್ ಲೋನ್ ಪಡೆಯುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್, 9 ಲಕ್ಷದವರೆಗಿನ ಲೋನ್ ಗೆ ಬಡ್ಡಿ ಅವಶ್ಯಕತೆ ಇಲ್ಲ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!