VIsakhapatnam Constable Viral News: ಇತ್ತೀಚಿನ ದಿನಗಳಲ್ಲಿ ಮದುವೆಯಾದ ನಂತರ ಒಳ್ಳೆಯ ಸಂಸಾರ, ಮಕ್ಕಳಿದ್ದು, ಎಲ್ಲವು ಚೆನ್ನಾಗಿದ್ದರು ಕೂಡ, ಅಕ್ರಮ ಸಂಬಂಧ ಶುರು ಮಾಡಿಕೊಂಡು ಅದರಿಂದ ತಮ್ಮ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅದರಿಂದ ತಮ್ಮ ಇಡೀ ಬದುಕನ್ನೇ ನಾಶ ಮಾಡಿಕೊಳ್ಳುತ್ತಾರೆ. ಇಂಥ ಹಲವು ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆ ನಡೆದಿರುವುದು ವಿಶಾಖಪಟ್ಟಣಂ ನಲ್ಲಿ. ಇಲ್ಲಿ ವಾಸ ಮಾಡುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಹೆಂಡತಿ, ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಳು, ಈ ವಿಷಯ ಗಂಡನಿಗೆ ಗೊತ್ತಾದರೆ ಗಂಡನಿಂದ ತನ್ನ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂದುಕೊಂಡ ಮಹಿಳೆ, ಕೊನೆಗೆ ತನ್ನ ಗಂಡನನ್ನೇ ಮುಗಿಸಿಬಿಟ್ಟಿದ್ದಾಳೆ. ಈ ದಾರುಣ ಘಟನೆಯ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ವಿಶಾಖಪಟ್ಟಣದ ಎಂವಿಪಿ ಕಾಲೋನಿಯ ಹತ್ತಿರದ, ಒನ್ ಟೌನ್ ಪೊಲೀಸ್ ಸ್ಟೇಶನ್ ನಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹೆಸರು ರಮೇಶ್. ಇವರು ಬಹಳ ಪ್ರಾಮಾಣಿಕ ಕೆಲಸಗಾರ ಎಂದು ಹೆಸರು ಪಡೆದುಕೊಂಡಿದ್ದರು. ಇದೀಗ ಇವರು ಪತ್ನಿ ಶಿವಜ್ಯೋತಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದ ಕಾರಣದಿಂದ, ರಮೇಶ್ ಮೃತರಾಗಿದ್ದಾರೆ. ಶಿವಜ್ಯೋತಿಗೆ ಹತ್ತಿರದ ಟ್ಯಾಕ್ಸಿ ಡ್ರೈವರ್ ಜೊತೆಗೆ ಅಕ್ರಮ ಸಂಬಂಧ ಇತ್ತು.

VIsakhapatnam Constable Viral News

ಈಕೆ ತನ್ನ ಸಂಬಂಧದ ವಿಚಾರ ಗಂಡನಿಗೆ ಗೊತ್ತಾದರೆ ತೊಂದರೆ ಆಗುತ್ತದೆ, ಈ ಸಂಬಂಧ ಮುಂದುವರೆಸಲು ಆಗುವುದಿಲ್ಲ ಎಂದು ಪ್ಲಾನ್ ಮಾಡಿ, ತನ್ನ ಪ್ರಿಯಕರ ಮತ್ತು ಅವನ ಸ್ನೇಹಿತರ ಸಹಾಯ ಪಡೆದು ತನ್ನ ಗಂಡನನ್ನೇ ಮುಗಿಸುವ ಪ್ಲಾನ್ ಮಾಡುತ್ತಾಳೆ. ಈಕೆಗೆ ಇಬ್ಬರು ಮಕ್ಕಳು ಇರುತ್ತಾರೆ. ಆದರೆ ಅವರ ಬಗ್ಗೆ ಯೋಚನೆ ಮಾಡದೆ, ತನ್ನ ಸ್ವಾರ್ಥದ ಬಗ್ಗೆ ಯೋಚಿಸಿ, ಕೊನೆಗೆ ಗಂಡನನ್ನೇ ಮುಗಿಸಿದ್ದಾಳೆ.

ಗಂಡ ಮಲಗಿದ್ದಾಗ, ದಿಂಬಿನಿಂದ ಒತ್ತಿ ಕೊಲೆ ಮಾಡಿದ್ದು, ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸ್ ಸ್ಟೇಶನ್ ನಲ್ಲಿ ಸಹೋದ್ಯೋಗಿಗಳಿಗೆ ಇದ್ದಕ್ಕಿದ್ದ ಹಾಗೆ ರಮೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ವಿಚಾರ ಗೊತ್ತಾಗಿ ಶಾಕ್ ಆಗಿದ್ದು, ಅವರೆಲ್ಲರೂ ಒಂದು ಸಾರಿ ಪರಿಶೀಲನೆ ನಡೆಸಲು ಬಂದಿದ್ದಾರೆ.

ಗಂಡನ ಸಾವಿನ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂದು ರಮೇಶ್ ಅವರ ಅಂತಿಮ ಕಾರ್ಯಗಳನ್ನು ಕೂಡ ಆದಷ್ಟು ಬೇಗ ಮಾಡಿ ಮುಗಿಸಿದ್ದಾಳೆ. ಪೊಲೀಸರು ಬಂದ ನಂತರ ಅವರ ಬಳಿ ಕೂಡ ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಶಿವಜ್ಯೋತಿ. ಆದರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಆಕೆಗೆ ಅಕ್ರಮ ಸಂಬಂಧ ಇರುವ ವಿಷಯ ಬೆಳಕಿಗೆ ಬಂದಿದ್ದು, ಅದೇ ಕಾರಣಕ್ಕೆ ಗಂಡನನ್ನು ಮುಗಿಸಿದ್ದಾಳೆ ಎನ್ನುವುದು ಕೂಡ ಗೊತ್ತಾಗಿದೆ. ಒಟ್ಟಿನಲ್ಲಿ ಸ್ಥಳೀಯರ ನಡುವೆ ಈ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ.

By AS Naik

Leave a Reply

Your email address will not be published. Required fields are marked *