Gruhalakshmi 2nd installment: ರಾಜ್ಯ ಸರ್ಕಾರದ ಐದು ಶಕ್ತಿ ಯೋಜನೆಗಳಲ್ಲಿ ಗ್ರಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಈಗಾಗಲೇ ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿದೆ. 1.28 ಕೋಟಿ ಅರ್ಜಿ ಸಲ್ಲಿಸಿದವರಲ್ಲಿ 70% ಜನಗಳಿಗೆ ಮಾತ್ರ ಮೊದಲ ಕಂತಿನ ಹಣವು ತಲುಪಿದೆ. ಇನ್ನುಳಿದ ಮಹಿಳೆಯರು ಎಲ್ಲರಿಗೂ ಹಣ ಬಂದಿದೆ, ತಮಗೆ ಇನ್ನು ಬಂದಿಲ್ಲ ಅಂತ ಯೋಚನೆಯಲ್ಲಿದ್ದಾರೆ. ಇನ್ನು ಕೆಲವರು ಸರ್ಕಾರಕ್ಕೆ ಬೈದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಎರಡನೇ ಕಂತಿನ ಹಣವು ಕೂಡ ಬಿಡುಗಡೆಯಾಗುವ ಸಂದರ್ಭ ಬಂದೇಬಿಡ್ತು.
ಸರ್ಕಾರವು 17000 ಕೋಟಿ ಬಜೆಟ್ ಅನ್ನ ವರ್ಷದ ಗ್ರಹಲಕ್ಷ್ಮಿ ಯೋಜನೆಗೆಂದೇ ನಿರ್ಮಿಸಿದೆ. ಆದರೆ ಸಪ್ಟೆಂಬರ್ ತಿಂಗಳಿನ ಹಣದ 4600 ಕೋಟಿ ರೂಪಾಯಿಯನ್ನು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಿದೆ. ಯೋಜನೆ ಜಾರಿಯಾಗಿ ತಿಂಗಳುಗಳು ಕಳೆಯುತ್ತಾ ಬಂದರೂ ಕೂಡ ಇನ್ನು ಕೆಲವರಿಗೆ ಹಣ ಬರೆದ ಕಾರಣ ಅವರು ತುಂಬಾ ಗೊಂದಲದಲ್ಲಿದ್ದಾರೆ. ಕೆಲವರು ಆತಂಕಕ್ಕೆ ಒಳಗಾಗಿದ್ದಾರೆ ಎಲ್ಲರಿಗೂ ಹಣ ಬಂದಿದೆ ನಮಗೆ ಮೊದಲಿನ ಕಂಠಿನ ನಡುವೆ ಬಂದಿಲ್ಲ ಇನ್ನು ಎರಡನೇ ಕಂತು ಬರುವುದೋ ಇಲ್ಲವೋ ಎಂಬ ಒಂದು ಕೌತುಕದಲ್ಲಿದ್ದಾರೆ.
Gruhalakshmi 2nd installment
ಹಾಗಾದರೆ ಹಣ ವಿಳಂಬ ಯಾಕೆ? ಕೆಲವರ ಬ್ಯಾಂಕ್ ಖಾತೆಯಲ್ಲಿ ದೋಷವಿದ್ದು ಅಂದರೆ ಬ್ಯಾಂಕ್ ಖಾತೆಯು ತಾತ್ಕಾಲಿಕವಾಗಿ ಬಂದಾಗಿದ್ದು ಅವರಿಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಕೆಲವೊಂದು ತಾಂತ್ರಿಕ ದೋಷದಿಂದಾಗಿ ಹಣದ ವರ್ಗಾವಣೆ ತಡವಾಗುತ್ತಿದೆ ಅಷ್ಟೇ. ಎಲ್ಲರಿಗೂ ಹಣ ಬಂದೇ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಹೇಳಿದ್ದಾರೆ.
ಪ್ರತಿ ತಿಂಗಳ 26ನೇ ತಾರೀಕಿನಂದು ಗ್ರಹಲಕ್ಷ್ಮಿ ಹಣವು ಎಲ್ಲರ ಖಾತೆಗೆ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಯಾವುದೇ ಆತಂಕಕ್ಕೆ ಈಡಾಗುವ ಅವಶ್ಯಕತೆ ಇಲ್ಲ.
ಯಾರ ಬ್ಯಾಂಕ್ ಖಾತೆಯು ಬಂದಾಗಿದೆಯೋ ಅವರು ಖಾತೆಯನ್ನು ಮೊದಲು ಸರಿ ಮಾಡಿಸಿಕೊಳ್ಳಿ ಆಕ್ಟಿವೇಟ್ ಮಾಡಿಸಿಕೊಳ್ಳಿ. ಉಳಿದವರಿಗೆ ಹಣವು ಸ್ವಲ್ಪ ತಡವಾದರೂ ಕೂಡ ಎರಡನೇ ಕಂತಿನ ಸಮಯದಲ್ಲಿ ಒಟ್ಟಿಗೆ ಮೊದಲಿನ ಕಂತು ಸೇರಿ ನಾಲ್ಕು ಸಾವಿರ ರೂಪಾಯಿಯನ್ನು ವರ್ಗಾವಣೆ ಮಾಡಲಾಗುತ್ತದೆ ಕೆಲವೊಂದು ತಾಂತ್ರಿಕ ದೋಷದಿಂದ ತಡವಾಗಿದೆ ಯಾರು ಕೂಡ ಚಿಂತೆ ಮಾಡುವ ಅಗತ್ಯತೆ ಇಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.