ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಭಾಗ್ಯ, ಗೃಹ ಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಾಜಮನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ. ಕೆಲವರ ಅಕೌಂಟ್’ಗೆ ಹಣ ಜಮಾ ಆಗಿದೆ. ಆದರೆ, ಇನ್ನೂ ಹಲವರ ಅಕೌಂಟ್’ಗೆ ಇನ್ನೂ ಹಣ ಬಂದು ಸೇರಿಲ್ಲ.

ಈ ಗೃಹಲಕ್ಷ್ಮೀಯರ ಅಕೌಂಟಿಗೆ, ಇನ್ನು ಗೃಹಲಕ್ಷ್ಮಿ ಯೋಜನೆಯ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ. ಕಾರಣ ಏನು ಎಂದರೆ ಎನ್.ಪಿ.ಸಿ.ಐ ( NPCI ) ಮ್ಯಾಪಿಂಗ್ ಮಾಡಿಸದೆ ಇದ್ರೆ, ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಅಕೌಂಟ್’ಗೆ ಬರುವುದಿಲ್ಲ ಎಂದು ಸರ್ಕಾರ ಹೇಳಿದೆ. ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಗ್ಗೆ ಸಾಕಷ್ಟು ಹೊಸ ನವೀಕರಣಗಳು ಬರುತ್ತಿವೆ. ಗೃಹಿಣಿಯರು ತಮ್ಮ ಅಕೌಂಟ್’ಗೆ (Bank Account) ಯಾಕೆ ಹಣ ಬರುತ್ತಿಲ್ಲ, ಎನ್ನುವ ಗೊಂದಲದಲ್ಲಿ ಇದ್ದರೆ ಅದಕ್ಕೆ ಕಾರಣಗಳನ್ನು ಸರ್ಕಾರ ನೀಡಿದೆ.

ಅದರೊಂದಿಗೆ ಪರಿಹಾರ ಕೂಡ ಸೂಚಿಸಿದೆ. ಸರ್ಕಾರ ಹೇಳಿದ ರೀತಿಯಲ್ಲಿ ಮಹಿಳೆಯರು ಅವರ ಬ್ಯಾಂಕ್ ಅಕೌಂಟ್’ನಲ್ಲಿ ಇರುವ ತೊಂದರೆಗಳನ್ನು ಪರಿಹಾರ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ಯಾವುದೇ ಚಿಂತೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ₹2,000 ರೂಪಾಯಿ ಮಹಿಳೆಯರ ಅಕೌಂಟ್’ಗೆ ಬಂದು ಸೇರುತ್ತದೆ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ₹1.10 ಕೋಟಿ ಜನರ ಅರ್ಜಿಗಳಲ್ಲಿ ಕ್ರಮೇಣ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದು ಸೇರಿದೆ. ಆದರೆ, ಒಂದು ಅಂಕಿ ಅಂಶಗಳ ಪ್ರಕಾರ ಇನ್ನು, ಶೇಕಡ 10ರಷ್ಟು ಮಹಿಳೆಯರ ಅಕೌಂಟ್’ಗೆ ಹಣ ಬರದೆ ಬಾಕಿ ಉಳಿದಿದೆ. ಸುಮಾರು ₹8.4 ಲಕ್ಷ ಗೃಹಿಣಿಯರ ಅಕೌಂಟ್’ನಲ್ಲಿ ಇರುವ ತೊಂದರೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮೆ ಆಗಿಲ್ಲ. NPCI mapping ಕಡ್ಡಾಯ. ಈಗಾಗಲೇ ಮಹಿಳೆಯರು ಅವರ ಬ್ಯಾಂಕ್ ಅಕೌಂಟ್’ಗೆ E-KYC ಅಪ್ಡೇಟ್ ಮಾಡಿಸಿಕೊಂಡಿದ್ದರೆ, ಅವರ ಅಕೌಂಟ್’ಗೆ ಹಣ ಜಮಾ ಆಗುತ್ತಿದ್ದರೆ. ಈ ರೀತಿಯ ಸಂದರ್ಭದಲ್ಲಿ ಎನ್.‌ಪಿ.ಸಿ.ಐ ( NPCI ) ಮ್ಯಾಪಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.

ಆದರೆ, ಹಿಂದಿನ ಹಲವು ಕಂತಿನ ಹಣ ಮಹಿಳೆಯರ ಅಕೌಂಟ್’ಗೆ ಬಂದಿಲ್ಲ ಎನ್ನುವುದಾದರೆ ಆ ರೀತಿಯ ಸಂದರ್ಭದಲ್ಲಿ, NPCI mapping ಕಡ್ಡಾಯವಾಗಿದೆ. National payment Corporation of India ಯುಪಿಐ ಪೇಮೆಂಟ್ ಅನ್ನು ನಿಯಂತ್ರಣ ಮಾಡುವ ಕಾರಣ, ಇಂದು ಡಿಜಿಟಲ್ ಹಣ ವರ್ಗಾವಣೆಗೆ NPCI ಎನ್ನುವುದು ಕಡ್ಡಾಯವಾಗಿದೆ. ಮಹಿಳೆಯರ ಅಕೌಂಟ್’ಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಎಂದರೆ ಅದಕ್ಕೆ ತಕ್ಷಣ ಬ್ಯಾಂಕ್ ಗೆ ಹೋಗಿ NPCI ಮ್ಯಾಪಿಂಗ್ ಮಾಡಿಕೊಡುವಂತೆ ಅಲ್ಲಿನ ಸಿಬ್ಬಂದಿಗಳ ಬಳಿ ಕೇಳಿ ಮಾಡಿಸಿಕೊಳ್ಳಬೇಕು.

ಇನ್ನೊಂದು, ಪರಿಹಾರ ಕೂಡ ಇದೆ ಬ್ಯಾಂಕ್ ಅಕೌಂಟ್’ಗೆ ಎನ್.ಪಿ.ಸಿ.ಐ ( NPCI ) ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ, ಇದರೊಂದಿಗೆ ಅವರ ಅಕೌಂಟ್’ಗೆ ಬೇರೆ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎನ್ನುವುದು ಅವರಿಗೆ ತಿಳಿಯದೆ ಹೋದರೆ ಹತ್ತಿರದ ಕಛೇರಿಗೆ ಭೇಟಿ ನೀಡಿ ಅವರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಮೇಲೆ ಸಿಕ್ಕಿರುವ ಸ್ವೀಕೃತಿ ಪ್ರತಿ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀಡಿ ಅವರ ಅಕೌಂಟ್’ಗೆ ಹಣ ಬಾರದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಿ.

ಅಷ್ಟೇ ಅಲ್ಲದೆ ಈ, ಅಧಿಕಾರಿಗಳು ಮಹಿಳೆಯರಿಗೆ ಸೂಕ್ತ ಪರಿಹಾರವನ್ನು ಸಹ ಸೂಚಿಸುತ್ತಾರೆ. ಅದರಿಂದ, ಮಹಿಳೆಯರು ಅವರ ಮುಂದಿನ ಕಂತಿನ ಅಂದರೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಾರ್ಚ್ 15ರಿಂದ ಗೃಹಲಕ್ಷ್ಮಿಯ 7ನೇ ಕಂತಿನ ಹಣ ಫಲಾನುಭವಿಗಳ ಅಕೌಂಟ್’ಗೆ ವರ್ಗಾವಣೆ ಆಗುತ್ತದೆ. ಒಟ್ಟಿನಲ್ಲಿ ಮಹಿಳೆಯರ ಅಕೌಂಟ್’ಗೆ ಈ ಹಿಂದಿನ ಕಂತಿನ ಹಣ ಬಾರದೆ ಇದ್ದರೆ ಮೇಲೆ ತಿಳಿಸಿರುವ ಕೆಲಸಗಳನ್ನು ಮಾಡಿಕೊಂಡರೆ 7ನೇ ಕಂತಿನ ಹಣ ತಪ್ಪದೆ ಮಹಿಳೆಯರ ಅಕೌಂಟ್’ಗೆ ಡಿಬಿಟಿ ಆಗುತ್ತದೆ.

Leave a Reply

Your email address will not be published. Required fields are marked *