Ground nuts benefits for health: ಮಾಂಸಾಹಾರವು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಮಾಂಸಾಹಾರಿಗಳಿಗೆ ಈಗ ನಿರಾಸೆಯಾಗಿದೆ. ಕೋವಿಡ್-19 ಕಾರಣದಿಂದ ಮಾಂಸವನ್ನು ತರಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ತಂದರೂ ತಿನ್ನಲು ಭಯ. ಮಾಂಸವು ಪ್ರೋಟೀನ್, ಫ್ಯಾಟ್ ಹಾಗೂ ನ್ಯುಟ್ರಿಯೆಂಟ್ಸ್, ವಿಟಮಿನ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಆದರೆ ಮಾಂಸ ಕೊಡುವ ಶಕ್ತಿಗಿಂತ ಕೆಲವು ವಸ್ತುಗಳಿವೆ. ಅದರಲ್ಲಿ ಒಂದು ವಸ್ತುವಿನ ಬಗೆಗೆ ಇಲ್ಲಿ ತಿಳಿಯೋಣ.

ಮಾಂಸ ನೀಡುವಷ್ಟೆ ಶಕ್ತಿಯನ್ನು ಕಾಳುಗಳಲ್ಲೆ ಉತ್ತಮ ಆಹಾರ ಎಂದು ಕರೆಯಲ್ಪಡುವ ಶೇಂಗಾ ನೀಡುತ್ತದೆ. ಬಾದಾಮಿ, ಗೋಡಂಬಿ, ಪಿಸ್ತಾ ಇವೆಲ್ಲವೂಗಳಿಗಿಂತ ಶೇಂಗಾ ಉತ್ತಮ ಆಹಾರ, ನ್ಯುಟ್ರಿಯೆಂಟ್ಸ್ ಹೊಂದಿದೆ ಎಂದು ಹೇಳಲಾಗಿದೆ. ಹಾಗಾದರೆ ಶೇಂಗಾ ಹೇಗೆ ಎಷ್ಟು ಯಾವ ಸಮಯದಲ್ಲಿ ತಿಂದಾಗ ಆರೋಗ್ಯಕ್ಕೆ ಒಳ್ಳೆಯದು ಎಂದು ನೋಡೊಣ. ಶೇಂಗಾವನ್ನು ಹುರಿದು, ಬೇಯಿಸಿ ಆಹಾರದಲ್ಲಿ ಬಳಸುತ್ತೇವೆ. ಒಂದು ಹಿಡಿಯಷ್ಟು ಶೇಂಗಾ ಬೀಜವನ್ನು ತೆಗೆದುಕೊಂಡು ಒಂದು ಬೌಲ್ ನಲ್ಲಿ ಶೇಂಗಾ ಕಾಳು ಮುಳುಗುವಷ್ಟು ನೀರು ಹಾಕಬೇಕು. ರಾತ್ರಿ ಪೂರ್ತಿಯಾಗಿ ನೆನೆಸಿಡಬೇಕು. ಗ್ಯಾಸ್, ಅಸಿಡಿಟಿ ಕಡಿಮೆ ಮಾಡುತ್ತದೆ ಈ ರೀತಿಯಲ್ಲಿ ನೆನೆಸಿಟ್ಟ ಶೇಂಗಾ. ಹೃದಯದ ಸಮಸ್ಯೆಗೆ ಉತ್ತಮವಾಗಿದೆ ನೆನೆಸಿದ ಶೇಂಗಾ. ಶೇಂಗಾದ ಮೂಲಕ ತೂಕ ಇಳಿಸಿಕೊಳ್ಳಬಹುದು, ತೂಕ ಹೆಚ್ಚಿಸಿಕೊಳ್ಳಬಹುದು. ಶೇಂಗಾ ಒಂದೆ ಅಲ್ಲದೆ ಶೇಂಗಾ ಎಣ್ಣೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನೆಸಿದ ಶೇಂಗಾವನ್ನು ಮೂರು ಹೊತ್ತು ಊಟದ ನಂತರ ಸಮ ಪ್ರಮಾಣದಲ್ಲಿ ಸ್ವಲ್ಪ ತಿನ್ನುತ್ತಾ ಬಂದರೆ ತೂಕ ಹೆಚ್ಚಳವಾಗುತ್ತದೆ.

ಬೆಳಿಗ್ಗೆ ನೆನೆಸಿದ ಶೇಂಗಾವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಹೊಟ್ಟ ತುಂಬಿದ ಅನುಭವವಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ತಿಂಡಿ ತಿನ್ನುವುದಿಲ್ಲ ಇದೇ ರೀತಿಯಲ್ಲಿ ಪಾಲಿಸೊಕೊಂಡು ಬಂದರೆ ತೂಕ ಕಡಿಮೆ ಆಗುವುದು. ಡಯಾಬಿಟಿಸ್ ಇರುವವರಿಗೆ ನೆನೆಸಿದ ಶೇಂಗಾ ತುಂಬಾ ಸಹಕಾರಿ. ಏಕೆಂದರೆ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ನೆಬೆಸಿದ ಶೆಂಗಾ. ಶೇಂಗಾ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಕೂದಲಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಹೆಚ್ಚಿನ ಬಲವು ನೆನೆಸಿದ ಶೇಂಗಾದ ಜೊತೆಗೆ ಸಣ್ಣ ಪ್ರಮಾಣದ ಬೆಲ್ಲದ ಜೊತೆ ತಿನ್ನುವುದರಿಂದ ಸಿಗುತ್ತದೆ ಹಾಗೂ ಮಕ್ಕಳು ಸರಿಯಾಗದೆ ತಿನ್ನದೆ ಇದ್ದು ಹಸಿವು ಎಂದಾಗ ನೀಡಿದರೆ ಉತ್ತಮ. ಮಧುಮೇಹ ಸಮಸ್ಯೆ ಇದ್ದವರೂ ಬೆಲ್ಲ ತಿನ್ನದೆ ನೆನೆಸಿದ ಶೇಂಗಾ ಮಾತ್ರವೇ ಸೇವಿಸಬೇಕು. ನೆನೆಸಿದ ಶೇಂಗಾವು ಮುಖದಲ್ಲಿನ ರಿಂಕಲ್ಸ್, ಫೈನ್ ಲೈನ್ಸ್ ಗಳು ಕಡಿಮೆಯಾಗಿಸುತ್ತದೆ ಹಾಗೂ ತ್ವಚೆಗೆ ಉತ್ತಮವಾಗಿದೆ. ಹೀಗೆ ಪ್ರತಿನಿತ್ಯ ತಿನ್ನುವುದು ಉತ್ತಮ, ಆಗದಿದ್ದಲ್ಲಿ ವಾರದಲ್ಲಿ ಎರಡು ದಿನ ತಿನ್ನಬಹುದು.

ನಾವೂ ದಿನನಿತ್ಯ ಉಪಯೋಗಿಸುವ ಕೆಲವು ವಸ್ತುಗಳು ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ. ಆದರೆ ಅದನ್ನು ಬಳಸುವ ವಿಧಾನಗಳ ಅರಿವು ನಮಗಿರುವುದಿಲ್ಲ. ಈ ಮಾಹಿತಿಯಿಂದ ಶೇಂಗಾದ ಕೆಲವು ಉತ್ತಮ ಔಷಧೀಯ ಗುಣಗಳನ್ನು ತಿಳಿದುಕೊಂಡಂತಾಯಿತು. ಇದನ್ನು ಬಳಸಿಕೊಂಡು ನಮ್ಮ ಆರೋಗ್ಯ ಕಾಪಾಡೊಕೊಳ್ಳೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!