ಪಂಚಾಯತ್‍ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಅಧ್ಯಕ್ಷೆ ಪಟ್ಟ ಒಲಿದು ಬಂದಿದೆ. ಈ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆಗೆ ಏರಬಹುದು ಎಂಬುದಕ್ಕೆ ಕೊಲ್ಲಂ ಜಿಲ್ಲೆಯ ಪಥನಪುರಂ ಬ್ಲಾಕ್ ಸಾಕ್ಷಿಯಾಗಿದೆ. ಸುಮಾರು 10 ವರ್ಷಗಳಿಂದ ಪಂಚಾಯತ್ ಕಚೇರಿಯಲ್ಲಿ ಮಹಡಿಗಳನ್ನು ಮತ್ತು ಧೂಳಿನಿಂದ ಕೂಡಿದ ಕುರ್ಚಿಗಳನ್ನು ಒರೆಸುತ್ತಿದ್ದ ಆನಂದವಲ್ಲಿ ಎಂಬ ಹೆಸರಿನ ನಲವತ್ತರು ವರ್ಷ ವಯಸ್ಸಿನ ಮಹಿಳೆ ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂನಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರ ಕುರ್ಚಿಯಲ್ಲಿ ಕೂರುವ ತನಕ ತಲುಪಿದ್ದಾರೆ. ತಾನು ಧೂಳು ಒರೆಸಲು ಮಾತ್ರ ಮುಟ್ಟಿದ್ದ ಕುರ್ಚಿಯಲ್ಲಿ ಈಗ ಅದೇ ಕುರ್ಚಿಯಲ್ಲಿ ಕೂರುವ ಮಟ್ಟಕ್ಕೆ ತಲುಪಿದ್ದಾರೆ ಈಕೆ.

ಪಂಚಾಯತ್‍ನಲ್ಲಿ ಕಸ ಗುಡಿಸುವ ಅರೆಕಾಲಿಕ ಹುದ್ದೆಗೆ ಆನಂದವಲ್ಲಿ 2011ರಲ್ಲಿ ನೇಮಕಗೊಂಡಿದ್ದರು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅವರು ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ದಲಿತ ಮಹಿಳೆ ಸುಮಾರು ಒಂದು ದಶಕದಿಂದ ಅದೇ ಪಂಚಾಯತ್ ಕಚೇರಿಯಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಪಂಚಾಯತ್ ಅಧ್ಯಕ್ಷೆಯಾಗಿ ನೇಕಮಗೊಂಡು ಸುದ್ದಿಯಲ್ಲಿದ್ದಾರೆ.

ಪಂಚಾಯತ್ ಅಧ್ಯಕ್ಷೆ ಹುದ್ದೆಗೆ ಏರುತ್ತೇನೆ ಎಂಬ ವಿಶ್ವಾಸ ಇರಲಿಲ್ಲ. ಕಸ ಗುಡಿಸುವ ಅರೆಕಾಲಿಕ ಕೆಲಸವನ್ನು ಪಂಚಾಯತ್‍ನಲ್ಲಿ ಮಾಡುವಾಗ ಕಚೇರಿಯಲ್ಲಿ ಇರುತ್ತಿದ್ದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖುಷಿಯನ್ನು ಆನಂದವಲ್ಲಿ ಹಂಚಿಕೊಂಡಿದ್ದಾರೆ. ಆನಂದವಲ್ಲಿ ಅವರು ಪಂಚಾಯತ್ ಕಾರ್ಯ ವೈಖರಿಯ ಕುರಿತಾಗಿ ತಿಳಿದುಕೊಳ್ಳುತ್ತಿದ್ದಾರೆ. ಕಸ ಗುಡಿಸುವ ಕೆಲಸ ಮಾಡುವಾಗ ಚಹಾ, ನೀರು ಪೂರೈಕೆ ಮತ್ತು ಇನ್ನಿತರ ಕೆಲಸವನ್ನು ಮಾಡುತ್ತಿದ್ದರು. ಸಭೆ ನಡೆಸುವ ವೇಳೆ ಅಲ್ಲಿ ಚರ್ಚೆಯಾಗುವ ಕೆಲವು ವಿಷಯಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಇನ್ನೂ ಹೆಚ್ಚಿನದಾಗಿ ತಿಳಿದು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಪಕ್ಷ ಮಾತ್ರ ಕಸ ಗುಡಿಸುವಂತಹ ಕೆಲಸಗಳನ್ನು ಮಾಡಬಹುದು. ನಾನು ಅದಕ್ಕೆ ನಿಜವಾಗಿಯೂ ಋಣಿಯಾಗಿದ್ದೇನೆ. ಬ್ಲಾಕ್ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದಾಗ ಭಾವುಕರಾವಗಿ ಕಣ್ಣೀರನ್ನು ನಿಯಂತ್ರಿಸುವ ವಿಫಲ ಪ್ರಯತ್ನ ಮಾಡಿದ್ದಾರೆ ಈಕೆ. ಕಮ್ಯುನಿಸ್ಟ್ ಬೆಂಬಲಿಸುವ ಕುಟುಂಬದಿಂದ ಬಂದ ಈಕೆ ಶಾಲೆಯಿಂದ ಹೊರಗುಳಿದಿದ್ದರು. ವೃತ್ತಿಯಲ್ಲಿ ವರ್ಣಚಿತ್ರಕಾರರಾಗಿದ್ದ ಅವರ ಪತಿ ಸಹ ಸಕ್ರಿಯ ಸಿಪಿಐ (ಎಂ) ಕೆಲಸಗಾರ. ಅವರು 2011 ರಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಸೇರಿಕೊಂಡರು. ಸಂಬಳ ತಿಂಗಳಿಗೆ 2,000 ರೂ., ಆದರೆ ಈಗ ಅವರು 6,000 ರೂ. ಹೊಸ ಹುದ್ದೆ ವಹಿಸಿಕೊಂಡ ನಂತರ, ಅವರು ತಾತ್ಕಾಲಿಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪಿಯುಸಿವರೆಗೆ ಶಿಕ್ಷಣವನ್ನು ಮುಗಿಸಿದ್ದಾರೆ. 2011 ಕ್ಕೆ ಪಂಚಾಯತ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಇದೀಗ ಪಂಚಾತಯ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!