ಶಂಖ ನೋಡಲು ಬಿಳಿಯ ಬಣ್ಣ ಹೊಂದಿ ಬಹಳ ಸುಂದರವಾಗಿ ಇರುತ್ತದೆ. ಇದನ್ನು ಶ್ರೇಷ್ಠ ಕ್ಷೇತ್ರಗಳಿಗೆ ಹೋದಾಗ ತರಲಾಗುತ್ತದೆ. ಹಾಗೆಯೇ ಎಲ್ಲಾ ಶಂಖಗಳಿಂದ ಒಳ್ಳೆಯ ಶಬ್ದ ಬರುವುದಿಲ್ಲ. ಕೆಲವೊಂದು ಶಂಖಗಳು ಮಾತ್ರ ಓಂ ಎಂಬ ಸ್ವರವನ್ನು ಹೊರ ಸೂಸುತ್ತವೆ. ಆದ್ದರಿಂದ ನಾವು ಇಲ್ಲಿಶಂಖದ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಪೂಜೆ ಸಮಾರಂಭಗಳಲ್ಲಿ, ಭಜನೆ ಕೀರ್ತನೆಗಳನ್ನು ಮಾಡುವಾಗ ಶಂಖವನ್ನು ಊದಲಾಗುತ್ತದೆ. ಕೆಲವು ಕಡೆ ಪೂಜೆ ಶುರುವಾಗುವ ಮೊದಲು ಮೂರು ಬಾರಿ ಶಂಖವನ್ನು ಉದುತ್ತಾರೆ. ಇದರಿಂದ ವಾತಾವರಣ ಅಶುದ್ಧಿಯಾಗುತ್ತಿದ್ದರೆ ಶುದ್ಧವಾಗುತ್ತದೆ. ಸಕಾರಾತ್ಮಕ ಶಕ್ತಿ ಬೆಳೆದು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ದೇವತೆಗಳು ಮತ್ತು ರಾಕ್ಷಸರ ನಡುವೆ ಸಮುದ್ರ ಮಂಥನ ನಡೆದಿತ್ತು. ಆಗ ಹದಿನಾಲ್ಕು ರತ್ನಗಳು ಹೊರಬಂದಿದ್ದವು. ಅವುಗಳಲ್ಲಿ ಶಂಖ ಕೂಡ ಒಂದು.
ಧಾರ್ಮಿಕವಾಗಿ ಹಾಗೂ ಆರೋಗ್ಯದ ವಿಚಾರಕ್ಕೆ ಹೋದರೆ ಶಂಖಕ್ಕೆ ಬಹಳ ಮಹತ್ವವಿದೆ. ಶಂಖವನ್ನು ದಿನಾಲೂ ಉದುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ. ಹಾಗೆಯೇ ರಾತ್ರಿ ಮಲಗುವ ಮುನ್ನ ಶಂಖದಲ್ಲಿ ಗಂಗಾಜಲವಿಟ್ಟು ಬೆಳಿಗ್ಗೆ ಆ ನೀರು ಕುಡಿದರೆ ಕ್ಯಾಲ್ಶಿಯಂ ಕೊರತೆ ಕಡಿಮೆಯಾಗುತ್ತದೆ. ಸೂರ್ಯ ಗ್ರಹದ ದೋಷವುಳ್ಳವರು ಸೂರ್ಯೋದಯದ ಹೊತ್ತಿಗೆ ಶಂಖದಿಂದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು. ಹಾಗೆಯೇ ಚಂದ್ರ ಗ್ರಹದ ದೋಷವುಳ್ಳವರು ಶಂಖಕ್ಕೆ ಹಸಿ ಹಾಲನ್ನು ಹಾಕಿ ಸೋಮವಾರ ಶಿವಲಿಂಗಕ್ಕೆ ಅರ್ಪಿಸಬೇಕು.
ಶಂಖದ ಭಸ್ನವನ್ನು ಹೃದಯಾಘಾತ, ರಕ್ತದೊತ್ತಡ, ಅಸ್ತಮಾ, ಮೆದುಳು, ನರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ನಮ್ಮ ಆಯುರ್ವೇದ ಹೇಳುತ್ತದೆ. ಶಂಖ ಊದುವುದರಿಂದ ಶ್ವಾಸಕೋಶ ಅತ್ಯಂತ ಬಲ ಆಗುತ್ತದೆ. ಶುದ್ಧವಾದ ಆಮ್ಲಜನಕ ಒಳಗೆ ಸೇರುವುದರಿಂದ ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತದೆ. ದಕ್ಷಿಣ ಮುಖದ ಶಂಖದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ. ಆದ್ದರಿಂದ ಉತ್ತರ ಮತ್ತು ಪೂರ್ವದಲ್ಲಿ ಶಂಖವನ್ನು ಇಟ್ಟರೆ ಧನಲಾಭ ಮತ್ತು ಸುಖ ಸಮೃದ್ಧಿ ಆಗುತ್ತದೆ. ದಕ್ಷಿಣ ಮುಖದ ಶಂಖಕ್ಕೆ ನೀರನ್ನು ಹಾಕಿ ಪೂಜೆ ಮಾಡಿ ಅಮಾವಾಸ್ಯೆ ಹಾಗೂ ಶನಿವಾರ ತರ್ಪಣ ಬಿಡಬೇಕು. ಇದರಿಂದ ಪಿತೃದೋಷ ದೂರವಾಗುತ್ತದೆ.