ಡ್ರ್ಯಾಗನ್ ಹಣ್ಣು ಹೆಚ್ಚಿನವ್ರಿಗೆ ಇದರ ಪರಿಚಯ ಇರುವುದಿಲ್ಲ ಯಾಕಂದ್ರೆ ಕನ್ನಡಿಗರಿಗೆ ತಿಳಿದಿರುವ ಪ್ರಾದೇಶಿಕ ಹಣ್ಣು ಇದಲ್ಲ ಇದೊಂದು ವಿಶೇಷ ಹಣ್ಣು ನಮ್ಮಲ್ಲಿ ಬೆಳೆಯುವುದು ಕಡಿಮೆ ಮರುಭೂಮಿಯಂತ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು ಇದಾಗಿದೆ ಅಮೇರಿಕಾ ಮೆಕ್ಸಿಕೋದ ಮರುಭೂಮಿಗಳಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ
ವಿದೇಶದ ಈ ಹಣ್ಣು ಇತ್ತೀಚೆಗೆ ಬೆಂಗಳೂರಿನ ಮಾರ್ಕೆಟ್ಗಳಲ್ಲೂ ಲಭ್ಯವಿದೆ ಮಾಲ್ಗಳಲ್ಲಿ ಈ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಭಾರತದವ್ರಿಗೆ ಇದು ದುಬಾರಿ ಹಣ್ಣೇ ಸರಿ ದುಬಾರಿ ಆದ್ರೆ ಏನಂತೆ ಈ ಹಣ್ಣಿನ ಮಹತ್ವ ಅಪರಿಮಿತ ಹಾಗಾದ್ರೆನಾವು ಈ ಲೇಖನ ದ ಮೂಲಕ ಡ್ರಾಗನ್ ಹಣ್ಣಿನ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ.
ಈ ಹಣ್ಣನ್ನು ನೋಡಲು ಮುಳ್ಳು ಮುಳ್ಳಿನಂತೆ ಇರುತ್ತದೆ ಒಳಗಡೆಯ ತಿರುಳನ್ನು ತಿನ್ನಬೇಕು ಹಣ್ಣನ್ನ ಎರಡು ಭಾಗ ಮಾಡಿದ್ರೆ ಒಳಗಡೆಯ ತಿರುಳು ನೋಡೋಕೆ ತುಂಬಾ ಚೆನ್ನಾಗಿ ಕಾಣಿಸುತ್ತದೆ ಈ ಬೆಳೆಯು ಒಂದು ಕಡಿಮೆ ಖರ್ಚಿ ಮತ್ತು ಹೆಚ್ಚು ಆದಾಯ ಗಳಿಸುವ ಬೆಳೆ ಇದಾಗಿದೆ
ಹಾಗೆ ಹತ್ತು ಗುಂಟೆ ಗೆ ಸುಮಾರು ಎರಡು ಲಕ್ಷ ದಷ್ಟು ಆದಾಯವನ್ನು ಗಳಿಸಬಹುದು ಹಾಗೆ ಒಂದು ಎಕರೆ ಭೂಮಿಯಲ್ಲಿ ಸುಮಾರು ಎಂಟು ಲಕ್ಷ ದಷ್ಟು ಆದಾಯವನ್ನು ಗಳಿಸಬಹುದು ಎಂಬುದನ್ನು ಹಾವೇರಿ ಜಿಲ್ಲೆ ಬಸಪ್ಪ ಬಲ್ಲಾರಿಯವರು ತಿಳಿಸಿಕೊಡುತ್ತಾರೆ
ಹಾಗೆ ಅವರು ಅಧಿಕ ಇಳುವರಿ ಪಡೆಯುವ ಬೆಳೆ ಇದಾಗಿದೆ ಅವರು ಹನ್ನೆರಡು ಗಂಟೆಯಲ್ಲಿ ಡ್ರ್ಯಾಗನ್ ಹಣ್ಣ ನ್ನು ಬೆಳೆದಿದ್ದಾರೆ ಹೆನ್ನೆರದು ಗಂಟೆಗೆ ಎಂಟು ನೂರು ಗಿಡಗಳಿರುತ್ತದೆ ಅಷ್ಟೇ ಅಲ್ಲದೆ ಡ್ರ್ಯಾಗನ್ ಫ್ರೂಟ್ ಗಿಡಕ್ಕೆ ಒಂದು ಕಲ್ಲಿನ ಕಂಬವನ್ನ ಸಪೋರ್ಟ್ ಗೆ ನಿಲ್ಲಿಸಲಾಗುತ್ತದೆ ಸಾಮಾನ್ಯವಾಗಿ ಗಿಡ ಬೆಳೆಯಲು ನಾಲ್ಕು ಗಿಡಕ್ಕೆ ಒಂದು ಕಲ್ಲಿನ ಕಂಬ ಮತ್ತು ಒಂದು ರಿಂಗು ಗೊಬ್ಬರ ಎಲ್ಲ ಸೇರಿ ಸುಮಾರು ನಾಲ್ಕು ನೂರಾ ಐವತ್ತು ರೂಪಾಯಿ ಖರ್ಚು ಬರುತ್ತದೆ ಹಾಗೂ ಇದರಿಂದ ಹದಿನೆಂಟು ತಿಂಗಳಿಗೆ ಬೆಳೆ ಬರುತ್ತದೆ.
ಮೊದಲು ಗಿಡದಲ್ಲಿ ಹದಿನೈದು ಹಣ್ಣುಗಳಾಗುತ್ತದೆ ಒಂದು ಹಣ್ಣು ಎಪ್ಪತ್ತು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎರಡನೇ ವರ್ಷದಲ್ಲಿ ಒಂದು ಕಂಬದಲ್ಲಿ ಸುಮಾರು ಮೂವತ್ತು ಹಣ್ಣು ಗಳಾಗುತ್ತದೆ ರೀತಿಯಿಂದ ರೈತರಿಗೆ ನಷ್ಟ ಅನುಭವಿಸುವ ಸಾಧ್ಯತೆ ಇರುವುದಿಲ್ಲ ಈ ಗಿಡಕ್ಕೆ ಯಾವುದೇ ರೋಗವು ಬರುವುದಿಲ್ಲ ಹಾಗೆಯೇ ನೀರು ಹೆಚ್ಚಾದರೆ ಮಾತ್ರ ಗಿಡ ಕೊಳೆಯುತ್ತದೆ ಆಗ ಮಾತ್ರ ನಷ್ಟ ವಾಗುತ್ತದೆ ಅಷ್ಟೆ ಹಾಗೂ ಭೂಮಿಯಿಂದ ಒಂದೂವರೆ ಫುಟ್ ಮಣ್ಣನ್ನು ಏರಿಸಿ ಡ್ರಿಪ್ ಮಾಡಬೇಕು
ವಾರಕ್ಕೆ ಮೂರರಿಂದ ನಾಲ್ಕು ಲೀಟರ್ ನೀರುಬೇಕು ಹೆಚ್ಚು ಬಿಸಿಲು ಬೇಕಾಗುತ್ತದೆ ಅದರಲ್ಲಿ ಪಿಂಕ್ ಬಣ್ಣದ ಡ್ರ್ಯಾಗನ್ ಫ್ರೂಟ್ ಒಂದು ಗಿಡ ಮೂವತ್ತು ಹಣ್ಣು ಕೊಟ್ರೆ ಬಿಳಿ ಡ್ರ್ಯಾಗನ್ ಫ್ರೂಟ್ ಗಿಡ ನಲವತ್ತು ಹಣ್ಣು ಕೊಡುತ್ತದೆ ಆದರೆ ಹೆಚ್ಚು ಪಿಂಕ್ ಬಣ್ಣದ ಡ್ರ್ಯಾಗನ್ ಫ್ರೂಟ್ ಹಣ್ಣು ನೋಡಲು ತುಂಬಾ ಸುಂದರವಾಗಿ ಕಾಣುವವುದರಿಂದ ಹೆಚ್ಚು ಮಾರಾಟ ವಾಗುತ್ತದೆ ಈ ಹಣ್ಣಿನಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಹಾಗೆ ಕ್ಯಾನ್ಸರ್ ರೋಗ ನಿವಾರಣೆ ಮಾಡುವಂತ ಶಕ್ತಿಯಿದೆ
ಮೊದಲ ಹಂತದಲ್ಲಿ ಸ್ವಲ್ಪ ಖರ್ಚು ಕಂಡು ಬಂದರೂ ಸಹ ಆದಾಯವು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹಾಗೆ ಡ್ರ್ಯಾಗನ್ ಫ್ರೂಟ್ ಸಸಿಯನ್ನು ನಲವತ್ತು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಸಸಿ ನೆಟ್ಟು ಇಪ್ಪತೈದು ದಿನದ ಒಳಗೆ ಬೇರು ಬಿಡುತ್ತದೆ ಒಂದೊಂದು ಮೊಳದಷ್ಟು ಬೆಳೆಯಲು ಮೂರು ತಿಂಗಳ ಕಾಲ ಬೇಕಾಗುತ್ತದೆ Video Credit For Lingaraj Vlogger
ಸಾವಯುವ ಗೊಬ್ಬರವನ್ನು ಹಾಕಬೇಕುಡ್ರ್ಯಾಗನ್ ಫ್ರೂಟ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುತ್ತೆ. ದೇಹ ತೂಕ ಇಳಿಸಬೇಕು ಅಂದುಕೊಂಡಿರುವವರಿಗೆ ಡಯಟ್ ಮಾಡಲು ಹೇಳಿ ಮಾಡಿಸಿದ ಹಣ್ಣಿದು ಅಷ್ಟೇ ಅಲ್ಲ ಆರೋಗ್ಯಯುತವಾಗಿ ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿ ಅದೇ ಕಾರಣಕ್ಕೆ ಚೆರ್ರಿ ಹಣ್ಣಿಗಿಂತ ಇದು ಬೆಟರ್ ಆಗಿರುವ ಹಣ್ಣು .