ಒಂದು ದಿನ ಗೌತಮ ಬುದ್ಧ ತನ್ನ ಶಿಷ್ಯರೊಂದಿಗೆ ಕಾಲ ಕಳೆಯುತ್ತಾ ಇರಬೇಕಾದರೆ ಅಲ್ಲಿಗೆ ಒಬ್ಬ ವ್ಯಕ್ತಿ ಓಡಿ ಬಂದು ಗೌತಮ ಬುದ್ಧರ ಕಾಲಿಗೆ ಬಿದ್ದು ತುಂಬಾ ದುಃಖದಲ್ಲಿ ಅಳುತ್ತಿರುತ್ತಾನೆ. ಆಗ ಗೌತಮ ಬುದ್ಧ ವ್ಯಕ್ತಿಯನ್ನು ಎದ್ದೇಳು ಸಮಾಧಾನ ಮಾಡಿಕೋ ಎಂದು ಈ ರೀತಿಯಾಗಿ ಸಮಾಧಾನಪಡಿಸಿ ಏನಾಯ್ತು ಯಾತಕ್ಕಾಗಿ ಇಷ್ಟೊಂದು ಬಾಧೆ ಪಡುತ್ತಿರುವೆ, ನಿನ್ನ ಸಮಸ್ಯೆ ಏನು ಎಂದು ವ್ಯಕ್ತಿಯನ್ನು ಕೇಳುತ್ತಾರೆ ಆಗ ವ್ಯಕ್ತಿ ದುಃಖದಿಂದ ಏನೆಂದು ಹೇಳಲಿ ಸ್ವಾಮಿ ನನ್ನ ಮನಸ್ಸಿಗೆ ಸ್ವಲ್ಪವೂ ಸಮಾಧಾನವಿಲ್ಲ, ಸ್ವಲ್ಪವೂ ನೆಮ್ಮದಿ ಇಲ್ಲ, ಸ್ವಲ್ಪವೂ ಸಂತೋಷವೇ ಇಲ್. ಜೀವನಪೂರ್ತಿ ಬರೀ ಯೋಚನೆಗಳಿಂದಲೇ ಕೂಡಿವೆ ಎಂದು ಆ ವ್ಯಕ್ತಿ ಹೇಳುತ್ತಾನೆ. ಆಗ ಗೌತಮಬುದ್ಧ ವ್ಯಕ್ತಿಯನ್ನು ಸಮಾಧಾನಪಡಿಸಿ ಈ ರೀತಿಯಾಗಿ ಹೇಳುತ್ತಾರೆ. ಭಯ ಪಡಬೇಡ ಮಗು ನೀನು ಇಂದಿನಿಂದ ನಾನು ಹೇಳಿದ ರೀತಿಯಲ್ಲಿ ಮಾಡಿದರೆ ಜೀವನದಲ್ಲಿ ನಿನ್ನ ಮನಸ್ಸಿಗೆ ಸಮಾಧಾನ ಸಂತೋಷ ನೆಮ್ಮದಿ ಎಲ್ಲವೂ ಸಿಗುತ್ತವೆ ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿ ಗೌತಮ ಬುದ್ಧರ ಬಳಿ ಸರಿ ಸ್ವಾಮಿ ನಾನು ನೀವು ಹೇಳಿದಂತೆಯೇ ಮಾಡುವೆನು ಎನು ಮಾಡಬೇಕು ಎಂದು ಕೇಳುತ್ತಾನೆ.
ಆ ವ್ಯಕ್ತಿಗೆ ಗೌತಮ ಬುದ್ಧರು ಈ ರೀತಿಯಾಗಿ ಹೇಳುತ್ತಾರೆ ನೀನು ಈಗ ಯಾರ ಬಳಿಯಿಂದ ಆದರೂ ಕತ್ತೆಗಳನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯ ಒಳಗಡೆ ಕಟ್ಟಿ ಹಾಕು ನಂತರ ಎರಡು ದಿನಗಳ ಬಳಿಕ ಮತ್ತೆ ನನ್ನ ಬಳಿ ಬಾ ಎಂದು ಹೇಳುತ್ತಾರೆ. ಗೌತಮ ಬುದ್ಧರು ಈ ರೀತಿಯಾಗಿ ಹೇಳಿದ್ದು ಯಾತಕ್ಕಾಗಿ ಎನ್ನುವುದು ಅಲ್ಲಿದ್ದ ಅವರ ಶಿಷ್ಯರಿಗೆ ಹಾಗೂ ಆ ವ್ಯಕ್ತಿಗೆ ತಿಳಿಯಲೇ ಇಲ್ಲ. ನಂತರ ಎರಡು ದಿನಗಳ ನಂತರ ಆ ವ್ಯಕ್ತಿ ಮತ್ತೆ ಬುದ್ಧರ ಬಳಿ ಬರುತ್ತಾನೆ. ಆಗಲೂ ಸಹ ಆ ವ್ಯಕ್ತಿಯ ಮುಖವೂ ದುಃಖದಲ್ಲಿ ಕಳೆ ಹೀನವಾಗಿತ್ತು. ಆ ವ್ಯಕ್ತಿ ಬುದ್ಧನನ್ನು ನೋಡಿದ ಕೂಡಲೇ ಅತಿಯಾದ ದುಃಖದಿಂದ ಬಂದು ಕಾಲಿಗೆ ಬಿದ್ದು ಸ್ವಾಮಿ, ನೀವು ಹೇಳಿದ ಹಾಗೆ ಕತ್ತೆಗಳನ್ನು ತೆಗೆದುಕೊಂಡು ಹೋಗಿ ಮನೆಯೊಳಗೆ ಕಟ್ಟಿ ಹಾಕಿದೆ. ಎರಡು ದಿನಗಳಿಂದ ಆ ಕತ್ತೆಗಳ ಕೂಗಿನಿಂದ ನನಗೆ ಇಡೀ ರಾತ್ರಿಯೂ ಸಹ ನಿದ್ದೆ ಬರುತ್ತಿಲ್ಲ ಎಂದು ಅಳುತ್ತಲೇ ಹೇಳುತ್ತಾನೆ. ಆಗ ಗೌತಮ ಬುದ್ಧ, ಆ ವ್ಯಕ್ತಿಗೆ ನನಗೆ ಎಲ್ಲವೂ ಅರ್ಥ ಆಯಿತು. ನೀನು ಈಗ ನಿನ್ನ ಮನೆಗೆ ಹೋಗಿ ನಿನ್ನ ಮನೆಯಲ್ಲಿ ಇರುವಂತಹ ಕತ್ತೆಗಳನ್ನು ಮನೆಯ ಹೊರಗಡೆ ಕಟ್ಟಿ ಹಾಕು ಹಾಗೂ ಒಂದು ವಾರದ ಬಳಿಕ ತನ್ನ ಬಳಿ ಬರುವಂತೆ ಹೇಳಿ ಕಳುಹಿಸುತ್ತಾರೆ. ಈಗಲೂ ಸಹ ಆ ವ್ಯಕ್ತಿಗೆ ಹಾಗೂ ಬುದ್ಧರ ಶಿಷ್ಯರಿಗೆ ಕೂಡಾ ಯಾತಕ್ಕಾಗಿ ಈ ರೀತಿ ಹೇಳಿದರು ಎನ್ನುವುದು ಅರ್ಥ ಆಗಲಿಲ್ಲ.
ನಂತರ ಒಂದು ವಾರದ ಬಳಿಕ ಆ ವ್ಯಕ್ತಿ ಮತ್ತೆ ಬುದ್ಧರ ಬಳಿ ಬರುತ್ತಾನೆ. ಆ ವ್ಯಕ್ತಿ ಮೂರನೇ ಬಾರಿಗೆ ಗೌತಮ ಬುದ್ಧರ ಬಳಿ ಬಂದಾಗ ಆ ವ್ಯಕ್ತಿಯ ಮುಖದಲ್ಲಿ ಸ್ವಲ್ಪ ಕಳೆ ತುಂಬಿತ್ತು. ವ್ಯಕ್ತಿ ಬುದ್ದರಿಗೆ, ಸ್ವಾಮಿ ನೀವು ಹೇಳಿದಂತೆ ನಾನು ಕತ್ತೆಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಿ ಕಟ್ಟಿ ಹಾಕಿರುವುದರಿಂದ ಅವುಗಳ ಕೂಗುವ ಶಬ್ಧಕ್ಕೆ ನನಗೆ ರಾತ್ರಿ ನಿದ್ರೆಯೂ ಸಹ ಬರುತ್ತಿರಲಿಲ್ಲ. ನಂತರ ನೀವು ಹೇಳಿದಂತೆ, ಕತ್ತೆಗಳನ್ನು ಮನೆಯ ಹೊರಗೆ ಕಟ್ಟಿ ಹಾಕಿದೆ ಹಾಗಾಗಿ ಒಂದು ವಾರದಿಂದ ಚೆನ್ನಾಗಿ ನಿದ್ದೆ ಮಾಡುತ್ತಿರುವೆ ಸ್ವಾಮಿ ಎಂದು ಹೇಳುತ್ತಾನೆ. ಆಗ ಬುದ್ಧ ವ್ಯಕ್ತಿಯನ್ನು ಉದ್ದೇಶಿಸಿ ಈ ರೀತಿಯಾಗಿ ಹೇಳುತ್ತಾರೆ. ನೋಡಿದೆಯಾ ಕತ್ತೆಗಳನ್ನು ನೀನು ನಿನ್ನ ಮನೆಯ ಒಳಗೆ ಕಟ್ಟಿ ಹಾಕಿದ್ದಕ್ಕೆ ನಿನಗೆ ನಿದ್ರೆ ಬರುತ್ತಿರಲಿಲ್ಲ. ಅದೇ ಕತ್ತೆಗಳನ್ನು ಮನೆಯ ಹೊರಗೆ ಕಟ್ಟಿ ಹಾಕಿದೆ ಹಾಗಾಗಿ ನಿನ್ನ ಮನಸ್ಸಿಗೆ ನೆಮ್ಮದಿಯ ನಿದ್ರೆ ಬಂದಿತ್ತು. ಈಗ ನಾನು ನೀ ಆಗೆ ಇದರ ಪೂರ್ತಿ ಅರ್ಥವನ್ನು ಹೇಳುತ್ತೇನೆ ಸಮಾಧಾನದಿಂದ ಕೇಳು ಎಂದು ಹೇಳಿ ಇಲ್ಲಿ ಕತ್ತೆಗಳು ಎಂದರೆ, ನಮ್ಮ ಮನಸಲ್ಲಿ ಇರುವಂತಹ ಸಮಸ್ಯೆಗಳು ಯೋಚನೆಗಳು ಹಾಗೂ ಬೇಡದೆ ಇರುವ ಅನೇಕ ವಿಷಯಗಳು. ಇಲ್ಲಿ ಮನೇ ಎಂದು ಹೇಳಿದ್ದು ನಮ್ಮ ಮನಸ್ಸಿಗೆ ನಾವು ನಮ್ಮ ಮನಸ್ಸಿಗೆ ಬೇಡದ ವಿಷಯ ಯೋಚನೆಗಳನ್ನು ಸಮಸ್ಯೆಗಳನ್ನು ನಮ್ಮ ಮನಸ್ಸಿನಿಂದ ತೆಗೆಯಬೇಕು. ಅವು ನಮ್ಮ ಮನಸ್ಸಿನಲ್ಲಿಯೇ ಇದ್ದರೆ, ನಮ್ಮ ಜೀವನ ಇಡೀ ಅಶಾಂತಿ, ಯೋಚನೆಗಳಿಂದ ನೆಮ್ಮದಿ ಕಳೆದುಕೊಂಡು ಇರುತ್ತದೆ. ಆದರೆ ನಮ್ಮ ಮನಸಿನಲ್ಲಿ ಇರುವಂತಹ ಎಲ್ಲಾ ಬೇಡವಾದ ವಿಷಯಗಳನ್ನು ಯಾವಾಗ ಮನಸ್ಸಿನಿಂದ ಹೊರಗಡೆ ತೆಗೆದು ಹಾಕುವೆವೋ ಅಂದಿನಿಂದ ನಮ್ಮ ಜೀವನದಲ್ಲಿ ನಮ್ಮ ಮನಸ್ಸು ಹಗುರವಾಗಿ ಸದಾ ನೆಮ್ಮದಿ ಹಾಗೂ ತೃಪ್ತಿಯಿಂದ ಆನಂದವಾಗುತ್ತದೆ. ಯಾರೇ ಆದರೂ ಸಹ ಅವರವ ಮನಸ್ಸಿನಲ್ಲಿ ಬೇಡವಾದ ಸಂಗತಿಗಳನ್ನು ಇಟ್ಟುಕೊಂಡು ಕೊರಗಬಾರದು. ಅವುಗಳನ್ನೆಲ್ಲ ನಮ್ಮ ಮನಸಿನಿಂದ ಹೊರಗಡೆ ಹಾಕಿದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ