ಪುರಾಣಗಳಲ್ಲಿ ಭಗೀರಥನು ಧರೆಗೆ ನೀರನ್ನು ಹರಿಸಿರುವ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ ಆದರೆ ಮಹಿಳೆಯೊಬ್ಬರು ತಾವೇ ಸ್ವತಃ ಬಾವಿ ತೋಡಿ ನೀರು ಬಂದಿರುವ ಕಥೆಯನ್ನು ಇದುವರೆಗೂ ಕೇಳಲಿಲ್ಲ. ಇಲ್ಲೊಬ್ಬರು 52 ವರ್ಷದ ಮಹಿಳೆ ತಮ್ಮ ತೋಟಕ್ಕೆ ನೀರು ಇಲ್ಲದಿರುವ ಕಾರಣ ತಾವೇ ಬಾವಿ ತೋಡಿ ಗಂಗೆಯನ್ನು ಒಲಿಸಿಕೊಂಡ ಸಂಗತಿಯನ್ನು ಈ ಲೇಖನದಲ್ಲಿ ನೋಡೋಣ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾದ ಗೌರಿ ಚಂದ್ರಶೇಖರ್ ನಾಯ್ಕ್ ಎಂಬುವವರು ತಮ್ಮ ಹಿತ್ತಲಿನಲ್ಲಿ ಎರಡು ಬಾವಿ ತೆಗೆದಿದ್ದಾರೆ. 52 ವರ್ಷದ ಗೌರಿ ಅವರು ಮಣ್ಣು ಅಗೆಯುವುದು, ಮೇಲೆ ಎತ್ತಿ, ಹೊತ್ತು ಹಾಕುವುದು ಇವೆಲ್ಲ ಕೆಲಸವನ್ನು ಒಬ್ಬರೆ ಮಾಡಿದ್ದಾರೆ. ಇವರು ಕೇವಲ 4-5 ತಿಂಗಳಲ್ಲಿ 60 ಅಡಿ ಬಾವಿ ತೋಡಿದ್ದಾರೆ. ಹಗಲು ರಾತ್ರಿ ಗೌರಿ ಅವರು ಕೆಲಸ ಮಾಡುತ್ತಿದ್ದರು ಕೊನೆಗೂ ಗೌರಿಯನ್ನು ಒಲಿಸಿಕೊಂಡರು. ಏನಾದರೂ ಬೆಳೆ ಬೆಳೆಯಬೇಕು ಎಂದುಕೊಂಡ ಗೌರಿ ಅವರು ಅಡಕೆ ತೋಟ ಮಾಡಲು ಅಡಕೆ ಸಸಿಗಳನ್ನು ನಾಟಿ ಮಾಡಿದರು. 2-3 ವರ್ಷ ಗಿಡಗಳಿಗೆ ದೂರದಿಂದ ನೀರನ್ನು ಎತ್ತಿ ಹಾಕುತ್ತಿದ್ದರು ಆದರೆ ಅದು ಸಾಕಾಗುತ್ತಿರಲಿಲ್ಲ. ಬಾವಿ ತೋಡಿದರೆ ನೀರು ಬರಬಹುದು ಎಂದು ಒಬ್ಬರೆ ಯಾರ ಸಹಾಯವಿಲ್ಲದೆ ಬಾವಿ ತೋಡಿದ್ದಾರೆ. ಬಾವಿ ತೋಡಲು ಯಾರ ಬಳಿ ಜಾಗ ಕೇಳದೆ ತಮಗೆ ಪ್ರೇರಣೆ ಬಂದಂತೆ ಬಾವಿ ತೋಡಿದ್ದಾರೆ. ಒಂದು ಬಾವಿ ತೋಟಕ್ಕೆ ನೀರು ಹಾಕಲು ಇನ್ನೊಂದು ಬಾವಿ ಮನೆಯ ಹತ್ತಿರ ನೀರಿಗಾಗಿ ತೋಡಿದ್ದಾರೆ. ಇವರು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಗೌರಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಸ್ವರ್ಣವಲ್ಲಿ ಮಠ ಮತ್ತು ಮುರುಘಾ ಮಠ ಹೀಗೆ ಅನೇಕ ಸಂಸ್ಥೆಗಳು ಗೌರಿ ಅವರಿಗೆ ಸನ್ಮಾನ ಮಾಡಿದೆ.
ಅವರು ದೇವರಲ್ಲಿ ನಾನು ಈ ಭೂಮಿಯಲ್ಲಿ ಇರುವವರೆಗೆ ಏನಾದರೂ ಮಾಡುತ್ತಾ ಇರುವಷ್ಟು ಶಕ್ತಿ ಕೊಡು ಎಂದು ಕೇಳುತ್ತಾರೆ. ಬಾವಿಯಲ್ಲಿ ನೀರು ಬಂದ ತಕ್ಷಣ ಶಿವ ಪಾರ್ವತಿ ಆಕಾಶದಿಂದ ಭೂಮಿಗೆ ಬಂದಷ್ಟೆ ಖುಷಿ ಆಯಿತು, ಇದಕ್ಕಿಂತ ಬೇರೆ ಖುಷಿ ಇಲ್ಲ ಎಂದು ಗೌರಿ ಅವರು ಹೇಳಿಕೊಂಡರು. ಮಹಿಳೆಯೊಬ್ಬರ ಬಾವಿ ತೋಡುವ ಕೆಲಸವನ್ನು ಕೇಳಿದ ಸ್ಥಳೀಯರು ಬೆಚ್ಚಿ ಬೆರಗಾಗಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಗಂಗೆಯನ್ನು ಒಲಿಸಿಕೊಂಡ ಗೌರಿ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸೋಣ.