ನಮ್ಮ ದೇಶ ಸ್ವಚ್ಛ ಭಾರತ ಆಗಬೇಕಾದರೆ ಪ್ರತಿಯೊಂದು ಮನೆಗೆ ಒಂದು ಶೌಚಾಲಯ ಇರಬೇಕು. ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರವೆ ಹಣ ಕೊಡುತ್ತದೆ. ಸರ್ಕಾರದಿಂದ ಹಣ ಪಡೆಯಲು ಅರ್ಜಿ ಸಲ್ಲಿಸಬೇಕು. ಹಾಗಾದರೆ ಉಚಿತ ಶೌಚಾಲಯ ನಿರ್ಮಿಸಿಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ದೇಶದ ಪ್ರಧಾನಿ ಮೋದಿಜಿ ಅವರ ಅದ್ಭುತ ಕಲ್ಪನೆ ಸ್ವಚ್ಛ ಭಾರತ ಯೋಜನೆಯಡಿ ಉಚಿತ ಶೌಚಾಲಯ ಅಂದರೆ ಶೌಚಾಲಯ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ಹಣ ಸಿಗುತ್ತದೆ. ಉಚಿತ ಶೌಚಾಲಯ ಕಟ್ಟಿಸಿಕೊಳ್ಳಲು ಕೆಲವು ದಾಖಲೆಗಳು ಬೇಕಾಗುತ್ತದೆ. ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ, ಪಾಸ್ಪೋರ್ಟ್ ಸೈಜ್ ಫೋಟೊ, ಬಿಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಬೇಕಾಗುತ್ತದೆ. ಉಚಿತ ಶೌಚಾಲಯ ಕಟ್ಟಿಸಿಕೊಳ್ಳಲು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪಟ್ಟಣದಲ್ಲಿರುವವರು ಆನಲೈನ್ ಅರ್ಜಿ ಸಲ್ಲಿಸಬಹುದು. ಹಳ್ಳಿಯಲ್ಲಿ ವಾಸ ಮಾಡುವವರು ಮೇಲೆ ತಿಳಿಸಿದ ಎಲ್ಲ ದಾಖಲಾತಿಗಳನ್ನು ಗ್ರಾಮ ಪಂಚಾಯತ್ ನ ಕಂಪ್ಯೂಟರ್ ಆಪರೇಟರ್ ಹತ್ತಿರ ತೆಗೆದುಕೊಂಡು ಹೋಗಬೇಕು ಅವರು ಪಂಚಾಯತ್ ಲಾಗಿನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಆಪರೇಟರ್ ಬಂದು ನಿರ್ಮಾಣವಾದ ಶೌಚಾಲಯ ಅಥವಾ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಫೋಟೊ ತೆಗೆದುಕೊಂಡು ಹೋಗುತ್ತಾರೆ. ಶೌಚಾಲಯ ನಿರ್ಮಾಣ ಹಂತದಲ್ಲಿದ್ದರೆ ಎರಡು ಬಾರಿ ಫೋಟೊ ತೆಗೆದುಕೊಂಡು ಹೋಗುತ್ತಾರೆ.
ನಂತರ 7-10 ದಿನಗಳಲ್ಲಿ ಸಾಮಾನ್ಯ ವರ್ಗದವರಿಗೆ 12,000 ರೂಪಾಯಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ 15,000 ರೂಪಾಯಿ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ. ಉಚಿತ ಶೌಚಾಲಯ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಗ್ರಾಮ ಪಂಚಾಯತ್ ನ ಕಂಪ್ಯೂಟರ್ ಆಪರೇಟರ್ ಹಾಗೂ ಪಿಡಿಓ ಅವರನ್ನು ಸಂಪರ್ಕಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸ್ವಚ್ಛ ಭಾರತ ದೇಶದತ್ತ ನಾವು ಸಹ ಕೆಲಸ ಮಾಡೋಣ.