ಹಲವಾರು ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ಕೆಲವು ಜನರು ವಂಚಿತರಾಗಿದ್ದಾರೆ ಸರ್ಕಾರದ ಅನೇಕ ಸೌಲಭ್ಯ ವನ್ನೂ ಕಲ್ಪಿಸಿದರು ಕೆಲವು ಜನರಿಗೆ ಮಾತ್ರ ಸಿಗುತ್ತಿದೆ ಅಷ್ಟೇ ಅಲ್ಲದೆ ಕೆಲವು ಜನರು ನಿರುದ್ಯೋಗಿಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಭೂ ಒಡೆತನ ಯೋಜನೆ 2020-21ನೆ ಸಾಲಿನ ಪರಿಶಿಷ್ಟ ಪಂಗಡದ ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಭೂ ಓಡೆಯರನ್ನಾಗಿ ಮಾಡುವುದೇ ಈ ಯಾಜನೆಯ ಉದ್ದೇಶವಾಗಿದೆನಾವು ಈ ಲೇಖನದ ಮೂಲಕ ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ನೀಡುವ ಸಬ್ಸಿಡಿಯ ಕುರಿತು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ವೀಡಿಯೊ ನೋಡಿ

ಈ ಯೋಜನೆಯಲ್ಲಿ ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಭೂಮಿಯನ್ನು ಖರೀದಿ ಮಾಡಲು ಸುಮಾರು ಹದಿನೈದು ಲಕ್ಷದಷ್ಟು ಸಬ್ಸಿಡಿಯನ್ನ ನೀಡುತ್ತದೆ ಹಾಗೂ ಸರ್ಕಾರ ಐವತ್ತು ಪರ್ಸೆಂಟ್ ರಿಯಾಯತಿ ನೀಡುತ್ತದೆ ಅಂದರೆ ಹದಿನೈದು ಲಕ್ಷದಲ್ಲಿ ಏಳೂವರೆ ಲಕ್ಷವನ್ನು ಹತ್ತು ವರ್ಷದವರೆಗೆ ಹಣವನ್ನು ಮರುಪಾವತಿ ಮಾಡುವುದಾಗಿದೆ.

ಇದಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತ ಎಂಬ ಪೇಜ್ ಬರುತ್ತದೆ ಅಲ್ಲಿ ಭೂ ಒಡೆತನ ಅರ್ಜಿ ನಮೂನೆ ಅಂತ ಇರುತ್ತದೆ ಅಲ್ಲಿ ನಿಮ್ಮ ತಾಲೂಕು ಜಿಲ್ಲೆ ಯಾವುದು ಎಂಬುದನ್ನೂ ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆ ವಿಧಾನ ಸಭಾ ಕ್ಷೇತ್ರಮತ್ತು ಅರ್ಜಿದಾರರ ಪೂರ್ತಿ ಹೆಸರು ಗ್ರಾಮ ತಂದೆ ತಾಯಿ ಹಾಗೂ ಹೋಬಳಿನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.

ನಂತರ ಜಾತಿ ಮಾತು ಜನನ ದಿನಾಂಕವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆ ಇದು ಎಸ್ ಟೀ ಯವರಿಗೆ ಮಾತ್ರ ಸೀಮಿತವಾಗಿದ್ದು ಹಾಗೆ ಜಾತಿಪ್ರಮಾಣದ ನಂಬರನ್ನು ಎಂಟ್ರಿ ಮಾಡಿಕೊಳ್ಳಬೇಕು ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಪಡಿತರ ಚೀಟಿ ಯ ಸಂಖ್ಯೆ ಹಾಗೂ ಕುಟುಂಬದ ವಾರ್ಷಿಕ ಆದಾಯವನ್ನು ಟೈಪ್ ಮಾಡಬೇಕು ನಂತರ ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕ ರಾಗಿದ್ದರೆ ಅಂತ ಆಪ್ಷನ್ ಇರುತ್ತದೆ ಅಲ್ಲಿ ಹೌದು ಅಂತ ಮಾಡಬೇಕು ಹಾಗೆ ಕುಟುಂಬದ ಸದಸ್ಯರ ವಿವರವನ್ನು ಟೈಪ್ ಮಾಡಬೇಕು ಎಡ್ ಬಟನ್ ಕ್ಲಿಕ್ ಮಾಡಿದಾಗ ನೀವು ಎಂಟ್ರಿ ಮಾಡಿದ ವಿವರಗಳು ಎಡ್ ಅಗುತ್ತದೆ

ಹಾಗೆ ನಿಮ್ಮ ಬ್ಯಾಂಕಿನ ಹೆಸರನ್ನು ಟೈಪ್ ಮಾಡಬೇಕು ಹಾಗೆ ಈಗಾಗಲೇ ಸಾಲ ಪಡೆದ ವಿವರಣೆ ಅಂತ ಇರುತ್ತದೆ ಅಲ್ಲಿ ಮೊದಲು ಸಾಲ ಪಡೆದಿದ್ದರೆ ವಿವರಣೆ ನೀಡಬೇಕು ಸಾಲ ಪಡೆಯದೆ ಇದ್ದರೆ ವಿವರಣೆ ನೀಡುವ ಅವಶ್ಯಕತೆ ಇರುವುದಿಲ್ಲ ಹಾಗೆ ಅರ್ಜಿದಾರರು ಹೊಂದಿರುವ ಇತರೆ ಆಸ್ತಿ ಇದ್ದರೆ ಎಂಟ್ರಿ ಮಾಡಬೇಕು ಜಮೀನು ಮಾರಾಟ ಮಾಡಿದ್ದಲ್ಲಿ ಅವರ ಹೆಸರು ಅಂತ ಆಪ್ಷನ್ ಇರುತ್ತದೆ ಅಲ್ಲಿ ಮಾರಾಟ ಮಾಡಿದ್ದಾರೆ ಅವರ ಹೆಸರು ಮತ್ತು ವಿವರಣೆ ನೀಡಬೇಕು

ಹಾಗೆ ನೀವು ಯಾವ ಗ್ರಾಮದ ಜಮೀನನ್ನು ಖರಿದಿ ಮಾಡಲು ಇಚ್ಚಿಸುತಿರ ಅಂತ ಇರುತ್ತದೆ ಅಲ್ಲಿ ಫಿಲ್ ಮಾಡಬೇಕು ಹಾಗೆ ನೀವು ಖರೀದಿ ಮಾಡುವ ಜಮೀನಿನ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಹಾಗೆ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಣಪತ್ರ ಫೋಟೋ ಆಧಾರ ಕಾರ್ಡ್ ಪಡಿತರ ಚೀಟಿಯನ್ನು ಸ್ಕ್ಯಾನ್ ಮಾಡಬೇಕು ನಂತರ ಸುಬ್ಮಿಟ್ ಅಂತ ಕೊಡಬೇಕು ಸುಬ್ಮಿಟ್ ಆದ ರಿಸಿಪ್ಟ್ ಅನ್ನು ಸರಿಯಾಗಿ ಇಟ್ಟುಕೊಳ್ಳಬೇಕು.ಇದರಿಂದ ಪರಿಶಿಷ್ಟ ಪಂಗಡದಬಾರಿಗೆ ತುಂಬಾ ಪ್ರಯೋಜನವಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!