ಸರ್ಕಾರಿ ಜಾಗವನ್ನು ಸಾರ್ವಜನಿಕರು ಉಳಿಸಿ ರಕ್ಷಿಸಬೇಕು ಇದು ಎಲ್ಲರ ಕರ್ತವ್ಯವಾಗಿದೆ ರಾಜ್ಯದಲ್ಲಿ ಅರವತ್ತು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶ ಸರ್ಕಾರಿ ಭೂಮಿ ಇರುತ್ತದೆ ನಮ್ಮ ಭೂಮಿಯ ಹಕ್ಕು ಶಾಶ್ವತವಲ್ಲ ಜಮೀನಿನ ಹಕ್ಕು ಮಾತ್ರ ನಮ್ಮದಾಗಿ ಇರುತ್ತದೆ ಅದರ ಆಚೆ ಎಲ್ಲ ಭೂಮಿಯು ಸರ್ಕಾರದ್ದು ಆಗಿರುತ್ತದೆಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಸರಕಾರಿ ಜಮೀನಿನ ಮಾಹಿತಿ ನೋಡಬಹುದು ಹಾಗೆಯೇ ತಾಲೂಕಿನ ಸರ್ವೆ ಕಚೇರಿಯಲ್ಲಿ ಸಹ ಲಭ್ಯತೆ ಇರುತ್ತದೆ.
ನಿರ್ಧಿಷ್ಟ ಕಾರಣಗಳೊಂದಿಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸಂಭಂದ ಪಟ್ಟ ನಕ್ಷೆ ಪಹಣಿ ಮುಂತಾದ ದಾಖಲಾತಿ ಕೊಡಬಹುದು ಜಮೀನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮವನ್ನು ಸ್ಥಾಪಿಸಿದೆ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಭೂಮಿ ಒತ್ತುವರಿ ತೆರವುಗೊಳಿಸಲು ಗಮನ ಹರಿಸಬೇಕು ಎಂದು ಹೇಳಿದೆ ನಾವು ಈ ಲೇಖನದ ಮೂಲಕ ಸರ್ಕಾರಿ ಜಮೀನಿನ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕದಲ್ಲಿ ಸರ್ಕಾರಿ ಜಮೀನು ಬಹಳ ಇದೆ ಕರ್ನಾಟಕ ರಾಜ್ಯದಲ್ಲಿ ಅರವತ್ತು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶ ಸರ್ಕಾರಿ ಭೂಮಿಯಾಗಿದೆ ಸರ್ಕಾರಿ ಜಮೀನಿನಲ್ಲಿ ಗೋಮಾಳ ಜಮೀನು ಹಾಗೂ ಗೈರಾಣು ಜಮೀನು ಪರಂಪೋಕ ಜಮೀನು ಹಾಗೂ ಭೂ ಪರಿವರ್ತನೆ ಜಮೀನು ಸಹ ಒಳಗೊಂಡಿರುತ್ತದೆ ಸಾಮಾನ್ಯವಾಗಿ ಜಮೀನು ಎನ್ನುವುದು ಶಾಶ್ವತವಲ್ಲ ಜಮೀನಿನ ಹಕ್ಕು ಮಾತ್ರ ನಮ್ಮದಾಗಿ ಇರುತ್ತದೆ ಅದರ ಆಚೆ ಎಲ್ಲ ಭೂಮಿಯು ಸರ್ಕಾರದ್ದು ಆಗಿರುತ್ತದೆ.
ಒಂದು ವೇಳೆ ಜಮೀನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಇದ್ದರೆ ಆ ಜಮೀನಿನಲ್ಲಿ ಉತ್ಖನನ ಮಾಡುವಾಗ ಬಂಗಾರದ ಗಣಿ ಹಾಗೂ ಕಚ್ಚಾ ತೈಲದ ಲಭ್ಯತೆ ಕಂಡು ಬಂದರೆ ಸರ್ಕಾರ ತಕ್ಷಣವೇ ಸದರಿ ಜಮೀನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಸ್ವತ್ತು ಎಂದು ಘೋಷಣೆ ಮಾಡುತ್ತದೆ ಇದರಿಂದ ಜಮೀನಿನ ಮೇಲ್ಭಾಗ ಮಾತ್ರ ನಮ್ಮದು ಉಳಿದೆಂತೆ ಎಲ್ಲವೂ ಸರ್ಕಾರದ ಸ್ವತ್ತು ಆಗಿದೆ .
ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಸರಕಾರಿ ಜಮೀನಿನ ಮಾಹಿತಿ ನೋಡ ಬಹುದು ಹಾಗೆಯೇ ತಾಲೂಕಿನ ಸರ್ವೆ ಕಚೇರಿಯಲ್ಲಿ ಸಹ ಲಭ್ಯತೆ ಇರುತ್ತದೆ ನಿರ್ಧಿಷ್ಟ ಕಾರಣ ಗಳೊಂದಿಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸಂಭಂದ ಪಟ್ಟ ನಕ್ಷೆ ಪಹಣಿ ಮುಂತಾದ ದಾಖಲಾತಿ ಕೊಡಬಹುದು ಹಾಗೆಯೇ ದಿಶಾಂಕ ಏಪ್ ಮೂಲಕ ಸಹ ಮೊಬೈಲ್ನಲ್ಲಿ ಸಹ ನೋಡಬಹುದು .ಒಂದು ರಾಜ್ಯದಲ್ಲಿ ಹದಿಮೂರು ಲಕ್ಷಕ್ಕೂ ಹೆಚ್ಚು ಜಾಗ ಒತ್ತುವರಿ ಆಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರದ ಜಮೀನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮವನ್ನು ಸ್ಥಾಪಿಸಿದೆ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಭೂಮಿ ಒತ್ತುವರಿ ತೆರವುಗೊಳಿಸಲು ಗಮನ ಹರಿಸಬೇಕು ಎಂದು ಹೇಳಿದೆ ಕರ್ನಾಟಕ ಭೂಮಿ ಒತ್ತುವರಿ ತೆರವುಗೊಳಿಸಲು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಯಲ್ಲಿ ಇರುತ್ತದೆ ಅದರ ಅಡಿ ಒಂದು ವಿಶೇಷ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ .
ಭೂ ಕಬಳಿಕೆ ಕಾಯ್ದೆಯಉಪಯೋಗ ಮತ್ತು ಉದ್ದೇಶಗಳು ಈ ಕೆಳಗಿನಂತಿದೆ ಸರ್ಕಾರಿ ಜಾಗದ ಸಂಪೂರ್ಣ ಮಾಹಿತಿ ದೊರಕುತ್ತದೆ ನಿರ್ಧಿಷ್ಟ ಭೂಮಿ ಹಾಗೂ ಒತ್ತುವರಿ ಜಾಗದ ಮಾಹಿತಿ ತಿಳಿದುಕೊಳ್ಳಬಹುದು ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಹೂಡಿಕೆಯ ಉತ್ತಮ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ಭೂಮಿಯನ್ನು ಹಾಳು ಮಾಡದೆ ಉತ್ತಮವಾಗಿ ಉಳುಮೆ ಮಾಡಬಹುದು ಸರ್ಕಾರ ಆರ್ಥಿಕವಾಗಿ ಬಲಾಢ್ಯ ಮಾಡುತ್ತದೆ. ಕೈಗಾರೀಕರಣದಿಂದ ನಿರುದ್ಯೋಗ ನಿರ್ಮೂಲನೆ ಆಗುತ್ತದೆ ಸಾರ್ವಜಿಕ ಕಟ್ಟಡ ಕಟ್ಟಲು ಸರ್ಕಾರಿ ಜಮೀನು ಬಳಸಬಹುದು ಸರ್ಕಾರಿ ಜಾಗ ಅತಿಕ್ರಮಿಸಿದರೆ ದಂಡದೊಂದಿಗೆ ಶಿಕ್ಷೆ ನೀಡಲಾಗುತ್ತದೆ ರೈತರಿಗೆ ನಿಯಮಾನುಸಾರ ಗೇಣಿಗೆ ಜಮೀನು ನೀಡಲಾಗುತ್ತದೆ ಸಾರ್ವಜನಿಕ ಜಾಗವನ್ನು ಸಾರ್ವಜನಿಕರು ಉಳಿಸಬೇಕು .