Govt House Scheme in Karnataka: ಪ್ರಸಕ್ತ ವರ್ಷ ಮುಂಗಾರು ಮಳೆಯಿಂದಾಗಿ ಕೆಲವು ಕಡೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ. ನದಿ ಹಾಗೂ ಸಮುದ್ರದಂಚಿನಲ್ಲಿರುವಂತಹ ಮನೆಗಳಿಗೆ ನೀರು ನುಗ್ಗಿ ಎಷ್ಟೋ ಮನೆಗಳು ದುರಸ್ತಿಗೊಂಡಿರುತ್ತದೆ ಅಂತವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ತೊಂದರೆಗೆ ಸಿಲುಕಿಕೊಂಡವರು ತಪ್ಪದೇ ಅರ್ಜಿ ಸಲ್ಲಿಸಿ ಇದರ ಫಲವನ್ನು ಪಡೆದುಕೊಳ್ಳಿ.

1 ಜೂನ್ 2023 ರಿಂದ 30 ಸೆಪ್ಟೆಂಬರ್ 2023 ರ ಅತಿವೃಷ್ಟಿ ಅಥವಾ ಪ್ರವಾಹದಿಂದ ತೊಂದರೆಗಿಡಾದವರಿಗೆ ಹೊಸ ಮನೆ ಕಟ್ಟಲು ಅಥವಾ ಮನೆ ರಿಪೇರಿ ಮಾಡಲು ಸರ್ಕಾರದಿಂದ ಹಣ ನೀಡಲಾಗುತ್ತದೆ. ಹಾನಿ ಗೊಂಡಿರುವಂತಹ ಪ್ರಮಾಣದ ಮೇಲೆ ಎ, ಬಿ, ಬಿ1, ಸಿ ಹೀಗೆ ನಾಲ್ಕು ವಿಭಾಗಗಳನ್ನು ಗುರುತಿಸಿದ್ದು ಅದರ ಆಧಾರದ ಮೇಲೆ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

Govt House Scheme in Karnataka

75% ಮನೆ ಹಾನಿಯಾಗಿದ್ದರೆ ಅದು ವರ್ಗ A ನಲ್ಲಿ ಗುರುತಿಸಲಾಗುತ್ತದೆ .ಅವರಿಗೆ SDRF / NDRF ಮಾರ್ಗಸೂಚಿ ಪ್ರಕಾರ 1,20,000 ಮತ್ತು ರಾಜ್ಯ ಸರ್ಕಾರದ ವತಿಯಿಂದ 3,80,000 ಒಟ್ಟು 5 ಲಕ್ಷ ಹಣ ಸಿಗಲಿದೆ.25% – 75% ಮನೆ ಹಾನಿಯಾಗಿದ್ದರೆ ಅವರನ್ನು B1 ವರ್ಗದಲ್ಲಿ ಗುರುತಿಸಲಾಗುತ್ತದೆ. ಅವರಿಗೆ SDRF / NDRF ಮಾರ್ಗಸೂಚಿ ಪ್ರಕಾರ 1,20,000 ಮತ್ತು ರಾಜ್ಯ ಸರ್ಕಾರದಿಂದ 1,80,000 ಒಟ್ಟಾರೆಯಾಗಿ 3 ಲಕ್ಷ ಹಣ ಸಿಗಲಿದೆ.

15% – 25% ಹಾನಿಯಾದ ಮನೆಯನ್ನು ಗುರುತಿಸಿ ಇವರಿಗೆ SDRF / NDRF ಮಾರ್ಗಸೂಚಿ ಅನುಸಾರ 6,500 ಹಾಗೂ ರಾಜ್ಯ ಸರ್ಕಾರದ ವತಿಯಿಂದ 43,500 ಒಟ್ಟಾರೆಯಾಗಿ 50,000 ಹಣ ನೀಡಲಾಗುತ್ತದೆ.

ರಾಜ್ಯದಲ್ಲಿ ಹಾನಿ ಗೊಂಡಿರುವಂತಹ ಮನೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಒಂದು ತಂಡವನ್ನು ರಚಿಸಿ ಅವರಿಂದ ಮಾಹಿತಿಯನ್ನು ಸಂಗ್ರಹಿಸಿ ವರ್ಗದ ಪ್ರಕಾರ ಅವರಿಗೆ ಹಣ ನೀಡುತ್ತಾರೆ.SDRF / NDRF ಮಾರ್ಗಸೂಚಿ ಪ್ರಕಾರ ಹಣವು ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಇದನ್ನೂ ಓದಿ ಸೌಜನ್ಯ ಕೇಸ್ ನಲ್ಲಿ ಹುಲಿಯಂತೆ ಘರ್ಜಿಸುತ್ತಿರುವ ಈ ತಿಮರೋಡಿ ಯಾರು, ಇವರನ್ನು ಕಂಡ್ರೆ ಕೆಲವರಿಗೆ ಭಯ ಹುಟ್ಟುತ್ತೆ ಯಾಕೆ ಗೊತ್ತಾ

By AS Naik

Leave a Reply

Your email address will not be published. Required fields are marked *