ಸ್ವಂತ ಮನೆ ಕಟ್ಟೋರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, 2.67 ಲಕ್ಷ ಸಹಾಯಧನ ಪಡೆಯೋದು ಹೇಗೆ ಗೊತ್ತಾ..

0 233

Govt Home Loan: ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು, ಆದರೆ ಮನೆ ಮಾಡಿಕೊಳ್ಳುವುದಕ್ಕೆ ಎಲ್ಲರಿಂದಲೂ ಸಾಧ್ಯ ಆಗುವುದಿಲ್ಲ. ಆರ್ಥಿಕ ಸಮಸ್ಯೆ ಅಥವಾ ಇನ್ನಿತರ ಕಾರಣಗಳಿಗೆ ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯ ಆಗದೆ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದಿಂದ ಪಿಎಮ್ ಅವಾಸ್ ಯೋಜನೆಯ ಮೂಲಕ ಸಹಾಯ ಸಿಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ಸಿಗುವ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ. 2.5 ಲಕ್ಷದಿಂದ 5 ಲಕ್ಷದವರೆಗು ಹಣ ಪಡೆದುಕೊಳ್ಳಬಹುದು..

ಈ ಯೋಜನೆಯನ್ನು ಮೊದಲಿಗೆ ಇಂದಿರಾಗಾಂಧಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿತ್ತು, ಬಳಿಕ ಹೆಸರು ಬದಲಾಯಿಸಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿದೆ. ನಮ್ಮ ದೇಶದ, ನಮ್ಮ ರಾಜ್ಯದ ಯಾವ ನಾಗರೀಕರು ಕೂಡ ನಿರಾಶ್ರಿತರಾಗಿ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅರ್ಜಿ ಸಲ್ಲಿಸಿ, ಇದರ ಮೂಲಕ 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಪಿಎಮ್ ಆವಾಸ್ ಯೋಜನೆಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಇದ್ದು, ಮೊದಲ ಬಾರಿ ಯಾವುದೇ ತಪ್ಪು ಮಾಡದ ಹಾಗೆ ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ. ಆಯ್ಕೆಯಾದವರಿಗೆ ವಾರ್ಷಿಕವಾಗಿ 6.50% ಬಡ್ಡಿದರದಲ್ಲಿ 20 ವರ್ಷಕ್ಕೆ ವಸತಿ ಸಾಲ ನೀಡಲಾಗುತ್ತದೆ. ಈ ಮನೆಯನ್ನು ನೆಲ ಮಹಡಿಗೆ, ಅಂಗವಿಕಲರಿಗೆ, ಮತ್ತು ಹಿರಿಯ ನಾಗರೀಕರಿಗೆ ಮಾತ್ರ ಮೀಸಲಾಗಿ ಇಡಲಾಗಿದೆ, ಹಾಗೆಯೇ ಮನೆ ನಿರ್ಮಾಣಕ್ಕೆ ಪರಿಸರ ಸ್ನೇಹಿ ಮಾರ್ಗವನ್ನು ಅನುಸರಿಸಲಾಗುತ್ತದೆ.

ಪಿಎಮ್ ಅವಾಸ್ ನಗರ, ಪಿಎಮ್ ಅವಾಸ್ ಗ್ರಾಮೀಣ ಎಂದು ಎರಡು ರೀತಿಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ದೇಶದ ಎಲ್ಲ ಹಳ್ಳಿಯವರು ಮತ್ತ್ ನಗರ ಪ್ರದೇಶಗಳ ಜನರು ಈ ಯೋಜನೆಯ ಸೌಲಭ್ಯ ಪಡೆಯಬಹುದು. 6.50% ಬಡ್ಡಿದರದಲ್ಲಿ ಸಿಗುವ ಈ ಸಾಲಕ್ಕೆ ಅಪ್ಲೈ ಮಾಡುವ ಸಮಯದ ಗಡುವನ್ನು ಈಗ ವಿಸ್ತರಿಸಲಾಗಿದ್ದು, 2024ರ ಡಿಸೆಂಬರ್ 31ರ ವರೆಗು ವಿಸ್ತರಿಸಬಹುದು.

https://pmaymis.gov.in/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. 1800-11-6163 – 1800 11 3377, 1800 11 3388  ಈ ಟೋಲ್ ಫ್ರೀ ನಂಬರ್ ಗಳಿಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು, [email protected] ಈ ಮೇಲ್ ಐಡಿಗೆ ದೂರು ನೀಡಬಹುದು. ವಸತಿ, ನಗರ ವ್ಯವಹಾರಗಳ ಸಚಿವಾಲಯ, ನಿರ್ಮಾಣ್ ಭವನ್, ನವದೆಹಲಿ – 110011 ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಬಿಪಿಎಲ್ ಕಾರ್ಡ್ ಇರುವವರು, ವಿಧವೆಯರು ಮಾಜಿ ಸೈನಿಕರು ಇವರೆಲ್ಲರೂ ಅರ್ಜಿ ಸಲ್ಲಿಸಬಹುದು. ನಿವೃತ್ತಿ ಹೊಂದಿರುವವರಿಗೂ ಈ ಯೋಜನೆ ಲಭ್ಯವಿದೆ. https://pmaymis.gov.in/open/Check_Aadhar_Existence.aspx?comp=b ಈ ವೆಬ್ಸೈಟ್ ಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಪರಿಶೀಲಿಸಿದ ನಂತರ ಹೊಸ ಪೇಜ್ ನಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಹಾಕಿ, ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.