ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ದಂಪತಿ ಬಳಿ ಕೇಳುವ ಪ್ರಶ್ನೆಯೆಂದರೆ ಯಾವಾಗಪ್ಪಾ ಮಗು ಬರೋದೋ ಎಂದು. ವರ್ಷ ಕಳೆದರೂ ಮಕ್ಕಳಾಗದೆ ಇದ್ದರೆ ಆಗ ಮಹಿಳೆಯರ ಮಧ್ಯೆ ಗುಸುಗುಸು ಆರಂಭವಾಗುವುದು. ಇಂದಿನ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಕೂಡ ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಬಹುದು. ಮಕ್ಕಳಾಗದೇ ಇರುವುದು ಆಧುನಿಕ ಯುಗದ ಮಹಿಳೆಯರಿಗೆ ಒಂದು ಶಾಪವಾಗಿ ಪರಿಣಮಿಸಿದೆ ಎಂದು ಹೇಳಬಹುದಾಗಿದೆ.
ಯಾಕೆಂದರೆ ಇಂದು ವಿವಾಹಿತರಾದ ಹೆಚ್ಚಿನ ಮಹಿಳೆಯರಲ್ಲಿ ಈ ಸಮಸ್ಯೆಯು ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಮಹಿಳೆಯರಲ್ಲಿ ಹಲವಾರು ವಿಧದಿಂದ ಮಕ್ಕಳಾಗದೇ ಇರುವ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದಕ್ಕೆ ಸ್ಪಷ್ಟ ಹಾಗೂ ನಿಖರ ಕಾರಣವನ್ನು ಹುಡುಕುವುದು ತುಂಬಾ ಕಷ್ಟ.
ಇದರಿಂದ ಆರಂಭದಲ್ಲೇ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಬಂಜೆತನದ ಆರಂಭಿಕ ಲಕ್ಷಣಗಳನ್ನು ತಿಳಿದುಕೊಂಡು ಅದರ ಕಡೆ ಗಮನಹರಿಸಬೇಕು. ತುಂಬಾ ಸಮಯದಿಂದ ನೀವು ಮಗುವಾಗಬೇಕು ಎಂದು ಪ್ರಯತ್ನಿಸುತ್ತಲಿದ್ದರೂ ಅದು ಸಾಧ್ಯವಾಗದೆ ಇದ್ದರೆ ಆಗ ಇದಕ್ಕೆ ಹಲವು ಕಾರಣಗಳು ಇವೆ.
ಆದರೆ ನಾವಿಲ್ಲಿ ತಿಳಿಸುವ ಮನೆಮದ್ದಿನಿಂದ ತುಂಬಾ ವರ್ಷಗಳಿಂದ ಮಕ್ಕಳಿಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಫಲ ಕೊಡದೆ ಇದ್ದರೆ ಈ ಶಕ್ತಿಶಾಲಿ ನಾಠಿ ಔಷಧಿಯನ್ನು ತಯಾರಿಸಿ ಬಳಸಿ ಸಂತಾನ ಭಾಗ್ಯವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಆದರೆ ಔಷಧಿ ತಿಳಿಯುವುದಕ್ಕೂ ಮೊದಲು ಬಂಜೆತನ ಎಂದರೇನು? ಎನ್ನುವುದನ್ನು ತಿಳಿದುಕೊಳ್ಳೋಣ. ಗರ್ಭಧರಿಸಲು ಕೆಲವು ತಿಂಗಳುಗಳೇ ಬೇಕಾಗಬಹುದು ಮತ್ತು ಗರ್ಭ ಧರಿಸುವ ತನಕ ನೀವು ಇದನ್ನು ಪ್ರಯತ್ನಿಸುತ್ತಲೇ ಇರಬೇಕು. ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೂ ಗರ್ಭಧರಿಸಲು ಸಾಧ್ಯವಾಗದೆ ಇರುವುದನ್ನು ಬಂಜೆತನ ಎಂದು ಹೇಳಬಹುದಾಗಿದೆ.
ಒಂದು ವರ್ಷದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಾ ಇದ್ದರೂ ಅದು ಸಾಧ್ಯವಾಗದೆ ಇದ್ದಲ್ಲಿ ಇದನ್ನು ಬಂಜೆತನ ಎಂದು ಹೇಳಬಹುದಾಗಿದೆ ಹಾಗಾದರೆ ಗರ್ಭ ಧರಿಸದೆ ಇರಲು ಕಾರಣ ಏನು ಎಂದು ನೋಡುವುದಾದರೆ, ಮಹಿಳೆಯು ಗರ್ಭ ಧರಿಸಬೇಕಿದ್ದರೆ ಆಗ ಋತುಚಕ್ರವು ಸರಿಯಾಗಿರಬೇಕು ಅನಿಯಮಿತ ಋತುಚಕ್ರ ದಿಂದಾಗಿ ಗರ್ಭ ನಿಲ್ಲಲು ಕಷ್ಟವಾಗಬಹುದು. ಅನಿಯಮಿತ ಋತುಚಕ್ರ ಮತ್ತು ಋತುಚಕ್ರ ಆಗದೆ ಇರುವುದು ನೀವು ನಿರಂತರವಾಗಿ ಅಂಡೋತ್ಪತ್ತಿ ಮಾಡುತ್ತಿಲ್ಲ ಎನ್ನುವುದರ ಸೂಚನೆಯಾಗಿದೆ.
ಕೆಲವೊಂದು ಸಂದರ್ಭದಲ್ಲಿ ಅನಿಯಮಿತ ಋತುಚಕ್ರವು ಕಂಡು ಬರಬಹುದು. ಆದರೆ ನಿಮಗೆ ಪದೇ ಪದೇ ಇಂತಹ ಸಮಸ್ಯೆ ಕಾಡುತ್ತಲಿದ್ದರೆ ಆಗ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು. ಹಾರ್ಮೋನ್ ಅಸಮತೋಲನ, ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ ( ಪಿಸಿಓಡಿ ಮತ್ತು ಪಿಸಿಒಎಸ್) ನಂತಹ ಕೆಲವು ಸಮಸ್ಯೆಗಳು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಿರಬಹುದು.
ಮುಖ್ಯವಾಗಿ ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಕೆಲವು ಮಹಿಳೆಯರಲ್ಲಿ ಮದ್ಯಪಾನ ಮತ್ತು ಧೂಮಪಾನದ ಅಭ್ಯಾಸವಿರುವುದು. ಇಂತವರಿಗೆ ಗರ್ಭಧರಿಸಲು ಕಷ್ಟವಾಗಬಹುದು. ಗರ್ಭ ಧರಿಸಲು ಬಯಸಿದ್ದರೆ ಆಗ ನೀವು ಮದ್ಯಪಾನ ಮತ್ತು ಧೂಮಪಾನ ಕಡೆಗಣಿಸಬೇಕು.
ಗರ್ಭ ಧರಿಸುವಂತಹ ಮಹಿಳೆಯರು ಆಲ್ಕೋಹಾಲ್ ಸೇವನೆ ಕಡೆಗಣಿಸಬೇಕು ಮತ್ತು ಧೂಮಪಾನ ಮಾಡಬಾರದು. ಯಾಕೆಂದರೆ ಇದು ಗರ್ಭದಲ್ಲಿರುವಂತಹ ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು. ಮಾನಸಿಕ ಆರೋಗ್ಯ ಅಥವಾ ಬೇರೆ ಯಾವುದೇ ರೀತಿಯ ಮನಸ್ಥಿತಿಗೆ ಸಂಬಂಧಿಸಿದ ಔಷಧಿ ತೆಗೆದು ಕೊಳ್ಳುತ್ತಿದ್ದರೆ ಆಗ ಖಿನ್ನತೆ ವಿರೋಧಿ ಔಷಧಿಗಳಲ್ಲಿ ಇರುವಂತಹ ಎಸ್ ಎಸ್ ಆರ್ ಐ ಗರ್ಭಧಾರಣೆ ಮೇಲೆ ಪರಿಣಾಮ ಬೀರಬಹುದು.
ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯ ಬೇಕಾಗಿದೆ. ನೀವು ಖಿನ್ನತೆ ವಿರೋಧಿ ಔಷಧಿ ತೆಗೆದುಕೊಳ್ಳುತ್ತಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಇದರ ಜೊತೆಗೆ ಈ ಒಂದು ಮನೆಮದ್ದನ್ನು ಬಳಸಿ ನೋಡಿ. ಸಾಮಾನ್ಯವಾಗಿ ನಮಗೆಲ್ಲ ಗೋರಂಟಿ ಎಲೆಯ ಪರಿಚಯ ಇದೆ. ಅದರಲ್ಲೂ ಹಳ್ಳಿ ಜನರಿಗೆ ಇದು ಸರ್ವೇ ಸಾಮಾನ್ಯವಾಗಿ ತಿಳಿದಿರುವ ಗಿಡ. ಈ ಗೋರಂಟಿ ಗಿಡ ಒಂದು ರೀತಿಯ ಔಷಧೀಯ ಸಸ್ಯ ಕೂಡಾ ಹೌದೂ. ಬಂಜೆತನಕ್ಕೆ ಇದು ಹೇಗೆ? ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ.
ತುಂಬಾ ವರ್ಷದಿಂದ ಮಕ್ಕಕಳಾಗದೆ ಇದ್ದರೆ ಈ ಸಲಹೆಯನ್ನು ಪಾಲಿಸಿ. ಇದಕ್ಕೆ ಮದ್ದು ಗೋರಂಟಿ ಸೊಪ್ಪು. ಗೋರಂಟಿ ಸೊಪ್ಪು ಔಷಧಿಗುಣ ಹೊಂದಿದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ. ಮಕ್ಕಳಿಲ್ಲದಿದ್ದರೆ ಹಲವಾರು ತೊಂದರೆ ಬರುತ್ತದೆ ಗರ್ಭಕೋಶವನ್ನು ಸ್ವಚ್ಚಪಡಿಸುತ್ತದೆ.
ಗೋರಂಟಿ ಎಲೆಯನ್ನು ಕುಟ್ಟಿ ಉಂಡೆ ಮಾಡಿಕೊಂಡು ಖಾಲಿಹೊಟ್ಟೆಯಲ್ಲಿ ಎರಡು ಉಂಡೆಯನ್ನು ಸೇವಿಸಬೇಕು ಆರು ತಿಂಗಳು ಉಪಯೋಗಿಸಿದರೆ ಮಕ್ಕಳು ಆಗುತ್ತದೆ ಇದನ್ನು ಟೀ ಮಾಡಿ ಕುಡಿದರೆ ಒಳ್ಳೆಯದು. ಗೊರಂಟಿ ಎಲೆಯನ್ನು ಒಣಗಿಸಿ ಪುಡಿಮಾಡಿಕೊಂಡು ಉಪಯೋಗಿಸಬಹುದು ಗೋರಂಟಿ ಎಲೆಯಿಂದ ಹಲವಾರು ಔಷಧಿ ಗುಣಗಳಿವೆ. ಇದು ಶೇಕಡಾ ನೂರರಷ್ಟು ನೈಸರ್ಗಿಕವಾದ ಮನೆಮದ್ದು ಆಗಿರುವುದರಿಂದ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.