ಗೂಗಲ್ ಮ್ಯಾಪ್ನ ಈ ಹೊಸ ಅಪ್ ಡೇಟ್ ಅನ್ವಯ,ಬಳಕೆದಾರರು ಪ್ರಸ್ತುತ ಮ್ಯಾಪ್ ನಲ್ಲಿ ಇರುವ ರಸ್ತೆಗಳ ಹೆಸರು, ಮಾಹಿತಿ ಸೇರಿದಂತೆ ಯಾವುದಾದರೂ ಹೊಸ ಬದಲಾವಣೆಗಳು ಆಗಿದ್ದರೆ ಅಂತಹ ಬದಲಾವಣೆಗಳನ್ನು ಸೇರಿಸಬಹುದಾಗಿದೆ. ಹಾಗಾದರೆ ಗೂಗಲ್ ಮ್ಯಾಪ್ನಲ್ಲಿ ನಿಮ್ಮ ಮನೆ, ಊರಿನ ಮಾರ್ಗವನ್ನು ಸೇರಿಸುವುದು ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಿಶ್ವದ ಪ್ರಸಿದ್ಧ ಸರ್ಚ್ ಇಂಜಿನ್ ಆಗಿರುವ ಗೂಗಲ್ ಇತ್ತೀಚಿನ ದಿನಗಳಲ್ಲಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳುವ ಮೂಲಕ ತನ್ನ ಬಳಕೆದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಗೂಗಲ್ ಮ್ಯಾಪ್ನಲ್ಲೂ ಅನೇಕದ ಅಪ್ಡೇಟ್ಗಳನ್ನು ನೀಡಿ ಇದು ಜನರಿಗೆ ಬಹಳಷ್ಟು ಸಹಕಾರಿಯಾಗಿದೆ.
ಗುರುತು ಪರಿಚಯವೇ ಇಲ್ಲದ ರಸ್ತೆಗಳಲ್ಲಿ ಓಡಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಸದ್ಯ ಶೀಘ್ರದಲ್ಲೇ ಗೂಗಲ್ ಮ್ಯಾಪ್ನಲ್ಲಿ ಇದುವರೆಗೂ ಗುರುತಿಸಿರದ ಹಾಗೂ ತಪ್ಪಾಗಿ ಗುರುತಿಸಲ್ಪಟ್ಟ ಸ್ಥಳಗಳನ್ನ ಬದಲಾವಣೆ ಮಾಡುವ ಆಯ್ಕೆಯನ್ನು ನೀಡಲಿದೆ. ಗೂಗಲ್ ಮ್ಯಾಪ್ನ ಈ ಹೊಸ ಅಪ್ಡೇಟ್ ನಲ್ಲಿ ಬಳಕೆದಾರರು ಪ್ರಸ್ತುತ ಮ್ಯಾಪ್ ನಲ್ಲಿ ಇರುವ ರಸ್ತೆಗಳ ಹೆಸರು, ಮಾಹಿತಿ ಸೇರಿದಂತೆ ಯಾವುದಾದರೂ ಹೊಸ ಬದಲಾವಣೆಗಳು ಆಗಿದ್ದರೆ ಅಂತಹ ಬದಲಾವಣೆಗಳನ್ನು ಸೇರಿಸಬಹುದಾಗಿದೆ. ಅಲ್ಲದೆ ಹೊಸ ಊರು, ರಸ್ತೆ, ಮನೆಗಳಿದ್ದರೆ ಅವುಗಳನ್ನು ಕೂಡಾ ಮ್ಯಾಪ್ ನಲ್ಲಿ ಸೇರ್ಪಡೆ ಮಾಡಬಹುದಾಗಿದೆ. ಗೂಗಲ್ ಈ ಹೊಸ ಸೌಲಭ್ಯಕ್ಕೆ ‘ಡ್ರಾಯಿಂಗ್’ ಎಂದು ನಾಮಕರಣ ಮಾಡಿದೆ.
ಇದು ಮೈಕ್ರೋಸಾಫ್ಟ್ ನ ಮೈಕ್ರೋಸಾಫ್ಟ್ ಫೇಯಿಂಟ್ ಫೀಚರ್ ಅನ್ನುಹೊಲುತ್ತಿದ್ದು, ಅತ್ಯಂತ ಸುಲಭವಾಗಿ ಗೂಗಲ್ ಮ್ಯಾಪ್ ನಲ್ಲಿ ಬದಲಾಗಣೆ ಮಾಡಬಹುದಾಗಿದೆ. ಈ ಸೌಲಭ್ಯ ಮುಂಬರುವ ತಿಂಗಳಿನಿಂದ ವಿಶ್ವದ 80 ರಾಷ್ಟ್ರಗಳಲ್ಲಿ ಬಳಕೆಗೆ ಸಿಗಲಿದೆ ಎಂದು ವರದಿಯಾಗಿದೆ. Maps.google.com ನಲ್ಲಿ ರಸ್ತೆ ಕಾಣೆಯಾಗಿದೆ ಎಂಬುದು ಕಂಡು ಬಂದಾಗ, ಸೈಡ್ ಮೆನು ಬಟನ್ ಕ್ಲಿಕ್ ಮಾಡಿ.
ಮ್ಯಾಪ್ ಎಡಿಟ್ಗೆ ಹೋಗಿ ಹಾಗೂ ಕಾಣೆಯಾದ ರಸ್ತೆ ಎಂಬುದನ್ನು ಆಯ್ಕೆಮಾಡಿ. ಈಗ ಮ್ಯಾಪ್ನಲ್ಲಿ ನಾಪತ್ತೆಯಾಗಿರುವ ರಸ್ತೆಯನ್ನು ಎಡಿಟ್ ಮಾಡಬಹುದು ಎಂದು ಗೂಗಲ್ ಮ್ಯಾಪ್ ಉತ್ಪನ್ನ ನಿರ್ದೇಶಕ ಕೆವಿನ್ ರೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲು ನೀವು ನಿಮ್ಮ ಡೆಸ್ಕ್ಟಾಪ್ಗಳ ಮೂಲಕ maps.google.comಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲವಾದರೆ, ಆಗ ಸೈಡ್ ಮೆನು ಬಟನ್ ಕ್ಲಿಕ್ ಮಾಡಬೇಕು.
ಅಲ್ಲಿ edit the map ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಬಳಿಕ missing road ಎಂದು ಆರಿಸಿಕೊಳ್ಳಬೇಕು. ರಸ್ತೆ ಹಾದುಹೋಗಿರುವಂತೆ ಗೆರೆ ಎಳೆಯಬೇಕು. ಹೀಗೆ ಜೋಡಿಸಿದ ಹೊಸ ರಸ್ತೆಗೆ ಹೆಸರನ್ನು ಕೂಡ ಸೂಚಿಸಬಹುದು. ರಸ್ತೆಗಳನ್ನು ಸೇರಿಸಿ, ಅಥವಾ ತಪ್ಪಾಗಿ ಗುರುತಾಗಿರುವ ರಸ್ತೆ ಸರಿಪಡಿಸಿ ಬಳಿಕ ಹೆಸರು ದಾಖಲಿಸಬಹುದು. ಈ ಆಯ್ಕೆಯನ್ನು ಗೂಗಲ್ ನೀಡುತ್ತಿದೆ.
ಇನ್ನೂ ನಿಮ್ಮ ಊರಿನ ಹೆಸರನ್ನು ಗೂಗಲ್ ಮ್ಯಾಪ್ ನಲ್ಲಿ ಸೇರಿಸಬೇಕು ಎಂದಿದ್ದರೆ ಬಹಳ ಸುಲಭ ಇದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಮ್ಯಾಪ್ ನ ಸೆಟಲೈಟ್ ಮುಡ್ ನಲ್ಲಿ ಓಪನ್ ಮಾಡಿಕೊಳ್ಳಬೇಕು. ನಂತರ ಮೇಲೆ ಎಡಭಾಗದಲ್ಲಿ ಕಾಣುವ ಮೂರು ಸಣ್ಣ ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು. ಹಾಗೆ ಕ್ಲಿಕ್ ಮಾಡಿದಾಗ ಕೊನೆಯಲ್ಲಿ ಸೆಂಡ್ ಫೀಡ್ಬ್ಯಾಕ್ ಎಂಬ ಆಯ್ಕೆ ಕಾಣುತ್ತದೆ. ಅಲ್ಲಿಯೇ ಯುವರ್ ಒಪೀನಿಯನ್ ಅಬೌಟ್ ಮ್ಯಾಪ್ ಎಂದಿರುವಲ್ಲಿ ಕ್ಲಿಕ್ ಮಾಡಬೇಕು.
ನಂತರ ಊರಿನ ಚಿತ್ರ ಕಾಣುವಲ್ಲಿ ಅದರ ಒಂದು ಸ್ಕ್ರೀನ್ ಶಾಟ್ ತೆಗೆದುಕೊಂಡು ಊರಿನ ಸರಹದ್ದನ್ನು ಹಳದಿ ಬಣ್ಣದಿಂದ ಗುರುತಿಸಬೇಕು ಹಾಗೂ ಬಲ ಭಾಗದಲ್ಲಿ ಕಾಣುವ ಈ ರೈಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಾಗೆಯೇ ಗೂಗಲ್ ಪಿನ್ ನಲ್ಲಿ ನಾವು ಸೇರಿಸುತ್ತಿರುವ ಈ ಉರು ಗೂಗಲ್ ಮ್ಯಾಪ್ ನಲ್ಲಿ ಇಲ್ಲ ಅದನ್ನು ಸೇರುವ ಹಾಗೆ ಕೇಳಿ ನಿಮ್ಮ ಊರಿನ ತಾಲೂಕು, ಜಿಲ್ಲೆ, ಪಿನ್ ಕೋಡ್ ಬರೆದು ಹಾಕಿ ಬಾಣದ ಗುರುತು ಇರುವಲ್ಲಿ ಫೀಡ್ಬ್ಯಾಕ್ ಕಳಿಸಬೇಕು.
ಯಾವುದೇ ಬಳಕೆದಾರ ಗೂಗಲ್ ಮ್ಯಾಪ್ ನಲ್ಲಿ ಹೊಸ ಬದಲಾವಣೆಗಳನ್ನು ಮಾಡಿದ ಬಳಿಕ ಆ ಮಾಹಿತಿ ಸರಿ ಇದೆಯೇ ಅಥವಾ ಇಲ್ಲವೇ ಎಂಬುವುದನ್ನು ಅರಿಯಲು ಗೂಗಲ್ 7 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಗೂಗಲ್ ಫೋಟೋ ಅಪ್ ಡೇಟ್ ಸೌಲಭ್ಯದಲ್ಲಿಯೂ ಹೊಸ ಬದಲಾವಣೆಗಳನ್ನು ಮಾಡಲು ಯೋಜನೆ ರೂಪಿಸಿದ್ದು,ಆ ಮೂಲಕ ಬಳಕೆದಾರರು ತಾವು ಹೋದ ಪ್ರದೇಶಗಳ ಕುರಿತಾಗಿ ಮಾಹಿತಿ ನೀಡುವ ಮೂಲಕ ಆ ಸ್ಥಳಗಳ ಪೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ.