ಕೆಲವು ವಿಷಯಗಳು ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತವೆ ನಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡುತ್ತದೆ ಇದರಿಂದ ಡಿಪ್ರೆಷನ್, ಸ್ಟ್ರೆಸ್ ಉಂಟಾಗುತ್ತದೆ. ನಮ್ಮ ನೆಮ್ಮದಿ ಹಾಳುಮಾಡುವ ಕೆಲವು ವಿಷಯಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ನಮಗೆ ಸಿಗದೆ ಇರುವ ವಿಷಯಗಳು, ವಸ್ತುಗಳ ಬಗ್ಗೆ ವಿಪರೀತ ಯೋಚನೆ ಮಾಡುವುದು. ಕೆಲವರು ತಮ್ಮ ಜೀವನ ಹಾಗಿರಬೇಕು, ಹೀಗಿರಬೇಕು ಎಂದು ಯೋಚನೆ ಮಾಡಿ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಾರೆ. ಪ್ರಯತ್ನ ಮಾಡದೆ ಆಸೆ ಪಡುವುದು ಚಿಂತೆಗೆ ದಾರಿ ಮಾಡಿಕೊಡುತ್ತದೆ. ಉದಾಹರಣೆ ಸತೀಶಗೆ ತಾನು ಐ.ಎ.ಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆ. ಐ.ಎ.ಎಸ್ ಅಧಿಕಾರಿ ಆದರೆ ಹೆಚ್ಚು ಸ್ಯಾಲರಿ ಬರುತ್ತದೆ ತನ್ನ ಜೀವನ ಹಾಗಿರುತ್ತದೆ ಹೀಗಿರುತ್ತದೆ ಎಂದು ಕಲ್ಪನೆ ಮಾಡಿಕೊಳ್ಳುತ್ತಾನೆ. ಆದರೆ ಆದಕ್ಕಾಗಿ ಯಾವುದೇ ಪ್ರಯತ್ನ ಮಾಡುವುದಿಲ್ಲ ಈ ರೀತಿ ಎಷ್ಟೋ ಜನ ಕಲ್ಪನೆ ಮಾಡಿಕೊಂಡು ತಮ್ಮ ನೆಮ್ಮದಿ ಹಾಳುಮಾಡಿಕೊಳ್ಳುತ್ತಾರೆ ಇದಕ್ಕೆ ಪರಿಹಾರವೆಂದರೆ ಸಿಕ್ಕಿರುವ ವಿಷಯದ ಬಗ್ಗೆ ತೃಪ್ತಿ ಹೊಂದುವುದು. ನನಗೆ ಆರೋಗ್ಯಯುತ ಶರೀರವಿದೆ ನೋಡಲು ಕಣ್ಣುಗಳಿವೆ ಎಷ್ಟೋ ಜನಕ್ಕೆ ಅದು ಇರುವುದಿಲ್ಲ ಎನ್ನುವ ಆತ್ಮ ತೃಪ್ತಿ ಭಾವನೆ ಹೊಂದಿರಬೇಕು. ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಇರುವ ವಿಷಯದ ಬಗ್ಗೆ ತೃಪ್ತಿ ಹೊಂದಿರಬೇಕು.
ನಿಮ್ಮನ್ನು ನೀವು ಬೇರೆಯವರ ಯಶಸ್ಸಿನೊಂದಿಗೆ ಹೋಲಿಸಿಕೊಳ್ಳುವುದರಿಂದ ನೆಮ್ಮದಿ ಹಾಳಾಗುತ್ತದೆ. ಉದಾಹರಣೆ ಸತೀಶ್ ಪ್ರತಿದಿನ ವಾಟ್ಸಪ್, ಫೇಸ್ ಬುಕ್ ನಲ್ಲಿ ಸ್ನೇಹಿತರು, ಸಂಬಂಧಿಕರು ಸಂತೋಷವಾಗಿರುವ ಫೋಟೊ ನೋಡಿ ಅವರು ಎಷ್ಟು ಸಂತೋಷವಾಗಿದ್ದಾರೆ ಆದರೆ ನನ್ನ ಜೀವನ ನಿರಾಶಾದಾಯಕವಾಗಿದೆ ಎಂದು ಬೇಸರದಲ್ಲಿ ಬದುಕುತ್ತಿರುತ್ತಾನೆ. ನನ್ನ ಸ್ನೇಹಿತರಿಗೆ ಸರ್ಕಾರಿ ಕೆಲಸ ಸಿಕ್ಕಿದೆ ಆದರೆ ನಾನು ನಿರುದ್ಯೋಗಿ ಆಗಿದ್ದೇನೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದನು ಇದರಿಂದ ಆತನ ಮನಸ್ಸು ಕುಗ್ಗಿಹೋಗುತಿತ್ತು. ಯಾವುದೇ ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ಆಲಸ್ಯ, ಸೋಮಾರಿತನ, ನಿರಾಶದಾಯಕ ಜೀವನವನ್ನು ನಡೆಸತೊಡಗಿದ. ಈ ರೀತಿ ಎಷ್ಟೋ ಜನ ಬೇರೆಯವರೊಂದಿಗೆ ಹೋಲಿಸಿಕೊಂಡು ಚಿಂತಿಸುತ್ತಾರೆ ಇದರಿಂದ ಅವರ ಯೋಚನಾ ಸಾಮರ್ಥ್ಯ ಕಡಿಮೆಯಾಗುತ್ತದೆ. ತಮ್ಮನ್ನು ತಾವು ವೀಕ್ ಎಂದು ಭಾವಿಸುತ್ತಾರೆ. ತನ್ನಿಂದ ಸಾಧ್ಯವಿಲ್ಲ, ತಾನು ಅನ್ ಲಕ್ಕಿ ಎನ್ನುವ ಭಾವನೆ ಬೆಳೆಯುತ್ತದೆ. ಆದ್ದರಿಂದ ನೆಮ್ಮದಿಯಾಗಿರಬೇಕೆಂದರೆ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ.
ಹೋಲಿಕೆ ಮಾಡುವುದಾದರೆ ನಿಮ್ಮೊಂದಿಗೆ ನೀವೇ ಹೋಲಿಕೆ ಮಾಡಿಕೊಳ್ಳಿ ಅಂದರೆ ನಿನ್ನೆಯ ಸಾಮರ್ಥ್ಯ ನೋಡಿಕೊಳ್ಳಿ ಅದನ್ನು ಹೇಗೆ ಅಭಿವೃದ್ದಿ ಮಾಡಿಕೊಳ್ಳಬೇಕು ಎಂಬುದನ್ನು ಯೋಚಿಸಿ. ಯಾವ ಮಿಸ್ಟೇಕ್ ನಿಮ್ಮನ್ನು ಹಿಂದುಳಿಯುವಂತೆ ಮಾಡಿದೆ ಯಾವ ರೀತಿ ಅದನ್ನು ಸರಿಮಾಡಿಕೊಳ್ಳಬೇಕು ಎಂದು ಯೋಚಿಸಿ. ಪ್ರೆಸೆಂಟ್ ನಲ್ಲಿ ಬದುಕದೆ ಇರುವುದು ಸಹ ನೆಮ್ಮದಿ ಹಾಳುಮಾಡುತ್ತದೆ. ಬಹಳಷ್ಟು ಜನ ತಮ್ಮ ಪ್ರಸೆಂಟ್ ಲೈಪ್ ನಲ್ಲಿ ಪಾಸ್ಟ್ ಮತ್ತು ಫ್ಯೂಚರ್ ಲೈಫ್ ಬಗ್ಗೆ ಯೋಚನೆ ಮಾಡುತ್ತಾರೆ ಇದರಿಂದ ನೆಮ್ಮದಿ ಹಾಳಾಗುತ್ತದೆ. ಅವರು ಹಿಂದೆ ನಡೆದ ಅಹಿತಕರ ಘಟನೆಗಳ ಬಗ್ಗೆ ಮತ್ತು ಮುಂದೆ ಏನಾದರೂ ಸಮಸ್ಯೆ ಬರಬಹುದು ಎಂದು ಚಿಂತಿಸುತ್ತಿರುತ್ತಾರೆ. ಇದರಿಂದ ನೆಮ್ಮದಿ ಹಾಳಾಗುವುದರೊಂದಿಗೆ ಪ್ರಸೆಂಟ್ ಲೈಫ್ ವೇಸ್ಟ್ ಆಗುತ್ತದೆ.
ರಿಸರ್ಚ್ ಪ್ರಕಾರ ನಾವು ಯೋಚಿಸುವ 80-90% ವಿಷಯಗಳು ನಮ್ಮ ಭವಿಷ್ಯದಲ್ಲಿ ಸಂಭವಿಸುವುದೆ ಇಲ್ಲ. ಅದು ಕೇವಲ ನಮ್ಮ ಕಲ್ಪನೆಯಾಗಿರುತ್ತದೆ. ಫ್ರೆಂಚ್ ಪಿಲೋಸೋಫರ ಮಿಷೆಲ್ ದಿ ಮೊಂಟೆನಿಯಾ ಅವರು ನಾನು ನನ್ನ ಜೀವನ ಬಹಳಷ್ಟು ಭಯಾನಕ, ದುರಾದೃಷ್ಟಗಳಿಂದ ಕೂಡಿದೆ ಎಂದು ಯೋಚನೆ ಮಾಡುತ್ತಿದ್ದೆ ಆದರೆ ಅದ್ಯಾವುದು ಕೂಡ ನನ್ನ ಜೀವನದಲ್ಲಿ ಸಂಭವಿಸಲೆ ಇಲ್ಲ ಎಂದು ಹೇಳುತ್ತಾರೆ. ನೆಮ್ಮದಿಯಾಗಿರಬೇಕೆಂದರೆ ಆದಷ್ಟು ಪ್ರಸೆಂಟ್ ನಲ್ಲಿ ಬದುಕುವುದನ್ನು ಕಲಿಯಿರಿ ಅನಾವಶ್ಯಕ ಪಾಸ್ಟ್ ಮತ್ತು ಫ್ಯೂಚರ್ ಬಗ್ಗೆ ಯೋಚಿಸುವುದನ್ನು ಕಡಿಮೆ ಮಾಡಿ ಈ ರೀತಿಯ ಯೋಚನೆಯಿಂದ ಟೈಮ್ ವೇಸ್ಟ್ ಆಗುತ್ತದೆ ಹೊರತು ಯಾವುದೇ ಪ್ರಯೋಜನವಿಲ್ಲ. ಚಿಕ್ಕ ಚಿಕ್ಕ ಆಕ್ಟಿವಿಟೀಸ್ ರೂಢಿಸಿಕೊಳ್ಳಬೇಕು. ನಿಸರ್ಗಧಾಮಗಳಿಗೆ ಭೇಟಿಕೊಟ್ಟಾಗ ಯಾವುದೇ ಚಿಂತೆ ಮಾಡದೆ ನೇಚರನ್ನು ಎಂಜಾಯ್ ಮಾಡುವುದು. ರುಚಿಕರ ತಿನಿಸುಗಳನ್ನು ತಿನ್ನುವಾಗ ಆ ರುಚಿಯನ್ನು ಮುಕ್ತವಾಗಿ ಸ್ವಾದಿಸುವುದು. ಇಷ್ಟವಾಗುವ ಕೆಲಸ ಮಾಡುವಾಗ ಬೇರೆ ವಿಷಯದ ಬಗ್ಗೆ ಯೋಚನೆ ಮಾಡದೇ ಇರುವುದು. ಧ್ಯಾನ ಮಾಡುವುದರಿಂದಲೂ ನೆಮ್ಮದಿಯಾಗಿರಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.