ಈ ಮಾತುಗಳು ನಿಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತವೆ ನೋಡಿ ವಿಡಿಯೋ

0 10

ನಾವು ಜೀವನದಲ್ಲಿ ಬದುಕಬೇಕು ಎಂದಾದರೆ ಒಂದಿಷ್ಟು ಗುಣಗಳನ್ನು ಮತ್ತು ವರ್ತನೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಜನರು ವ್ಯಕ್ತಿ ಒಳ್ಳೆಯವನಿದ್ದಾನೆ ಎಂದು ಹೇಳುವುದು ಕೇವಲ ಅವನ ಗುಣ ಮತ್ತು ನಡತೆಯಿಂದ ಮಾತ್ರ. ಅವನಲ್ಲಿ ಇರುವ ಯಾವುದೇ ಆಸ್ತಿ ಮತ್ತು ಸಂಪತ್ತುಗಳಿಂದ ಅಲ್ಲ. ಹಾಗೆಯೇ ಖುಷಿಯಾಯಿತು ಎಂದಾಗ ಬಹಳ ಹಿಗ್ಗಬಾರದು. ದುಃಖವಾಯಿತು ಎಂದರೆ ಬಹಳ ಕುಗ್ಗುಬಾರದು. ಏನೇ ಬಂದರೂ ಧೈರ್ಯದಿಂದ ಎದುರಿಸುವ ಛಲ ಇರಬೇಕು. ಆದ್ದರಿಂದ ನಾವು ಇಲ್ಲಿ ಜೀವನಕ್ಕೆ ಆಧಾರವಾಗುವ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಹಂಕಾರ ಎನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಕಲ್ಲನ್ನು ನೀರಿಗೆ ಹಾಕಿದರೆ ಅದು ಮುಳುಗಲೇಬೇಕು. ಕಾರಣ ಕಲ್ಲು ಭಾರವಾಗಿರುತ್ತದೆ. ಹಾಗಾಗಿ ಯಾರನ್ನು ಕೀಳಾಗಿ ನೋಡಬಾರದು. ದಿನದ ಸಮಯ ಸಾಗುತ್ತಿರುತ್ತದೆ. ಗಡಿಯಾರದ ಮುಳ್ಳು ಮೇಲೆ ಹೋಗಲೇಬೇಕು ಮತ್ತು ಕೆಳಗೆ ಬರಲೇಬೇಕು. ಹಾಗಾಗಿ ಒಂದು ಮನುಷ್ಯನಿಗೆ ಈಗ ಇದ್ದ ಪರಿಸ್ಥಿತಿ ಸ್ವಲ್ಪ ಸಮಯದ ನಂತರ ಹೀಗೆಯೇ ಇರುವುದಿಲ್ಲ. ಬದಲಾವಣೆ ಜಗದ ನಿಯಮ ಆಗಿದೆ.

ಹಾಗೆಯೇ ಯಾರೇ ನಮ್ಮ ಹಿಂದೆ ಏನೇ ಮಾತನಾಡಿಕೊಂಡರೂ ತಲೆಕೆಡಿಸಿಕೊಳ್ಳಬಾರದು. ಏಕೆಂದರೆ ಅವರ ಬಗ್ಗೆ ಅವರಿಗೆ ತಿಳಿದಿದ್ದರೆ ಸಾಕು. ತೋರುಬೆರಳು ಬೇರೆಯವರನ್ನು ತೋರಿಸಿದರೆ ಹೆಬ್ಬೆರಳು ಅವರನ್ನೇ ತೋರಿಸುತ್ತದೆ ಎಂದು ತೋರಿಸುವವರಿಗೆ ತಿಳಿಯುವುದಿಲ್ಲ. ಹಾಗೆಯೇ ಇನ್ನೊಬ್ಬರ ವಿಷಯಕ್ಕೆ ತಲೆಕೆಡಿಸಿಕೊಳ್ಳಬಾರದು. ಕೆಲವರು ತಲೆಕೆಡಿಸಿಕೊಂಡು ತಮ್ಮ ತನವನ್ನು ಕಳೆದುಕೊಳ್ಳುತ್ತಾರೆ. ಇದು ಸರಿ ಅಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ತಿಳಿಯುತ್ತದೆ ಯಾವುದು ಸರಿ ಯಾವುದು ತಪ್ಪು ಎನ್ನುವುದು.

ನೂರು ಖುಷಿ ಬೇಕು ಒಂದು ದುಃಖ ಮರೆಯಲು ಆದರೆ ಒಂದು ದುಃಖ ಸಾಕು ಜೀವನದ ಖುಷಿಯನ್ನು ಕಳೆಯಲು ಎಂಬ ಮಾತಿದೆ. ಜೀವನದಲ್ಲಿ ಎಲ್ಲರಿಗೂ ಇಷ್ಟಪಟ್ಟಿರುವುದು ಸಿಗುವುದಿಲ್ಲ. ಆದರೆ ಸಿಕ್ಕಾಗ ಅದರ ಅವಶ್ಯಕತೆ ಇರುವುದಿಲ್ಲ. ಆದರೆ ಭರವಸೆಯೇ ಬದುಕು. ನಂಬಿಕೆ ಇಟ್ಟು ಹೆಜ್ಜೆ ಇಟ್ಟರೆ ಮಾತ್ರ ಅವರವರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಜೀವನದಲ್ಲಿ ಅವರವರ ಗುರಿ ತಲುಪಿದರೆ ಜೀವನ ಸಾರ್ಥಕ ಆಗುತ್ತದೆ. ಹಾಗಾಗಿ ಮನುಷ್ಯ ಬುದ್ಧಿಜೀವಿಯಾಗಿದ್ದು ತಾನೂ ಬದುಕಿ ಜೊತೆ ಇರುವವರಿಗೆ ಸಹಾಯ ಮಾಡಬೇಕು.

Leave A Reply

Your email address will not be published.