ಹಳ್ಳಿಯಲ್ಲಿ ಮನೆ, ಆಸ್ತಿ ಹಾಗೂ ಜಮೀನು ಇದ್ದವರಿಗೆ, ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

0 5

Good news from the state government for those who have house property and land in the village: ಹಳ್ಳಿಗಳಲ್ಲಿರುವ ಎಲ್ಲಾ ಮನೆ ಹಾಗೂ ಫ್ಲ್ಯಾಟ್ ಮತ್ತು ಇತರ ಆಸ್ತಿಯು ಇ-ಖಾತೆಯ‌ ಸಮಸ್ಯೆಯನ್ನ ರಾಜ್ಯ ಸರ್ಕಾರ ಬಗೆಹರಿಸಿದೆ. ಇ- ಖಾತೆ ಹಾಗೂ ಇ- ಸ್ವತ್ತು ತಂತ್ರಾಂಶದ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿರುವ ಮನೆ ಹಾಗೂ ಫ್ಲ್ಯಾಟ್ ಗಳಿಗೆ ಸರ್ಕಾರದಿಂದ ಮಾನ್ಯತೆ ನೀಡಿ ಅವುಗಳಿಗೂ ಕೂಡ ಯಾವುದೇ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ದೊರೆಯುವಂತೆ ಹಾಗೂ ಹಳ್ಳಿಗಳಲ್ಲಿರುವ ಮನೆಗಳಿಗೆ ಹಾಗೂ ಫ್ಲಾಟ್ ಗಳಿಗೆ ಇ-ಸ್ವತ್ತು ತಂತ್ರಾಂಶದಡಿ ಸೇರ್ಪಡೆಗೊಳಿಸಿ

ಪ್ರಾಪರ್ಟಿ ಐಡಿ ನಂಬರ್ (Property ID Number) ಅಂದರೆ ಆಸ್ತಿಯ ಸಂಖ್ಯೆಯ ನೀಡುವುದರ ಮೂಲಕ ಹೇಗೆ ಲೇಔಟ್ ಮಾಡಿ NA ಮಾಡಿಸಿ ಅಂದರೆ ಕೃಷಿ ಭೂಮಿಯನ್ನು ವಾಸಿಸಲು ಮನೆಗಾಗಿ ಭೂ ಪರಿವರ್ತನೆ ಮಾಡಿಸಿ ಪ್ಲಾಟ್ಗಳನ್ನು ಹಾಕಿ ಮಾರಾಟ ಮಾಡಿರುವವರಂತೆ ಹಳ್ಳಿಗಳಲ್ಲಿರುವ ಹಿಂದಿನ ಕಾಲದ ಮನೆಗಳು ಹಾಗೂ ಫ್ಲಾಟ್ ಗಳು ಕೂಡ ಅಷ್ಟೇ ಪ್ರಮಾಣದ ಬೆಲೆ ಬಾಳುವಂತೆ ಅವುಗಳಿಗೂ ಕೂಡ ಕಂದಾಯ ಫ್ಲ್ಯಾಟ್ ಹಾಗೂ ಕಂದಾಯ ನಿವೇಶನಗಳೆಂದು ಸರ್ಕಾರ ಅನುಮೋದನೆ ನೀಡಿದೆ.

ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ ಏರಿಸಿದ ನಂತರ ಅವುಗಳ ಇ-ಸ್ವತ್ತು ತಂತ್ರಾಂಶದಡಿಯಲ್ಲಿ ನಿರ್ವಹಿಸಿದ ಖಾತೆಗಳನ್ನು ಇ- ಆಸ್ತಿ ತಂತ್ರಾಂಶದಡಿಯಲ್ಲಿ ದಾಖಲಿಸಲು ಅವಕಾಶ ನೀಡುವ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿದೆ.

ಇದರಿಂದ ರಾಜ್ಯದ ಒಟ್ಟು 302 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 175 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ- ಖಾತೆ ನೀಡಿಕೆ ಇದ್ದ ಅಡೆತಡೆಗಳು ಬಗೆಹರಿಯಲಿದೆ ಉಳಿದ ನಗರ ಸ್ಥಳೀಯ ಸಂಸ್ಥೆಗಳು ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವುದರಿಂದ ಅವುಗಳ ವ್ಯಾಪ್ತಿಯಲ್ಲಿನ ಈ ಖಾತೆಯ ಸಮಸ್ಯೆಗಳು ಬಗೆಹರಿಯಲು ಸುಪ್ರೀಂ ಕೋರ್ಟ್ ನೀಡಿರುವ ತಡೆಯೋಚನೆ ತೆರವುಗೊಳ್ಳುವವರೆಗೆ ಕಾಯಬೇಕಾಗುತ್ತದೆ.

ಇದನೊಮ್ಮೆ ಓದಿ..ಪಾನ್ ಕಾರ್ಡ್ ಇದ್ದವರು ಇಲ್ಲಿ ಗಮನಿಸಿ, Update ಮಾಡಿಸಿ ಇಲ್ಲ ರದ್ದಾಗಲಿದೆ ನಿಮ್ಮ ಪಾನ್ ಕಾರ್ಡ್

ಪೌರಾಡಳಿತ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವ ಎಂ ಟಿ ಬಿ ನಾಗರಾಜು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಇ- ಸ್ವತ್ತು ಆಸ್ತಿಗಳನ್ನು ಡಿಜಿಟಲ್ ಕರಣ ಮಾಡುವಾಗ ಅಧಿಕೃತ ಹಾಗೂ ಅನಧಿಕೃತ ಆಸ್ತಿಗಳ ವರ್ಗೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯದ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಶರತ್ ನ್ನು ವಿಧಿಸಲಾಗಿದೆ.ಇ-ಖಾತೆ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚನೆ ಯಾಗುವುದು ಎಂದು ಸಚಿವ ಎಂ ಟಿ ಬಿ ನಾಗರಾಜು ವಿವರಿಸಿದ್ದಾರೆ.

Leave A Reply

Your email address will not be published.