ಮೋದಿ ಸರ್ಕಾರದ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ಪ್ರಧಾನಿ ಜನ ಧನ್ (Jan Dhan) ಯೋಜನೆ (ಪಿಎಂಜೆಡಿವೈ) ಇದು 6 ವರ್ಷಗಳನ್ನು ಪೂರೈಸಿದೆ. 2014ರಲ್ಲಿ ಪ್ರಧಾನಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಆಗಸ್ಟ್ 15 ರಂದು ಜನ-ಧನ್ ಯೋಜನೆಯನ್ನು ಪ್ರಾರಂಭಿಸಿದರು. ಜನರ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಇದರ ಉದ್ದೇಶವಾಗಿತ್ತು. ಈ ಮಹತ್ವದ ಯೋಜನೆಯು ಆರು ವರ್ಷಗಳನ್ನು ಪೂರೈಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಈ ಯೋಜನೆ ಯಶಸ್ಸಿಗೆ ಕಾರಣರಾದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ಈ ಯೋಜನೆಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಎಲ್ಲರ ಮುಂದೆ ಇಟ್ಟಿದ್ದಾರೆ.
ಜನ್ ಧನ್ ಒಂದು ಖಾತೆ ಆದರೆ ಅದರಲ್ಲಿ ಹಲವು ಪ್ರಯೋಜನಗಳಿವೆ. ಈ ಯೋಜನೆ ಆರಂಭವಾಗಿ 6 ವರ್ಷ ಪೂರ್ಣಗೊಂಡಿದೆ.ಪ್ರಧಾನಿ ಮೋದಿ ಅವರ ಯೋಜನೆಯಿಂದ ಬ್ಯಾಂಕ್ ಖಾತೆ ಇಲ್ಲದ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಿತ್ತು. ಬ್ಯಾಂಕ್ ಕ್ಷೇತ್ರದಲ್ಲಿ ಹೊಸ ಸೃಷ್ಟಿಯಾಯಿತು. 2020ರ ಆಗಸ್ಟ್ 19ರ ತನಕ ಇದರ ಅಡಿಯಲ್ಲಿ 40 ಕೋಟಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಇದರಲ್ಲಿ ಶೇಕಡಾ 63.6 ರಷ್ಟು ಫಲಾನುಭವಿಗಳು ಗ್ರಾಮೀಣ ಭಾಗದವರು ಆಗಿದ್ದಾರೆ. ಸಾಮನ್ಯವಾಗಿ ಯಾವುದೇ ಬ್ಯಾಂಕ್ ನಲ್ಲಿ ನೀವು ಖಾತೆ ತೆರೆಯಬೇಕಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕು. ಆದರೆ ಈ ಜನ ಧನ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ಉಚಿತವಾಗಿ ತೆರೆಯಬಹುದು. ಖಾತೆ ತೆರೆದು ಆರು ತಿಂಗಳು ಆದಮೇಲೆ ಸಾಲವನ್ನು ನೀಡಲಾಗುತ್ತದೆ. ಗರಿಷ್ಟ 10,000 ರೂಪಾಯಿಯವರೆಗೂ ಸಾಲ ನೀಡಲಾಗುವುದು. ಡೆಬಿಟ್ ಕಾರ್ಡ್ ನಿಂದಾ ಏಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದು.
ಈ ಜನ್ ಧನ್ ಖಾತೆ ಹೊಂದಿದವರಿಗೆ 2 ಲಕ್ಷದ ವರೆಗೂ ಅಪಘಾತ ವಿಮೆ ನೀಡಲಾಗಿದೆ.ಖಾತೆ ಮಾಡಿಸದವರು ಮರಣ ಹೊಂದಿದರೆ 30,000 ರೂಪಾಯಿ ಜೀವ ವಿಮೆ ನೀಡಲಾಗುವುದು. ನೆಟ್ ಬ್ಯಾಂಕಿಂಗ್ ಸೌಲಭ್ಯ ನೀಡಲಾಗುವುದು. ಇನ್ನೂ ಇದರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ನಲ್ಲಿ, ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯನ್ನು 6 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು, ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಕೊನೆಗೂ ಇದು ಗೇಮ್ ಚೇಂಜರ್ ಎಂದು ಸಾಬೀತಾಯಿತು. ಇದು ಬಡತನದಲ್ಲಿ ಸಿಲುಕಿರುವವರಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಅದರಲ್ಲಿ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದವರು ಮತ್ತು ಮಹಿಳೆಯರು. ಈ ಯೋಜನೆಗಾಗಿ ಕೆಲಸ ಮಾಡಿದವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಜನ ಧನ್ ಯೋಜನೆ ಇದು ಗೇಮ್ ಚೇಂಜರ್ ಹೇಗೆ? ಎಂದು ನೋಡುವುದಾದರೆ, ಆಗಸ್ಟ್ 2020 ರವರೆಗೆ ಈ ಯೋಜನೆಯಡಿ 40.35 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಒಟ್ಟು ಬ್ಯಾಂಕ್ ಖಾತೆಗಳಲ್ಲಿ 55. 2 ಪ್ರತಿಶತ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಜನ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ 64 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 36 ಪ್ರತಿಶತ ನಗರಗಳಲ್ಲಿವೆ. ಇದರಲ್ಲಿ ಶೂನ್ಯ ಬ್ಯಾಲೆನ್ಸ್ ಮೂಲಕ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ 2 ಲಕ್ಷ ಅಪಘಾತ ವಿಮೆ ಲಭ್ಯವಿದೆ, ಇದು ಸಂಪೂರ್ಣವಾಗಿ ಉಚಿತವಾಗಿದೆ. ಜನ ಧನ್ ಖಾತೆಗಳಲ್ಲಿ ಡೆಬಿಟ್ ಕಾರ್ಡ್ಗಳನ್ನು ಪಡೆಯುವ ಸೌಲಭ್ಯವೂ ಇದೆ. ಪಿಎಂ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸರ್ಕಾರವು 2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಮಹಿಳೆಯರ ಖಾತೆಗಳಲ್ಲಿ 30,705 ಕೋಟಿ ರೂ. ಜಮಾ ಮಾಡಿದೆ. ಕರೋನಾ ಬಿಕ್ಕಟ್ಟಿನಿಂದಾಗಿ ಇಡೀ ದೇಶವು ಲಾಕ್ಡೌನ್ ಆಗಿದ್ದ ಸಮಯ ಇದು. ಜನ ಧನ್ ಯೋಜನೆ ಅಡಿಯಲ್ಲಿ 8 ಕೋಟಿ ಜನರಿಗೆ ಮೋದಿ ಸರ್ಕಾರ ಅನೇಕ ಯೋಜನೆಗಳ ಹಣವನ್ನು ನೇರ ಲಾಭ ವರ್ಗಾವಣೆಯ ಮೂಲಕ ವರ್ಗಾಯಿಸಿದೆ.