ಇಂದಿನ ಕಾಲದಲ್ಲಿ ಈಗಿನ ಜೀವನ ಶೈಲಿಯಲ್ಲಿ ಬಹಳಷ್ಟು ಜನ ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಮನಸ್ಸಿನ ಸ್ಥಿಮಿತವನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗದೆ ಗೊಂದಲದ ಜೀವನದಲ್ಲಿ ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವದು ಸರ್ವೇಸಾಮಾನ್ಯವಾಗಿದೆ. ನಿದ್ರಾಹೀನತೆಯಿಂದ ಅನೇಕ ರೋಗ ರುಜಿನಗಳು ಬರುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ ಇದಕ್ಕೆ ಸರಿಯಾದ ಔಷಧವನ್ನು ಮಾಡಿಕೊಳ್ಳುವುದು ಉತ್ತಮ. ನಿದ್ರಾಹೀನತೆ ಸಮಸ್ಯೆಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಔಷಧಿಯ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
ನಾಲ್ಕು ದೊಡ್ಡಪತ್ರೆ ಎಲೆಯನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಸರಿಯಾಗಿ ರುಬ್ಬಿಕೊಳ್ಳಬೇಕು. ತದನಂತರ ಅದನ್ನು ಸರಿಯಾಗಿ ಸೋಸಿಕೊಳ್ಳಬೇಕು. ಈ ದೊಡ್ಡಪತ್ರೆಯ ರಸಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಸರಿಯಾಗಿ ಕಲಕಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ರಾತ್ರಿ ಮಲಗುವ ವೇಳೆಯಲ್ಲಿ ಕುಡಿಯಬೇಕು. ಇದನ್ನು ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ತಡೆಗಟ್ಟಬಹುದು. ನಾಲ್ಕೈದು ಪುದಿನ ಟೊಂಗೆಯನ್ನು ತೆಗೆದುಕೊಳ್ಳಬೇಕು. ಅದನ್ನು ಒಂದು ಕಪ್ ನೀರಿನಲ್ಲಿ ಸರಿಯಾಗಿ ಅರ್ಧ ಗಂಟೆಗಳಷ್ಟು ಕಾಲ ನೆನಸಿಟ್ಟುಕೊಳ್ಳಬೇಕು.
ಈ ನೀರನ್ನು ನೀವು ಮಲಗುವ ಮುಂಚೆ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು. ಹಾಗೆ ನಿದ್ರಾಹೀನತೆಗೆ ಇನ್ನೊಂದು ವಿಶೇಷ ಮನೆಮದ್ದು ಮಾಡಿಕೊಳ್ಳುವ ವಿಧಾನ ಎಂದರೆ ಅರ್ಧ ಚಮಚ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಿ ಸಮವಾಗಿ ಹುರಿದುಕೊಳ್ಳಬೇಕು. ಹಾಗೆ ಒಂದು ಬಾಳೆಹಣ್ಣನ್ನು ಸರಿಯಾಗಿ ತುಂಡು ಮಾಡಿಕೊಂಡು ಇಟ್ಟುಕೊಳ್ಳಬೇಕು. ಹುರಿದ ಜೀರಿಗೆಯನ್ನು ಕತ್ತರಿಸಿಟ್ಟ ಬಾಳೆಹಣ್ಣುಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಬಾಳೆಹಣ್ಣು ಜೀರಿಗೆ ಮಿಶ್ರಣವನ್ನು ರಾತ್ರಿ ಮಲಗುವ ಮುಂಚೆ ಸೇವಿಸಬೇಕು.
ಹೀಗೆ ಸೇವಿಸುವುದರಿಂದ ನಿದ್ರಾ ಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು. ಇಂತಹ ಔಷಧವನ್ನು ಸೇರಿಸುವುದರ ಜೊತೆಗೆ ಪ್ರತಿಯೊಬ್ಬರೂ ಮನಸ್ಸಿನ ಹಿಡಿತದಲ್ಲಿಟ್ಟುಕೊಳ್ಳುವ ಕೆಲಸವನ್ನು ಮಾಡಬೇಕು. ಇದೇ ನಿದ್ರಾಹೀನತೆಗೆ ಮುಖ್ಯವಾದ ಔಷಧವಾಗಿದೆ. ಹಾಗೆ ಪ್ರತಿನಿತ್ಯ ಯೋಗಾಭ್ಯಾಸ ಪ್ರಾಣಾಯಾಮಗಳನ್ನು ಮಾಡುವುದರಿಂದಲೂ ಮನಸ್ಸಿನ ಸ್ಥಿಮಿತವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿದ್ರಾಹೀನತೆಯು ಕಡಿಮೆಯಾಗುತ್ತದೆ. ಅದರ ಜೊತೆಗೆ ಔಷಧವನ್ನು ಮನೆಯಲ್ಲೇ ಮಾಡಿ ಸೇವಿಸುವುದರಿಂದ ನಿದ್ರಾ ಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.