ನಾವಿಂದು ನಿಮಗೆ ಒಳ್ಳೆಯ ಆರೋಗ್ಯಕರವಾಗಿರುವಂತ ರುಚಿಕರವಾಗಿರುವಂತಹ ತಿನಿಸನ್ನು ಮಾಡುವ ರೆಸಿಪಿಯನ್ನು ತಿಳಿಸಿಕೊಡುತ್ತವೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಇದನ್ನು ಸೇವಿಸಬಹುದು ಇದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ತುಂಬಾ ಉಪಯೋಗ ಆಗುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಹಾಗಾದರೆ ಅದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಈ ಆಹಾರ ಪದಾರ್ಥವನ್ನು ಮಾಡುವುದಕ್ಕೆ ಯಾವ ಸಾಮಗ್ರಿಗಳು ಬೇಕು ಎಂಬುದನ್ನು ನೋಡುವುದಾದರೆ ಮೊದಲಿಗೆ ಅಂಟು. ತಿನ್ನುವುದಕ್ಕೆ ಯೋಗ್ಯವಾದ ಅಂಟನ್ನು ತೆಗೆದುಕೊಳ್ಳಬೇಕು ಇದು ಅಂಗಡಿಗಳಲ್ಲಿ ನಿಮಗೆ ದೊರೆಯುತ್ತದೆ.
ಯಾವುದೇ ಹಳೆಯ ಸಂಧಿ ನೋವು ಸೊಂಟ ನೋವು ಈ ರೀತಿಯ ನೋವುಗಳು ಇದ್ದರೆ ಇದನ್ನ ಬಳಸುವುದರಿಂದ ಕಡಿಮೆ ಆಗುತ್ತದೆ. ಒಲೆಯ ಮೇಲೆ ಒಂದು ಪಾತ್ರೆಯನ್ನು ಬಿಸಿ ಮಾಡುವುದಕ್ಕೆ ಇಟ್ಟು ಅದಕ್ಕೆ ಎರಡರಿಂದ ಮೂರು ಚಮಚ ತುಪ್ಪವನ್ನು ಹಾಕಿ ಅದರಲ್ಲಿ ಈ ಅಂಟನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಅದು ಚೆನ್ನಾಗಿ ಅರಳುತ್ತದೆ ಅದನ್ನು ತೆಗೆದಿಟ್ಟು ನಂತರ ಅದೇ ಪಾತ್ರೆಯಲ್ಲಿ ಒಂದು ಕಪ್ ಬಾದಾಮ್ ಒಂದು ಕಪ್ ಅಕ್ರೋಟ್ ಒಂದು ಕಪ್ ಗೋಡಂಬಿ ಒಂದು ಕಪ್ ಉತ್ತತ್ತಿ ಮತ್ತು ಐದರಿಂದ ಆರು ಪಿಸ್ತ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಅದನ್ನು ತೆಗೆದಿಟ್ಟುಕೊಂಡು ಅದೇ ಪಾತ್ರೆಗೆ ಒಣಕೊಬ್ಬರಿಯನ್ನು ಸ್ವಲ್ಪ ಹಾಕಿ ಅದನ್ನ ಹುರಿಯಬೇಕು ಕೊಬ್ಬರಿ ಬೇಡ ಎನ್ನುವವರು ಅದನ್ನು ಹಾಕುವುದು ಬೇಡ. ಹುರಿದುಕೊಂಡಿರುವ ಅಂತಹ ಪದಾರ್ಥವನ್ನು ಪೂರ್ತಿ ತಣ್ಣಗಾಗುವ ವರೆಗೆ ಹಾಗೆ ಬಿಡಬೇಕು.
ನಂತರ ಮಿಕ್ಸಿ ಜಾರಿಗೆ ಹುರಿದು ಕೊಂಡಿರುವ ಕೊಬ್ಬರಿ ಮತ್ತು ಅಂಟನ್ನು ಹಾಕಬೇಕು ಅದನ್ನು ಸ್ವಲ್ಪ ನುಣ್ಣಗೆ ರುಬ್ಬಿಕೊಳ್ಳಬೇಕು ಅದನ್ನು ಬೇರೆ ಪಾತ್ರೆಗೆ ಹಾಕಿ ಅದೇ ಜಾರಿಗೆ ಹುರಿದುಕೊಂಡಿರುವ ಅಂತಹ ಡ್ರೈ ಫ್ರೂಟ್ಸ್ ಗಳನ್ನು ಹಾಕಿ ಅದನ್ನು ತರಿತರಿಯಾಗಿ ಅಥವಾ ನುಣ್ಣಗೆ ರುಬ್ಬಿ ಕೊಳ್ಳಬಹುದು. ನಂತರ ಅದಕ್ಕೆ ಮೊದಲು ರುಬ್ಬಿಕೊಂದಂತಹ ಮಿಶ್ರಣವನ್ನು ಹಾಕಿ ಜೊತೆಗೆ ಒಂದು ಕಪ್ಪು ಬೆಲ್ಲವನ್ನು ಹಾಕಿ ಜೊತೆಗೆ ಏಲಕ್ಕಿ ಪುಡಿಯನ್ನು ಒಂದು ಟೀಚಮಚ ಆಗುವಷ್ಟು ಹಾಕಿ ಅದನ್ನು ರುಬ್ಬಿಕೊಳ್ಳಬೇಕು. ನಂತರ ಅದನ್ನು ಜಾರಿನಿಂದ ಒಂದು ಪಾತ್ರೆಗೆ ಹಾಕಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ನೀವು ಚಮಚದಲ್ಲಿ ತಿನ್ನಬಹುದು ಅಥವಾ ಉಂಡೆ ರೀತಿಯಲ್ಲಿ ಕಟ್ಟಿಕೊಳ್ಳಬಹುದು.
ಮಕ್ಕಳಿಗೆ ಪ್ರತಿದಿನ ಒಂದು ಚಮಚ ಈ ಮಿಶ್ರಣವನ್ನು ಕೊಡುವುದರಿಂದ ಅವರಿಗೆ ತುಂಬಾ ಒಳ್ಳೆಯ ಪೋಷಕಾಂಶ ದೊರೆಯುತ್ತದೆ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರಲ್ಲಿ ಡ್ರೈಫ್ರೂಟ್ಸ್ ಗಳನ್ನು ಬೆಳೆಸಿರುವುದರಿಂದ ನಮ್ಮ ಆರೋಗ್ಯಕ್ಕೆ ಬೇಕಾದಂತಹ ಒಳ್ಳೆಯ ಅಂಶಗಳು ಇದರಿಂದ ದೊರೆಯುತ್ತದೆ ಹಾಗಾಗಿ ನೀವು ಕೂಡ ಒಮ್ಮೆ ಇದನ್ನು ಉಪಯೋಗಿಸುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ತಿಳಿಸಿರಿ.