Health tips: ದೇಹದ ಬಹುಮುಖ್ಯ ಅಂಗಗಳಲ್ಲಿ ಕಿಡ್ನಿಗಳೂ ಸಹ ಮುಖ್ಯವಾದವು. ಆದರೆ, ಇಂದು ದೇಶಾದ್ಯಂತ ಬಹಳಷ್ಟು ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯ ಹೆಚ್ಚಾಗುತ್ತಿದೆ. ಕಿಡ್ನಿಗೆ ಸಮಸ್ಯೆ ಎದುರಾದ ನಂತರ ಪರಿಹಾರೋಪಾಯಗಳಿಗೆ ಪರದಾಡುವ ಬದಲು ಕಿಡ್ನಿ ಆರೋಗ್ಯಕ್ಕೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತಲ್ಲವೇ ಹಾಗಾಗಿ ಪ್ರತಿನಿತ್ಯ ದೇಹಕ್ಕೆ ಅಗತ್ಯವಾದ ನೀರನ್ನ ನಾವು ಸೇವಿಸುವುದು ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು.
ಅತಿ ಕಡಿಮೆ ನೀರು ಕುಡಿಯುವುದು ಈ ಅಭ್ಯಾಸದಿಂದ ಕಿಡ್ನಿಗಳು ಸಕ್ರಿಯವಾಗಿರಲು ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು ಸಂಪೂರ್ಣವಾಗಿ ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವುದು ಒಳಿತು. ಸಾಮಾನ್ಯವಾಗಿ 8ರಿಂದ 10 ಗ್ಲಾಸ್ ನೀರು ದೇಹಕ್ಕೆ ಅವಶ್ಯಕ. ತುಂಬಾ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯ ರೆನಲ್ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಆರ್ಗಿನೈನ್ ವ್ಯಾಸೊಪ್ರೆಸಿನ್ ಹಾರ್ಮೋನ್ ನೀರಿನಂಶ ನಿಯಂತ್ರಿಸಿ ರೆನಲ್ ಕಾರ್ಯ ನೋಡಿಕೊಳ್ಳುತ್ತದೆ.
ನೀರನ್ನು ಅತಿಯಾಗಿ ಕುಡಿದರೆ ಇದೂ ಕೂಡ ತೊಂದರೆಗೀಡಾಗಬಹುದು. ತುಂಬಾ ಕಡಿಮೆ ಮಟ್ಟದಲ್ಲಿ ನೀರು ಕುಡಿದರೂ ತೊಂದರೆ ಅನುಭವಿಸಬೇಕಾಗುತ್ತದೆ. ಇದು ರೆನಲ್ ಲಿಥಿಯಾಸಿಸ್ ಮತ್ತು ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. ಸ್ವಲ್ಪವೇ ನೀರನ್ನು ಕುಡಿಯುವವರಲ್ಲಿ ಕಿಡ್ನಿಯಲ್ಲಿ ಉಪ್ಪಿನಂಶ ಉಂಟಾಗಿ ಅದು ಕಿಡ್ನಿಯಲ್ಲಿ ಕಲ್ಲುಗಳನ್ನೂ ಉಂಟುಮಾಡುತ್ತದೆ. ಇದು ಹೀಗೆ ಮುಂದುವರೆದರೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತದೆ.
ಹೆಚ್ಚು ನೀರನ್ನು ಕುಡಿದರೆ ಕಲ್ಮಶವೆಲ್ಲಾ ಹೋಗಿ ಕಿಡ್ನಿ ಆರೋಗ್ಯವಾಗಿರುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ನೀರು ಕುಡಿಯುವುದರಿಂದ ಗ್ಲೊಮೆರುಲ್ ಫಿಲ್ಟರೇಶನ್ ಗೆ ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ನೀರು ಕುಡಿಯುವುದರಿಂದ ಹೆಚ್ಚು ಒತ್ತಡ ಹಾಕಿದಂತಾಗಿ ಈ ಕಾರ್ಯವೂ ಬಲಹೀನಗೊಳ್ಳುತ್ತದೆ. ಆದ್ದರಿಂದ ಬೆಳಗ್ಗೆ ಒಂದು ಗ್ಲಾಸ್ ನೀರು ಮತ್ತು ಬಾಯಾರಿದಂತಾದಾಗಲೆಲ್ಲಾ ನೀರು ಕುಡಿದರೆ ಒಳ್ಳೆಯದು.
ಮೂತ್ರದ ಕಲ್ಲುಗಳು ಮೂತ್ರ ವ್ಯವಸ್ಥೆಯಲ್ಲಿ ಎಲ್ಲಿಯಾದರೂ ಕಂಡುಬರುವ ಆರೋಗ್ಯ ಸಮಸ್ಯೆ. ಮೂತ್ರಕೋಶದಿಂದ ಮೂತ್ರಪಿಂಡಗಳವರೆಗೆ. ಅನೇಕ ಅಂಶಗಳಿಂದಾಗಿ ಅವು ರೂಪುಗೊಳ್ಳಬಹುದು, ಆದರೆ ಆನುವಂಶಿಕ ಸಂಭಾವ್ಯತೆ ಮತ್ತು ನೀವು ಕುಡಿಯುವ ದ್ರವಗಳ ಪ್ರಮಾಣವೂ ಮೂತ್ರಪಿಂಡದ ಕಲ್ಲುಗಳನ್ನು ಹೊಂದುವ ಅಡೆತಡೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಲ್ಲಿ, ಸಾಧ್ಯವಾದಷ್ಟು ನೀರು ಕುಡಿಯಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಲ್ಲಿ ಬಿಸಿ ನೀರಿನ ಸೇವನೆ ಪ್ರಯೋಜನಕಾರಿ. ಕಲ್ಲಿನ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ನೀರು ಕುಡಿಯುವುದು ಒಳ್ಳೆಯದು.