ಗರಿಕೆಗೆ ಹಿಂದೂ ದರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ ಹಾಗೂ ಗರಿಕೆಯಲ್ಲಿ ದೈವೀಕ ಗುಣವಿರುವುದರಿಂದ ಇದನ್ನು ಪೂಜೆಗೆ ಬಳಸಲಾಗುತ್ತದೆ. ಸದಾ ಗಣೇಶನ ಪೂಜೆಗೆ ಬಳಸುವ ಈ ಗರಿಕೆ ಹುಲ್ಲಿನಲ್ಲಿ ಔಷದೀಯ ಗುಣಗಳು ಅಡಗಿವೆ ಅಂದ್ರೆ ನೀವು ನಂಬುವಿರಾ, ಖಂಡಿತವಾಗಿಯೂ ನಂಬಲೇಬೇಕು. ಯಾಕಂದ್ರೆ ಅಂತಹದ್ದೊಂದು ಉಪಯುಕ್ತ ವಿಚಾರವನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಗರಿಕೆಯು ದೇಹಕ್ಕೆ ತಂಪನ್ನು ನೀಡುವಂತಹ ಒಂದು ಶೀತ ವೀರ್ಯ ದ್ರವ್ಯವಾಗಿದೆ ಹಾಗೂ ಸಂಪೂರ್ಣ ಒಣಗಿರುವ ದೇಹವನ್ನು ಮತ್ತೆ ಚಿಗುರಿಸುವ ಹಾಗೂ ನವ ಚೈತನ್ಯ ತುಂಬುವ ಶಕ್ತಿ ಈ ಗರಿಕೆ ಹುಲ್ಲಿಗೆ ಇದೆ ಅಷ್ಟೇ ಅಲ್ಲದೆ ಪಿತ್ತ ಸಮಸ್ಯೆಯಿಂದ ಬಳಲುತ್ತಿರುವವರು ಈ ಗರಿಕೆಯ ರಸಕ್ಕೆ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ದೇಹದಲ್ಲಿನ ಪಿತ್ತವನ್ನು, ಉಷ್ಣವನ್ನು ಗರಿಕೆಯು ಕಡಿಮೆ ಮಾಡುವುದಲ್ಲದೆ ದೇಹಕ್ಕೆ ನವ ಚೈತನ್ಯ ತುಂಬುತ್ತದೆ ಹಾಗೂ ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತದೆ.
ಇನ್ನು ಮೂಗಿನಲ್ಲಿ ರಕ್ತಸ್ರಾವ ಆಗುವವರಿಗೆ ಗರಿಕೆಯ ರಸವನ್ನು ಮೂಗಿನ ಹೊಳ್ಳೆಗಳಿಗೆ ಕೇವಲ 2 ರಿಂದ 3 ಹನಿ ಹಾಕುವುದರಿಂದ ರಕ್ತಸ್ರಾವ ಕ್ಷಣಾರ್ದದಲ್ಲಿ ನಿಲ್ಲುವುದು. ಅಪಘಾತವಾದ ಸಂಧರ್ಭದಲ್ಲಿ ಗರಿಕೆ ಹುಲ್ಲಿನ ರಸವನ್ನು ಗಾಯಗಳ ಮೇಲೆ ಹಾಕುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ .
ಪೆಟ್ಟು ಬಿದ್ದು ಊದಿಕೊಂಡಿರುವ ದೇಹದ ಭಾಗಕ್ಕೆ ಗರಿಕೆಯ ರಸವನ್ನು ಲೇಪಿಸುವುದರಿಂದ ಊತ ಕಡಿಮೆಯಾಗುವುದಲ್ಲದೆ ನೋವು ನಿವಾರಣೆಯಾಗುವುದು. ಗರಿಕೆ ಹುಲ್ಲು ಹಾಸಿನ ಮೇಲೆ ಮಲಗುವುದರಿಂದ ದೇಹವು ತಂಪಾಗಿರುವುದಲ್ಲದೇ ದೈಹಿಕ ಶಕ್ತಿ ಕುಗ್ಗದಂತೆ ಇದು ನೆರವಾಗುತ್ತದೆ ಹಾಗೂ ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಬಹುದು. ಗರಿಕೆಯನ್ನು ಈ ರೀತಿ ಉಪಯೋಗಿಸುವುದರಿಂದ ಮಾನವನ ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ.