ಸೊಪ್ಪುಗಳ ಬಗ್ಗೆ ಯಾರಿಗೆ ತಿಳಿದಿಲ್ಲ. ಬಸಳೆ ಸೊಪ್ಪಿನ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಏಕೆಂದರೆ ಇದು ಪೇಟೆಗಿಂತ ಹಳ್ಳಿಯಲ್ಲಿ ಜಾಸ್ತಿ. ಈ ಸೊಪ್ಪಿನಲ್ಲಿ ಎರಡು ವಿಧಗಳಿವೆ, ಹಸಿರು ಕಾಂಡದ ಬಸಳೆ ಮತ್ತು ಕೆಂಪು ಕಾಂಡದ ಬಸಳೆ. ಮಳೆ ಬೀಳುವ ಕಾಲಕ್ಕೆ ಹುಳುಗಳು ಎಲೆಯನ್ನು ರಂಧ್ರ ಕೊರೆದಿರುತ್ತವೆ ಬಿಟ್ಟರೆ ಯಾವುದೇ ಕೀಟ ಬಾಧೆ ಇಲ್ಲ. ನೀರು ಚೆನ್ನಾಗಿ ಬೇಡುವ ಗಿಡ ಇದು. ಬಿಸಿಲಿಗೆ ಇಟ್ಟರೆ ಚೆನ್ನಾಗಿ
ಬೆಳೆಯುತ್ತದೆ.
ಇದು ಪೋಷಕಾಂಶಗಳ ಆಗರ. ಇದು ಬಳ್ಳಿಯ ಜಾತಿಯ ಸಸ್ಯ. ಇದರ ಉಪಯೋಗ ಬಹಳ. ಇದರ ಕಾಂಡ ಮತ್ತು ಎಲೆಯನ್ನು ಅಡಿಗೆಗೆ ಬಳಸುತ್ತಾರೆ. ಚಟ್ನಿ, ಬೊಂಡಾ, ಸಾಂಬಾರ್, ತಂಬ್ಳಿ ಎಲ್ಲವನ್ನೂ ಮಾಡಬಹುದು. ಹಾಗೆಯೇ ಬಾಯಿ ಹುಣ್ಣಾದ ಸಮಯದಲ್ಲಿ ಹಸಿ ಎಲೆಯನ್ನು ಕಿತ್ತು ಚೆನ್ನಾಗಿ ಜಗಿದು ಬೇಕಾದರೆ ಉಪ್ಪಿನ ಜೊತೆ ತಿನ್ನುವುದರಿಂದ ವಾಸಿಯಾಗುತ್ತದೆ.
ರಕ್ತಹೀನತೆ ಇರುವವರು ತಮ್ಮ ಆಹಾರದಲ್ಲಿ ದಿನನಿತ್ಯ ಬಳಸುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಸೊಪ್ಪಿನಲ್ಲಿ ನಾರಿನಾಂಶ, ಕಬ್ಬಿಣ ಕ್ಯಾಲ್ಸಿಯಂ, ವಿಟಮಿನ್, ಮೆಗ್ನೀಷಿಯಂ, ಪೊಟ್ಯಾಶಿಯಂ, ಆಂಟಿಆಕ್ಸಿಡೆಂಟ್ ಕೂಡ ಹೇರಳವಾಗಿ ಇದೆ. ಆಂಟಿಆಕ್ಸಿಡೆಂಟ್ ದೇಹಕ್ಕೆ ವಯಸ್ಸಾಗುವುದು ನಿಧಾನ ಆಗುತ್ತದೆ.
ಬೀಜ ಬಿತ್ತಿ ಅಥವಾ ಬಲಿತ ಕಡ್ಡಿಯನ್ನು ನೆಟ್ಟಬೇಕು. ಬಲಿತ ಕಡ್ಡಿಗೆ ತುದಿ ಹಾಗೇ ಇರಬೇಕು. ಹಾಗೆಯೇ ಇದನ್ನು ಬಿಸಿಲು ಬೀಳುವ ಕಡೆ ಇಟ್ಟರೆ ತುಂಬಾ ಆರೋಗ್ಯವಾಗಿ ಬೆಳೆಯುತ್ತದೆ. ನಿಮ್ಮ ಮನೆಯಲ್ಲಿ ಈ ಮನೆ ಮದ್ದನ್ನು ಬಳಸಿ ಬೆಳೆಸಿ. ಆ ಮೂಲಕ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ಸುಳ್ಳು ಮಾಡಿ.