ಕ್ಯಾಲ್ಸಿಯಂ ಇದು ಒಂದು ರೀತಿಯ ಖನಿಜ. ಮನುಷ್ಯನ ದೇಹಕ್ಕೆ ಇದು ಬಹಳ ಅವಶ್ಯಕವಾಗಿದೆ.ನಮ್ಮ  ಹಲ್ಲುಗಳು ಗಟ್ಟಿಯಾಗಿರಬೇಕು ಅಂದರೆ ಕ್ಯಾಲ್ಸಿಯಂ ದೇಹಕ್ಕೆ ಬೇಕು.ನಮ್ಮ ಮೂಳೆ, ಮಾಂಸ ಖಂಡಗಳು ಗಟ್ಟಿಯಾಗಿ ಇರಬೇಕು ಎಂದರೆ ಕ್ಯಾಲ್ಸಿಯಂ ಬೇಕು.ನರಮಂಡಲ ಮತ್ತು ಹೃದಯ ವ್ಯವಸ್ಥೆ ಸರಿಯಾಗಿ ಇರಬೇಕೆಂದರೆ ಕ್ಯಾಲ್ಸಿಯಂ ಬೇಕು. ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಕೈ ಕಾಲುಗಳಲ್ಲಿ ನೋವು ಬರುತ್ತದೆ.ಎಲ್ಲಾ ರೀತಿಯ ಮಂಡಿನೋವು, ಸೊಂಟನೋವು,ಎಲ್ಲಾ ಭಾಗದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೈ ಬೆರಳಿನ ಉಗುರಿನ ಮೇಲೆ ಬಿಳಿಯಾದ ಕಲೆಗಳು ಉಂಟಾಗುತ್ತದೆ.ಸ್ವಲ್ಪ ದೂರ ನಡೆದರೂ ಸ್ನಾಯುಸೆಳೆತ ಉಂಟಾಗುತ್ತದೆ.ಒಮ್ಮೊಮ್ಮೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ.ಕೆಲವರು ಖಿನ್ನತೆಗೆ ಒಳಗಾಗುತ್ತಾರೆ.ಇವೆಲ್ಲಾ ಲಕ್ಷಣಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹಳ ಚಿಕ್ಕ ವಯಸ್ಸಿನವರಿಗೆ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತಿದೆ.ಅಂದರೆ 18 ರಿಂದ 35ವರ್ಷದ ಜನರಿಗೆ ಆಗುತ್ತಿದೆ.ಹಿಂದೆಲ್ಲಾ ಆಯುರ್ವೇದದ ಪ್ರಕಾರ ಅಡುಗೆಯನ್ನು ಎಂದರೆ ಹುಳಿ, ಉಪ್ಪು,ಖಾರವನ್ನು ತಿನ್ನಲಾಗುತ್ತಿತ್ತು. ಕ್ಯಾಲ್ಸಿಯಂಯುಕ್ತ ಪೌಷ್ಟಿಕ ಆಹಾರಗಳ ಸೇವನೆ ಈಗ ಬಹಳ ಕಡಿಮೆ ಆಗಿದೆ.ಫಾಸ್ಟ್ಫುಡ್, ಜಂಕ್ ಫುಡ್ ಗಳ ಬಳಕೆ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೆ ಮೂಳೆಗಳ ಬೆಳವಣಿಗೆ ಆಗುವುದಿಲ್ಲ. ಇದರಿಂದ ಅವರಿಗೆ ಕ್ಯಾಲ್ಸಿಯಂ ಕೊರತೆಯಿಂದ ಬರುವ ಲಕ್ಷಣಗಳು ಉಂಟಾಗುತ್ತದೆ.

ದಿನಕ್ಕೆ 1000mg ಯಷ್ಟು ಕ್ಯಾಲ್ಸಿಯಂ ಬೇಕಾಗುತ್ತದೆ. ಮಹಿಳೆಯರಿಗೆ ಮತ್ತು ವಯಸ್ಸಾದವರಿಗೆ 1200mg ಕ್ಯಾಲ್ಸಿಯಂ ಬೇಕಾಗುತ್ತದೆ.ಅದರಲ್ಲೂ ಮಹಿಳೆಯರಿಗೆ ಕ್ಯಾಲ್ಸಿಯಂ ಕೊರತೆ ತುಂಬಾ ಉಂಟಾಗುತ್ತದೆ.ಜೀವನದ ಎಲ್ಲಾ ಹಂತಗಳನ್ನು ನಿರ್ವಹಿಸುವುದು ಬಹಳ ಕಷ್ಟವಾಗುತ್ತದೆ.ಉತ್ತಮವಾದ ಆರೋಗ್ಯಕರವಾದ ಜೀವನ ನಡೆಸಲು ಕಷ್ಟವಾಗುತ್ತದೆ.

ಯಾವ ಯಾವ ರೀತಿಯ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ ಎಂದು ಎಲ್ಲರಿಗೂ ತಿಳಿದಿರುವುದಿಲ್ಲ. ಹಾಲಿಗೆ ಸಂಬಂಧಪಟ್ಟ ವಸ್ತುಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ.ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ.ಹಣ್ಣುಗಳಲ್ಲಿ ಕಿತ್ತಳೆ, ಲಿಂಬು ಇವುಗಳನ್ನು ದಿನವೂ ಬಳಕೆ ಮಾಡುವುದರಿಂದ ಉತ್ತಮವಾದ ಕ್ಯಾಲ್ಸಿಯಂ ದೊರೆಯುತ್ತದೆ.ಧಾನ್ಯಗಳಲ್ಲಿ ಸೋಯಾಬೀನ್, ಬಿಳಿ ಮತ್ತು ಕಪ್ಪು ಎಳ್ಳು ಇದನ್ನು ದಿನವೂ ಸೇವಿಸುವುದರಿಂದ ಒಳ್ಳೆಯದು. ಬೀಜಗಳಲ್ಲಿ ಸೂರ್ಯಕಾಂತಿ ಬೀಜ,ಕುಂಬಳಕಾಯಿ ಮತ್ತು ಸೌತೆಕಾಯಿ ಬೀಜಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ದೊರೆಯುತ್ತದೆ.ತರಕಾರಿಗಳಲ್ಲಿ ಪಾಲಕ್ ಸೊಪ್ಪು, ಬೆಂಡೆಕಾಯಿ ಇವುಗಳಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!