ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ ಎಂದಿಗೂ ಕಡಿಮೆಯಾಗದ ಬೇಡಿಕೆಯ ಕೆಲವು ಬ್ಯುಸಿನೆಸ್‌ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಅಣಬೆಯ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ ಕ್ರಮೇಣ ಜನರು ಅಣಬೆಗಳ ಪ್ರಯೋಜನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೊರೋನಾ ವೈರಸ್‌ ನಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಹೆಚ್ಚಾಗಿದೆ. ಅಣಬೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳ ಜೊತೆ ಅನೇಕ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ವಿಟಮಿನ್ ಬಿ, ಡಿ, ಪೊಟ್ಯಾಷಿಯಮ್, ತಾಮ್ರ, ಕಬ್ಬಿಣ ಮತ್ತು ಸೆಲೆನಿಯಮ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಈಗ ಅಣಬೆಬೇಡಿಕೆ ಹೆಚ್ಚುತ್ತಿದೆ.

ಅಣಬೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳ ಜೊತೆ ಅನೇಕ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ವಿಟಮಿನ್ ಬಿ, ಡಿ, ಪೊಟ್ಯಾಷಿಯಮ್, ತಾಮ್ರ, ಕಬ್ಬಿಣ ಮತ್ತು ಸೆಲೆನಿಯಮ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಈಗ ಅಣಬೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನರುತಮ್ಮ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ . ಅಂತಹ ಜನರಲ್ಲಿ ಉತ್ತರಾಖಂಡದ ಸತಿಂದರ್ ರಾವತ್ ಎಂಬ ವ್ಯಕ್ತಿ ಕೂಡಾ ಒಬ್ಬರು.ಆದರೆ ಈ ವ್ಯಕ್ತಿ ತಾನು ಕೆಲಸ ಕಳೆದೆಕೊಂಡೆ ಎಂದು ಬೇಸರಿಸಿಕೊಂಡು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ ಬದಲಿಗೆ ತನ್ನ ಹೆಂಡತಿ ಮಾಡುತ್ತಿದ್ದ ಅಣಬೆ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಗ ಗಂಡ ಹೆಂಡತಿ ಇಬ್ಬರೂ ಸೇರಿಕೊಂಡು ತಿಂಗಳಿಗೆ ಲಕ್ಷರುಪಾಯಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಏನೂ ಕೆಲಸವಿಲ್ಲದೆ, ಬಂಡವಾಳ ಕೂಡಾ ಹೆಚ್ಚಾಗಿ ಉಪಯೋಗಿಸದೆ ಇವರು ಗೆಲುವು ಸಾಧಿಸಿದ್ದು ಹೇಗೆ? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳೀದುಕೊಳ್ಳೋಣ.

46 ವರ್ಷ ವಯಸ್ಸಿನ ಈ ಸತೆಂದರ್ ಸಿಂಗ್ ರಾವತ್ ಗಲ್ಫ್ ರಾಷ್ಟ್ರದಲ್ಲಿ 15 ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ನಂತರ 2020 ಜೂನ್ ನಲ್ಲಿ ಕರೋನ ಸಾಂಕ್ರಾಮಿಕ ರೋಗದಿಂದಾಗಿ ರಿಟೈಲ್ ಅಪರೇಷನ್ಸ್ ಮ್ಯಾನೇಜರ್ ಕೆಲಸ ಕಳೆದುಕೊಂಡ ಸತೆಂದರ್ ಸಿಂಗ್ ರಾವತ್ ಇವರುದುಬೈನಿಂದ ನೋಯ್ಡಾ ಗೆ ತೆರಳುತ್ತಾರೆ. ಹಾಗೂ ತಾನು ಕೆಲಸ ಕಳೆದುಕೊಂಡ ನಂತರ ಅವರಿಗೆ ಬೇರೊಂದು ಕೆಲಸ ಹುಡುಕುವ ಹಾಗೂ ಜೀವನ, ಕುಟುಂಬ ನಿರ್ವಹಣೆಯ ಯೋಚನೆ ಆರಂಭ ಆಗುತ್ತದೆ. ಇದರ ಸಲುವಾಗಿ ತಾನು ಬೇರೆ ವಿಧಾನದಲ್ಲಿ ಹೊಸತಾಗಿ ಏನಾದರೂ ಕೃಷಿಯನ್ನೂ ಮಾಡಬೇಕು ಎಂದು ನಿರ್ಧಾರ ಮಾಡಿ ತನ್ನ ನಿರ್ಧಾರವನ್ನು ಕೈಗೊಳ್ಳುತ್ತಾರೆ. ನಂತರ ತನ್ನ ಪತ್ನಿ ಸಪ್ನ ಅವರ ಜೊತೆ ಸೇರಿ ಸ್ನೇಹಿತರು ಹಾಗೂ ಮಾವನ ಮಾರ್ಗದರ್ಶನ ಪಡೆದು, ಅವರ ಸಹಾಯದಿಂದ ಉತ್ತರಾಖಂಡ್ ನ ರಾಮನಗರ ಎಂಬ ಹಳ್ಳಿಯಲ್ಲಿ ಒಂದೂವರೆ ಎಕರೆ ಭೂಮಿಯನ್ನು ಗೇಣಿ ಪಡೆದು ಅಲ್ಲಿಯೇ ಹೂವುಗಳನ್ನು ಹಾಗೂ ಅಣಬೆ ಬೆಳೆಯುವ ನಿರ್ಧಾರ ಮಾಡುತ್ತಾರೆ. ತಮ್ಮ ಆ ನಿರ್ಧಾರದಿಂದ ಈಗ ಸಿತೆಂದರ್ ಸಿಂಗ್ ರಾವತ್ ಅವರು ಸುಮಾರು ೨೦೦ ಅಂಗಡಿಗಳನ್ನು ಹೊಂದಿದ್ದು, ೨,೫೦೦ ಕೋಟಿ ಮೌಲ್ಯದ ಹಣದ ವಹಿವಾಟನ್ನು ಹೊಂದಿದ್ದಾರೆ. ದ ಬೆಟರ್ ಇಂಡಿಯಾ ಎಂಬ ಮಾಧ್ಯಮದ ಜೊತೆ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡ ಇವರು ತಾನು ಹೇಗೆ ಸ್ವತಂತ್ರವಾಗಿ ಆರ್ಥಿಕವಾಗಿ ಸಭಲಗೊಂಡೆ ಎನ್ನುವುದರ ಕುರಿತಾಗಿ ಸಹ ಹೇಳಿದರು ಹಾಗೂ ತಾನು ಅಣಬೆ ಕೃಷಿಯನ್ನೂ ಆರಂಭಿಸಿ ಶ್ರೀಹರಿ ಆಗ್ರೋಟೆಕ್ ಇದನ್ನು ಹೇಗೆ ಆರಂಭಿಸಿದೆ ಎನ್ನುವುದರ ಕುರಿತಾಗಿ ಸಹ ಹೇಳಿದರು.

ಇವರು ಜನವರಿ ತಿಂಗಳಿನಲ್ಲಿ ಅಣಬೆಗಳನ್ನು ಬೆಳೆಯಲು ಆರಂಭಿಸಿದರು. ಅಣಬೆಗಳನ್ನು ಬೆಳೆಯಲು ಬಿದಿರು ಹಾಗೂ ಪ್ಲಾಸ್ಟಿಕ್ ಗಳನ್ನು ಬಳಸಿಕೊಂಡು ಎರಡು ಗುಡಿಸಲುಗಳನ್ನು ತಯಾರಿಸಿದ್ದರು. ಗುಡಿಸಲಿನ ಒಳಗೆ ಗರಿಷ್ಠ ತಾಪಮಾನವನ್ನು ಸರಿದೂಗಿಸುವ ಸಲುವಾಗಿ ಏರ್ ಕಂಡೀಷನರ್ ಗಾಳನ್ನು ಅಳವಡಿಸಿದ್ದರು. ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಸಿತಂದರ್ ಸಿಂಗ್ ಅವರು ತಾವು ಬೆಳೆದ ಅಣಬೆ ಬೆಳೆಯನ್ನು ಮಾರಾಟ ಮಾಡಿ ಆರು ಲಕ್ಷ ಹಣವನ್ನು ಸಂಪಾದನೆ ಮಾಡಿದರು. ಇವರು ಬೆಳೆದ ಮಶ್ರೂಮ್ ಗಳು ರಾಮನಗರದ ತರಕಾರಿ ಮಾರ್ಕೆಟ್ , ಹೋಟೆಲ್ , ಮದುವೆ ಚತ್ರಗಳು , ರೆಸ್ಟೋರೆಂಟ್ ಹಾಗೂ ಇನ್ನೂ ಹಲವಾರು ಕಡೆ ವ್ಯಾಪಕ ಮಾರಾಟವಾಗಿತ್ತು. ಇನ್ನು ಸಿತಂದರ್ ಸಿಂಗ್ ಅವರೇ ಹೇಳುವಂತೆ ಈ ದಂಪತಿಗಳಿಗೆ ಎಲ್ಲವನ್ನೂ ಹೊಂದಿಸಿಕೊಳ್ಳಲು ಸುಮಾರು ಆರು ತಿಂಗಳು ಸಮಯ ಬೇಕಾಗಿದ್ದು ಇವರು ತಮ್ಮ ಮೇಲೆ ತಾವೇ ಪರೀಕ್ಷೆ ಮಾಡಿಕೊಂಡು ಅದರಲ್ಲಿ ಸಫಲರಾದರೂ ಅವರು ಬೆಳೆದ ಅಣಬೆ ಬೆಳೆಯಲ್ಲಿ ಅರ್ಧ ಪಾಲು ಮಾತ್ರ ಅವರಿಗೆ ದೊರೆಯುತ್ತಿತ್ತು.

ಇನ್ನು ಸಿತಂದರ್ ಅವರ ಪತ್ನಿ ಸಪ್ನ ಅವರು ಹೇಳುವಂತೆ , ಅವರಿಬ್ಬರೂ ಯಾವುದೇ ಕೃಷಿ ಪ್ರಧಾನ ಕುಟುಂಬದಿಂದ ಬಂದವರು ಅಲ್ಲಾ ಹಾಗೂ ಅವರಿಗೆ ಅಣಬೆ ಬೆಳೆಯುವ ಯಾವುದೇ ಮಾಹಿತಿ ಕೂಡಾ ಇರಲಿಲ್ಲ. ಇವರ ಜನರು ಸಾಕಷ್ಟು ಕಡೆ ಮಶ್ರೂಮ್ ಬೆಳೆಯುವುದನ್ನು ನೋಡಿ ಹಾಗೂ ಅದನ್ನೇ ಕೃಷಿಯಾಗಿ ಮಾಡಿ ಬೇಳೆಯುವವರ ಬಳಿ ಕೇಳಿಕೊಂಡು ಸಿತಂದರ್ ಕೂಡಾ ಮಶ್ರೂಮ್ ಬೆಳೆದರು. ಇವರು ಬೆಳೆಯುವ ಮಶ್ರೂಮ್ ಇದು ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುತ್ತಿರಲಿಲ್ಲ. ೧೮ರಿಂದ ೧೯ ಡಿಗ್ರೀ ಸೆಲ್ಸಿಯಸ್ ತಾಪಮಾನದಲ್ಲಿ ಬೆಳೆಯಲಾಗುತ್ತಿತ್ತು. ಇದರ ನಡುವೆ ಇವರಿಗೆ ದೊಡ್ಡ ಸಮಸ್ಯೆ ಆಗಿದ್ದು ಎಂದರೆ ಅದು ಅನಿಯಮಿತವಾಗಿ ವಿದ್ಯುತ್ ಬಳಕೆ. ಏರ್ ಕಂಡೀಷನರ್ ಅಳವಡಿಸಿದ ಕಾರಣ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗಬೇಕಿತ್ತು. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಸಮಸ್ಯೆಗಳು ಇದ್ದವು. ಅವುಗಳನ್ನೆಲ್ಲ ಮೆಟ್ಟಿನಿಂತು ಸಿತಂದರ್ ಹಾಗೂ ಸಪ್ನ ದಂಪತಿಗಳು ಈಗ ಅವರ ಶ್ರಮ ಹಾಗೂ ಈ ಸಾಹಸಕ್ಕೆ ಪ್ರತೀ ತಿಂಗಳು ಎರಡೂವರೆ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

ಇವರಿಬ್ಬರಲ್ಲಿ ಸಪ್ನ ಎಲ್ಲಾ ರೀತಿಯ ತಾಂತ್ರಿಕ ವ್ಯವಜಾರಗಳನ್ನು ನೋಡಿಕೊಂಡು ಹೋಗುತ್ತಾರೆ. ಇನ್ನೂ ಇವರ ಮಶ್ರೂಮ್ ಬೆಳೆಯನ್ನು ೭೦ ಟನ್ ಗಳವರೆಗೂ ಬೆಳೆಸಿ ಬೆಳೆಯುವ ಯೋಜನೆ ಇವರದ್ದಾಗಿದೆ. ಇದರಿಂದಾಗಿ ಮುಂದಿನ ಆರು ತಿಂಗಳಲ್ಲಿ ಸುಮಾರು ೪೦ ಲಕ್ಷ ಸಂಪಾದನೆ ಮಾಡುವ ಗುರಿ ಇವರದ್ದಾಗಿದೇ. ಇದರ ಜೊತೆಗೆ ಮಶ್ರೂಮ್ ನಲ್ಲಿಯೆ ಇನ್ನೊಂದು ವಿಧವನ್ನು ಸಹ ಬೇಳೆಯನು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಇವರು ಬೆಳೆಯುವ ಮಶ್ರೂಮ್ ಸಂಪೂರ್ಣ ರಾಸಾಯನಿಕಮುಕ್ತವಾಗಿರುವುದು ಹಾಗೂ ಸಂಪೂರ್ಣ ಸಾವಯವವಾಗಿ ಮಾಡಿರುತ್ತಾರೆ. ಇದರಿಂದ ಮನುಷ್ಯರು ಹಾಗೂ ಪ್ರಕೃತಿಗೂ ಒಳ್ಳೆಯದು ಎನ್ನುತ್ತಾರೆ ಸಪ್ನ. ಇನ್ನು ಸಪ್ನ ಅವರು ಹೇಳುವಂತೆ ಕಬ್ಬು , ಗೋಧಿ ಇಂತಾಸ ಸಾಂಪ್ರದಾಯಿಕ ಬೆಳೆಗಳಿಗೆ ಆರ್ಥಿಕವಾಗಿ ಮುಂದೆ ಬರಲು ಪ್ರಚಾರದ ಅಗತ್ಯ ಇದೇ ಎಂದು ಹೇಳುತ್ತಾರೆ. ಈ ರೀತಿಯಾಗಿ ಮಶ್ರೂಮ್ ಬೆಳೆಯನ್ನು ಬೆಳೆದ ಸಿತಂದರ್ ಹಾಗೂ ಸಪ್ನ ದಂಪತಿಗಳು ಇದೆ ರೀತಿ ಇನ್ನೂ ರೈತರು ಮಶ್ರೂಮ್ ಬೆಳೆಯಲು ಮುಂದೆ ಬರುವುದಾದರೆ ಅವರಿಗೆ ಸಾಹಾಯ ಮಾಡಲು ಸಹ ಇಚ್ಛಿಸುತ್ತಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!