ಕೊರೊನದಿಂದ ತನ್ನ ತಾಯಿಯನ್ನು ಕಳೆದುಕೊಂಡ ಈ ಹೆಣ್ಣುಮಗಳು ಏನ್ ಮಾಡ್ತಿದಾರೆ ಗೊತ್ತೇ? ನಿಜಕ್ಕೂ ಇದು ಮಾನವೀಯತೆ

0 0

ಕೊರೋನಾ ವೈರಸ್ 2ನೇ ಅಲೆ ಭಾರತವವನ್ನು ಬುಡ ಮೇಲು ಮಾಡಿದೆ. ಸಾಂಕ್ರಾಮಿಕ ರೋಗ ಎದುರಿಸಲು, ನಿಭಾಯಿಸಲು ಹಾಗೂ ನಿಯಂತ್ರಿಸಲು ದೇಶ ಹರಸಾಹಸ ಪಡುತ್ತಿದೆ. ಭಾರತದ ಈ ಸ್ಥಿತಿಗೆ, ಕೊರೋನಾ ಗೆದ್ದು ಬಿಟ್ಟೆವು ಎಂಬ ತಪ್ಪು ಊಹೆ, ಎಚ್ಚರಿಕೆ ಮರೆತು ಸಹ ಜನರು ಸಹಜ ಸ್ಥಿತಿಗೆ ಮರಳಿದ ಕಾರಣ 2ನೇ ಅಲೆ ಈ ಮಟ್ಟಿಗೆ ಭೀಕರತೆ ಸೃಷ್ಟಿಸಿದೆ. ಕೆಲ ದೇಶಗಳಿಗೆ ಕೊರೋನಾ ಮೊದಲ ಅಲೆ ಭೀಕರವಾಗಿ ಅಪ್ಪಳಿಸಿತ್ತು. ಆದರೆ ಭಾರತಕ್ಕೆ ಹೆಚ್ಚಿನ ಅಪಾಯ ಇರಲಿಲ್ಲ. ಮೊದಲ ಅಲೆಯನ್ನ ಕಟ್ಟು ನಿಟ್ಟಿನ ನಿಯಮದಿಂದ ಭಾರತ ಯಶಸ್ವಿಯಾಗಿ ನಿಭಾಯಿಸಿತ್ತು. ಪರಿಣಾಮ ಕೊರೋನಾ ಗೆದ್ದು ಬಿಟ್ಟಿದ್ದೇವೆ ಎಂಬ ತಪ್ಪು ಕಲ್ಪನೆಯಲ್ಲಿ ಭಾರತ ಸಹಜ ಸ್ಥಿತಿಗೆ ಮರಳಿತ್ತು. ಪರಿಣಾಮ ಎರಡನೇ ಅಲೆಯನ್ನು ಎದುರಿಸಲು ಸಾಧ್ಯವಾಗದೇ ಇದೀಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಎರಡನೇ ಅಲೆಯಲ್ಲಿ ಸಾಕಷ್ಟು ಜನರಿಗೆ ಆಕ್ಸಿಜನ್ ಕೊರತೆ ಕಾಡಿತ್ತು. ಇದೇ ರೀತಿ ಕೋರೋನ ವೈರಸ್ ಕಾರಣದಿಂದ ತನ್ನ ತಾಯಿಯನ್ನು ಕಳೆದುಕೊಂಡ ಹೆಣ್ಣುಮಗಳೊಬ್ಬಳು ಆಕ್ಸಿಜನ್ ಆಟೋ ಚಲಾಯಿಸುವ ಮೂಲಕ ಜನರಿಗೆ ನೆರವಾಗುತ್ತಿದ್ದಾಳೆ. ಈ ಘಟನೆ ನಡೆದಿದ್ದು ಎಲ್ಲಿ? ಒಬ್ಬ ಹೆಣ್ಣುಮಗಳು ಆಕ್ಸಿಜನ್ ಆಟೋ ಓಡಿಸಿ ಜನರಿಗೆ ನೆರವಾಗಲು ಕಾರಣ ಮತ್ತು ಸ್ಫೂರ್ತಿ ಎನು ಎನ್ನುವುದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತೀದಿನ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ಕಪ್ಪು ಮತ್ತು ನೀಲಿ ಬಣ್ಣದ ಆಟೋರಿಕ್ಷಾ ಒಂದು ಚೆನ್ನೈ ನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಎದುರು ಇರುತ್ತದೆ. ಎಷ್ಟೇ ದೂರ ಇದ್ದರೂ ಕೋರೋನ ಸೊಂಕಿತರಿಗೆ ಅದರಲ್ಲೂ ಆಕ್ಸಿಜನ್ ತೊಂದರೆ ಅನುಭವಿಸುತ್ತಾ ಇರುವ ವ್ಯಕ್ತಿಗಳಿಗೆ ಉಚಿತವಾಗಿ ಆಕ್ಸಿಜನ್ ದೊರಕಿಸುವ ಮೂಲಕ ಸಹಾಯ ಮಾಡುತ್ತಿರುವ ಈ ಆಟೋರಿಕ್ಷಾದ ಒಡತಿ ಹಾಗೂ ಡ್ರೈವರ್ ಸೀತಾದೇವಿ ಎಂಬ ಹೆಸರಿನ ಒಬ್ಬ ಹೆಣ್ಣುಮಗಳು. ಒಬ್ಬ ಹೆಣ್ಣುಮಗಳು ಈ ರೀತಿಯ ಸಹಾಯ ಮಾಡಲು ಕಾರಣ ಅಥವಾ ಅದಕ್ಕೆ ಸ್ಫೂರ್ತಿ ಏನು? ಎಂದು ನೋಡುವುದಾದರೆ ೨೦೨೧ ರ ಮೇ ತಿಂಗಳಿನಲ್ಲಿ ನಡೆದ ಅದೊಂದು ಮನಕಲುಕುವ ಘಟನೆ.

ಸೀತಾದೇವಿ ಅವರ ೬೫ ವರ್ಷ ವಯಸ್ಸಿನ ತಾಯಿ ಅವರಿಗೆ ಡಯಾಲಿಸಿಸ್ ನಿಂದ ಬಳಲುತ್ತಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಮಹಾಮಾರಿ ಕೋರೋನ ಸಾಂಕ್ರಾಮಿಕ ರೋಗ ಕೂಡಾ ತಗಲುತ್ತದೆ. ಕೋರೋನ ಸಾಂಕ್ರಾಮಿಕ ರೋಗ ತಗುಲಿದ ಕೂಡಲೇ ಸೀತಾದೇವಿ ತನ್ನ ತಾಯಿಯನ್ನು ಕರೆದುಕೊಂಡು ಚೆನ್ನೈನ ರಾಜೀವ ಗಾಂಧಿ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಾರೆ. ಆದರೆ ಅಲ್ಲಿ ಕಾಯ್ದಿರಿಸಿದ ಬೆಡ್ ಗಳು ಇಲ್ಲದ ಕಾರಣ ಅಲ್ಲಿನ ವೈದ್ಯರು ಸೀತಾದೇವಿ ಅವರ ತಾಯಿಯನ್ನು ದಾಖಲು ಮಾಡಿಕೊಳ್ಳಲಿಲ್ಲ. ಸತತ ನಾಲ್ಕು ಗಂಟೆಗಳ ಕಾಲ ಕಾಯುವಿಕೆ ಹಾಗೂ ಬೆಡ್ ಒದಗಿಸಲು ಪ್ರಯತ್ನಪಟ್ಟು ಕೊನೆಗೆ ಬೆಡ್ ದೊರೆತು ಅವರ ತಾಯಿಯನ್ನು ವೈದ್ಯರು ಆಸ್ಪತ್ರೆಯ ಒಳಗೆ ದಾಖಲು ಮಾಡಿಕೊಂಡರು. ಆದರೆ ಅದು ಪ್ರಯೋಜನಕ್ಕೆ ಬಾರದೇ ಸೀತಾದೇವಿ ಅವರ ೬೫ ವರ್ಷದ ತಾಯಿ ಕೋರೋನದಿಂದ ಮರಣ ಹೊಂದಿದ್ದರು.

ಸೀತಾದೇವಿ ಅವರು ಹೇಳುವ ಹಾಗೇ ಅವರ ತಾಯಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ದೊರಕಿದ್ದರೆ ಅವರು ಬದುಕುತ್ತಿದ್ದರು ಆದರೆ ಆಕ್ಸಿಜನ್ ದೊರಕದೆ ತಾನು ತನ್ನ ತಾಯಿಯನ್ನು ಕಳೆದುಕೊಂಡೆ. ತನ್ನ ತಾಯಿಗೆ ಆದ ರೀತಿ ಬೇರೆ ಯಾವುದೇ ವ್ಯಕ್ತಿಗೂ ಆಗಬಾರದು ಎಂದು ಇದರಿಂದ ತಾನು ಆಕ್ಸಿಜನ್ ಆಟೋ ರಿಕ್ಷಾ ಓಡಿಸಲು ಆರಂಭಿಸಿದೆ ಎಂದು ಹೇಳುತ್ತಾರೆ ಮೂವತ್ತಾರು ವರ್ಷದ ಸೀತಾದೇವಿ. ಇವರು ಮೇ ಆರರಂದು ಅಷ್ಟೇ ಆಟೋರಿಕ್ಷಾ ತಂದು ಅದರಲ್ಲಿ ಆಹಾರ ವಿತರಣೆ ಮಾಡಲು ಒಂದು NGO ದ jiye ಕೈಜೋಡಿಸಿ ಆರಂಭಿಸಿದ್ದರು. ನಂತರ ತಾಯಿಯ ಮರಣದ ನಂತರ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಬರುವ ಕೋರೋನ ಪೀಡಿತರಿಗೆ ಆಕ್ಸಿಜನ್ ದೊರಕಿಸಲು ಪ್ರತೀದಿನ ಸತತ ೧೩ ಗಂಟೆಗಳ ಕಾಲ ಅಲ್ಲಿಯೇ ಇರುತ್ತಿದ್ದರು. ಇನ್ನು ಸೀತಾ ಅವರೇ ಹೇಳುವಹಾಗೆ ಅವರಿಗೆ ದಿನದ ೨೪ ಗಂತೆಗಳೂ ಸಹ ಆಕ್ಸಿಜನ್ ಪೂರೈಸುವ ಹಾಗೆ ಸಾಕಷ್ಟು ಕೋರೋನ ಪೀಡಿತರ ಫೋನ್ ಗಳು ಬರುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಸೀತಾದೇವಿ ಹಾಗೂ ಮತ್ತವರ ಟೀಮ್ ಸದಸ್ಯರು ಕೋರೋನ ಪೀಡಿತ ವ್ಯಕ್ತಿ ಇರುವ ಸ್ಥಳಕ್ಕೆ ಆದಷ್ಟು ಬೇಗ ಹೋಗಿ ಅವರನ್ನು ತಮ್ಮ ಗಾಡಿಯಲ್ಲಿ ಕೂರಿಸಿಕೊಂಡು ಅವರಿಗೆ ಆಕ್ಸಿಜನ್ ದೊರಕಿಸಿಕೊಡುತ್ತಾರೆ.

ಆರಂಭದಲ್ಲಿ ಇವರು 500 ಜನ ಕೋರೋನ ಸೋಂಕಿತ ವ್ಯಕ್ತಿಗಳಿಗೆ ಯಾವುದೇ ಹಣವನ್ನು ತೆಗೆದುಕೊಳ್ಳದೆ ಉಚಿತವಾಗಿ ಆಕ್ಸಿಜನ್ ಒದಗಿಸುವ ಗುರಿ ಇಟ್ಟುಕೊಂಡು ಆಟೋರಿಕ್ಷಾಗಳನ್ನು ಕೊಂಡು ಅದನ್ನು ಆಕ್ಸಿಜನ್ ರಿಕ್ಷಾಗಳಾಗಿ ಮಾರ್ಪಡಿಸಿದ್ದರು. ಇಷ್ಟೇ ಅಲ್ಲದೆ ಸೀತಾದೇವಿ ಅವರು ಕೆಲವು ಸಮಯದಲ್ಲಿ ಯಾರೂ ವಾರಸುದಾರರು ಇಲ್ಲದ ಕೋರೋನ ಸೋಂಕಿತ ವ್ಯಕ್ತಿ ಮರಣ ಹೊಂದಿದರೆ ಅವರ ದೇಹವನ್ನು ಸ್ಮಶಾನಕ್ಕೆ ತಮ್ಮದೇ ಆಟೋದಲ್ಲಿ ತೆಗೆದುಕೊಂಡು ಹೋಗಿ ಸಾಗಿಸುತ್ತಿದ್ದರು. ಅಷ್ಟೇ ಅಲ್ಲದೆ ತಾನಿರುವ ಏರಿಯಾದಲ್ಲಿ ಅಗತ್ಯ ಇರುವವರಿಗೆ ತನ್ನದೇ ಆಟೋದಲ್ಲಿ ಆಹಾರವನ್ನು ಸಹ ಒದಗಿಸುತ್ತಿದ್ದರು. ಕೋರೋನ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತಮ್ಮ ಕೆಲಸ ಹಾಗೂ ಪ್ರಾಣ ಕಳೆದುಕೊಂಡಿದ್ದಾರೆ. ಕಷ್ಟದಲ್ಲಿ ಇರುವ ಜನರಿಗೆ ಇಂತಹ ಸಮಯದಲ್ಲಿ ತನ್ನಿಂದ ಆದ ಏನಾದರೂ ಅಲ್ಪ ಪ್ರಮಾಣದ ಸಹಾಯ ಮಾಡಬೇಕು ಈ ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಎಂದು ಹೇಳುತ್ತಾರೆ ಸೀತಾದೇವಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.