ತೇತ್ರಾಯುಗದಲ್ಲಿ ಸೀತೆಯು ಕೂಡ ಚಿನ್ನದ ಮೋಹಕ್ಕೆ ಬಲಿಯಾಗಿ ಮಾಯ ಬಂಗಾರದ ಜಿಂಕೆಯನ್ನು ನೋಡಿ ತನಗೆ ಆ ಜಿಂಕೆಯನ್ನು ತಂದುಕೊಡು ಎಂದು ರಾಮನಲ್ಲಿ ಬೇಡಿಕೆ ಇಟ್ಟಾಗ ಪತ್ನಿಯ ಆಸೆಯನ್ನು ಪೂರೈಸುವುದು ಪತಿಯ ಕರ್ತವ್ಯ ಎನ್ನುವ ಹಾಗೆ ಜಿಂಕೆಯ ಬೆನ್ನತ್ತಿ ಹೋದ ಘಟನೆಯಿಂದ ರಾಮಾಯಣ ಎನ್ನುವ ಮಹಾಯುದ್ಧಕ್ಕೆ ನಾಂದಿ ಹಾಡಿದ ಸನ್ನಿವೇಶ ಎಲ್ಲರಿಗೂ ತಿಳಿದಿರುವ ವಿಷಯ ಪುರಾತನ ಕಾಲದಿಂದಲೂ ಕೂಡ ಚಿನ್ನದ ಮೇಲೆ ವ್ಯಾಮೋಹ ಇತ್ತು
ಇನ್ನೂ ಈ ಯುಗದಲ್ಲಿ ಚಿನ್ನ ಸಿಕ್ಕರೆ ಬೇಡ ಅನ್ನುವರು ಉಂಟೇ ಚರಿತೆಯಲ್ಲಿ ಬಂಗಾರಕ್ಕೆ ನಡೆದ ಕೊಲೆ ಸುಲಿಗೆ ಸಮರ ಹಾಗೂ ರಕ್ತಪಾತ ವರ್ಣನೆಗೆ ಮೀರಿದ್ದು ಈ ಹಳದಿ ಬಣ್ಣದ ಲೋಹ ನಮ್ಮ ದೇಶದ ಮೇಲೆ ದಂಡೆತ್ತಿ ಬರಲು ಪರದೇಶಿಯವರಿಗೆ ಪ್ರೇರೇಪಣೆ ನೀಡಿದೆ ಲೋಹಗಳ ರಾಜ ಬಂಗಾರ ಆಗಿದೆ ಕಿರಿಯರಿಂದ ಮುದುಕರವರೆಗೆ ಹುಟ್ಟಿನಿಂದ ಸಾವಿನ ತನಕ ಬಂಗಾರದ ವ್ಯಾಮೋಹ ಇದ್ದೆ ಇದೆ ಬಂಗಾರದ ವ್ಯಾಮೋಹದಿಂದ ಸಂಬಂಧಗಳನ್ನು ಕೂಡ ಕಡಿದುಕೊಳ್ಳುವ ಜನರು ಇದ್ದಾರೆ ಅಂದಹಾಗೆ ಇಂದಿನ ಲೇಖನದಲ್ಲಿ ಚಿನ್ನದ ಗಣಿ ಸಿಕ್ಕ ಬಗ್ಗೆ ನೋಡೋಣ ಬನ್ನಿ
ಇತ್ತೀಚೆಗೆ ಭಾರತದ ಗ್ರಾಮವೊಂದರಲ್ಲಿ ಚಿನ್ನದ ನಿಧಿ ಪತ್ತೆಯಾಗಿದೆ ಬರೋಬ್ಬರಿ 23 ಕೋಟಿ ಟನ್ ಅಷ್ಟು ಚಿನ್ನದ ಗಣಿ ಪತ್ತೆ ಆಗಿದ್ದು ಅವರುವ ಜನರಿಗೆ ನಿಬ್ಬೇರಗು ಮೂಡಿಸಿದೆ ಈ ಚಿನ್ನದ ನಿಕ್ಷೇಪವನ್ನು ಪತ್ತೆ ಮಾಡಿರುವುದು ಯಾರು ಎಂದು ನೋಡಿದರೆ ಇನ್ನೊಂದು ಅಚ್ಚರಿಯ ಸಂಗತಿ ಎದುರಾಗುವುದು ಹೀಗೆ ಚಿನ್ನ ಇರುವ ಜಾಗವನ್ನು ಪತ್ತೆ ಹಚ್ಚಿದ್ದು ಬೇರಾರೂ ಅಲ್ಲ ಇರುವೆಗಳು ಎಂದರೆ ಅಚ್ಚರಿ
ನಮ್ಮ ದೇಶ ಭಾರತವನ್ನು ಸ್ವರ್ಣದೇಶ ಎಂದು ಕರೆಯುತ್ತೇವೆ ನಮ್ಮ ದೇಶದಿಂದ ದೋಚಿದ ಚಿನ್ನ ಇವತ್ತಿಗೂ ಹಲವಾರು ದೇಶದಲ್ಲಿ ಕಾಣಸಿಗುವುದು ಭಾರತದ ಶೇಕಡ 40 ರಷ್ಟು ಚಿನ್ನದ ಗಣಿ ಇರುವುದೇ ಬಿಹಾರ ರಾಜ್ಯದಲ್ಲಿ ಹಾಗಾಗಿ ಬಂಗಾರದ ಭೂಮಿ ಎಂದೇ ಕರೆಯುತ್ತಾರೆ ಜಮ ಹೀ ಜಿಲ್ಲೆ ಚಿನ್ನದ ವಿಚಾರದಲ್ಲಿ ತುಂಬಾನೇ ಪ್ರಸಿದ್ದಿ ಈ ಜಮುಹಿ ಜಿಲ್ಲೆಯ ಕರ್ಮಠಿಯ ಜಾಜ ಮತ್ತು ಸೋನು ಪ್ರದೇಶ ಚಿನ್ನದ ಗಣಿ ಸಿಕ್ಕಿದೆ ಕಳೆದ ವರ್ಷ ಪ್ರಲ್ಹಾದಜೋಶಿ ಅವರು ಚಿನ್ನದ ಗಣಿ ಬಗ್ಗೆ ಸಭೆಯಲ್ಲಿ ಚಿನ್ನದ ನಿಕ್ಷೇಪ ಬಗ್ಗೆ ಮಾತು ಆಡಿದ್ದರು ಬಿಹಾರ 44% ಅಷ್ಟು ಚಿನ್ನದ ನಿಕ್ಷೇಪ ಹೊಂದಿರುವ ರಾಜ್ಯ ಆಗಿದೆ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ ಇಲ್ಲಿ ಇಷ್ಟೊಂದು ಟನ್ ಚಿನ್ನ ಇದೆ ಎಂದು ತಿಳಿಯಲು ಬರೋಬ್ಬರಿ 40 ವರ್ಷ ಬೇಕಾಯಿತು ಅದು ಕೂಡ ಇರುವೆಗಳ ಮೂಲಕ
ಅಲ್ಲೊಂದು ಆಲದ ಮರ ಇದ್ದು ಅದರ ಅಡಿಯಲ್ಲಿ ಇರುವೆಗಳು ತಮ್ಮ ಗೂಡನ್ನು ರಚಿಸಿದ್ದು ಇರುವೆಗಳ ಬಾಯಿಯಲ್ಲಿ ಮಣ್ಣಿನ ಬಣ್ಣ ಕಂದು ಬಣ್ಣ ಇರದೇ ಹಳದಿ ಬಣ್ಣ ಇರುವುದನ್ನು ಗಮಸಿದ ಗ್ರಾಮಸ್ಥರು ಇಲ್ಲೊಂದು ನಿಗೂಢ ಇದೆ ಎಂದು ಅದರ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು ಅವರು ಬಂದು ಪರಿಶೀಲಿಸಿದಾಗ ಅದು ಚಿನ್ನ ಎಂದು ಖಚಿತ ಆಗುವುದು ನಂತರ ಪರಿಶೀಲನೆ ಮಾಡಿದಾಗ ಪಕ್ಕದ ಗ್ರಾಮದಲ್ಲೂ ಕೂಡ ಚಿನ್ನದ ಗಣಿ ಪತ್ತೆಯಾಗುವುದು ಇನ್ನ ಬಿಹಾರದಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇವೆ ಹಾಗೂ ಹಲವಾರು ಸ್ವಾರಸ್ಯಕರ ಸಂಗತಿ ಎಂದರೆ ಇಷ್ಟೊಂದು ಚಿನ್ನದ ಗಣಿ ಇದ್ದರೆ ಏನು ಲಾಭ ಇಲ್ಲ ಬಿಹಾರ ಇನ್ನೂ ಶೋಚನೀಯ ಸ್ಥಿತಿಯಲ್ಲೇ ಇದೆ ಈ ಚಿನ್ನದ ಗಣಿ ಇಂದನ್ನಾದರೂ ಕೂಡ ನೆರವು ನೀಡುತ್ತ ಎನ್ನುವುದನ್ನು ಕಾದು ನೋಡಬೇಕು
ನಮ್ಮ ರಾಜ್ಯ ಕರ್ನಾಟಕ ಕೂಡ ಹಿಂದಿನ ಕಾಲದಲ್ಲಿ ಕವಿಗಳು ಚಿನ್ನದ ನಾಡು ಗಂಧದ ಬೀಡು ಎಂದು ತಮ್ಮ ಕವಿತೆಯಲ್ಲಿ ಹಾಡಿ ಹೊಗಳಿದ್ದಾರೆ ಕಾರಣವೆಂದರೆ ನಮ್ಮ ರಾಜ್ಯದಲ್ಲಿ ಚಿನ್ನದ ಚರಿತ್ರೆ ಇಂದು-ನಿನ್ನೆಯದಲ್ಲ ಶತಮಾನಗಳಿಂದಲೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಮೌರ್ಯನ ಕಾಲದಲ್ಲಿ ರಾಯಚೂರಿನ ಹಟ್ಟಿ ಚಿನ್ನದ ಹಟ್ಟಿಯನ್ನು ನಮ್ಮ ಪ್ರಾಚೀನರು ತೊಡಿದ್ದರೆ ಹಟ್ಟಿ ಚಿನ್ನದ ಗಣಿ ಅತ್ಯಂತ ಆಳವಾದ ಹಾಗೂ ಪುರಾತನವಾದ ಗಣಿ ಚಿನ್ನದ ಗಣಿ ಎಂದು ಖ್ಯಾತಿ ಆಗಿದೆ ಮೈಸೂರು ಪ್ರಾಂತ್ಯದ ಚಿನ್ನದ ಗಣಿಗಳು ದಕ್ಷಿಣ ಆಫ್ರಿಕದಲ್ಲಿ ಚಿನ್ನದ ಗಣಿ ತೆಗೆಯಲು ಪ್ರೇರಕವಾಗಿದೆ ಅಂತೇ ಅಲ್ಲಿನ ಈ ಸಂಗತಿಯನ್ನು ಸ್ವತಃ ಅಲ್ಲಿನ ಭೂವಿಜ್ಞಾನಿಗಳು ಹೇಳಿಕೊಂಡಿದ್ದಾರೆ
ಇಂದಿಗೂ ನಮ್ಮ ರಾಷ್ಟ್ರಕ್ಕೆ ಚಿನ್ನದ ಭಂಡಾರಕ್ಕೆ ಕರ್ನಾಟಕದಿಂದ ಬರುವ ಕರ್ನಾಟಕ ಗಡಿಗಳಿಂದ ಬರುವ ಚಿನ್ನದ ದಾಸ್ತಾನು ಜೀವಾಳ ಇದೆಲ್ಲಕ್ಕಿಂತಲೂ ಅಚ್ಚರಿಯ ಸಂಗತಿಯೆಂದರೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಚಿನ್ನವನ್ನು ತೆಗೆಯುವುದು ರಾಯಚೂರಿನ ಹಟ್ಟಿಯ ಚಿನ್ನದ ಗಣಿಯಲ್ಲಿ ಇಂದಿಗೂ ಕೂಡ ಚಿನ್ನದಗಣಿ ಚಿನ್ನವನ್ನು ತೆಗೆಯುವ ಗಣಿಗಾರಿಕೆ ಪ್ರಗತಿಯಲ್ಲಿದೆ ಹಾಗಾಗಿಯೇ ಇದನ್ನು ಭಾರತದ ಬಂಗಾರದ ಆಶಾಕಿರಣ ಎಂದು ಕರೆಯುತ್ತಾರೆ ಇಲ್ಲಿ ಅಶೋಕನ ಪೂರ್ವಜರ ಕಾಲದಿಂದಲು ಕೂಡ ಚಿನ್ನವನ್ನ ತೆಗೆಯಲಾಗುತ್ತಿದೆ ಎನ್ನುವುದರ ಬಗ್ಗೆ ಸಾಕ್ಷಿ ಸಿಕ್ಕಿವೆ ಹಟ್ಟಿ ಚಿನ್ನದ ಗಣಿಗಾರಿಕೆ ಬೇಳಚು ಬರಿತ ಚಿನ್ನದಲ್ಲಿ ಪ್ರಾಚೀನರು ಸುಮಾರು 195 ಮೀಟರ್ ಗಣಿ ಮಾಡಿದ್ದು ಇದು ಜಗತ್ತಿನಲ್ಲೇ ಹಳೆಯ ದಾಖಲೆ ಇಲ್ಲಿ ಸುಮಾರು ಮುನ್ನೂರಕ್ಕೂ ಪುರಾತನ ಚಿನ್ನದ ಗಣಿ ಸುತ್ತಮುತ್ತ ಪತ್ತೆಯಾಗಿವೆ
ಗಣಿಯಲ್ಲಿ ಬಳಸಿದ ಕಬ್ಬಿಣ ಬಾಣಲೆ ಮತ್ತು ಕಲ್ಲಿನ ಪೀಠ ನೀರು ಎತ್ತಲು ಬಳಸಿದ ಮಡಿಕೆಯ ಚೂರು ಇನ್ನ ಗಣಿಯ ಆಳದಲ್ಲಿ ಚಾವಡಿ ಕುಸಿದು ಬೀಳದಂತೆ ಜಾಲಿ ಮರದ ಕಂಭಗಳ ಆಸರೆ ಕೊಟ್ಟಿರೋದು ಗಣಿತಂತ್ರ ಬಗ್ಗೆ ಅವರಿಗೆ ಇದ್ದ ಜ್ಞಾನದ ಬಗ್ಗೆ ಅರಿವು ಮೂಡಿಸುತ್ತಿದೆ ಹಾಗೂ ಪರಿಶ್ರಮ ಅನ್ನು ಸಾರುತ್ತದೆ ಹಾಗಾದರೆ ಈ ಚಿನ್ನದ ಗಣಿಗಾರಿಕೆ ಮಾಡುತಿದ್ದ ಆ ಪ್ರಾಚೀನರು ಯಾರು ಆಗಿರಬಹುದು 195 ಅಳ ಅಷ್ಟು ಗಣಿಯನ್ನು ತೊಡಲು ಅವರು ಯಾವ ಉಪಕರಣ ಅನ್ನು ಬಳಸುತ್ತಿದ್ದರು ಎನ್ನುವ ಪ್ರಶ್ನೆಗೆ ಇಲ್ಲಿಯ ತನಕ ಉತ್ತರ ಸಿಕ್ಕಿಲ್ಲ ಇಲ್ಲಿ ಅಶೋಕ ಕಾಲದ ಶಾಸನದ ಪಳೆಯುಳಿಕೆ ಇಲ್ಲೇ ಸಿಕ್ಕಿದ ಪರಿಣಾಮ ಹಟ್ಟಿ ಚಿನ್ನದ ಗಣಿ ಇರುವ ಪ್ರೆದೇಶ ಅಶೋಕನ ದಕ್ಷಿಣದ ಭಾರತದ ರಾಜದಾನಿ ಸ್ವರ್ಣಗಿರಿ ಆಗಿರಬಹುದು ಎನ್ನುವ ಗುಮಾನಿ ಇದೆ ಅವನ ನಂತರ ಬಂದಂಥ ರಾಜರು ಕೂಡ ಇಲ್ಲೇ ಗಣಿಗಾರಿಕೆ ಮಾಡಿದ್ದಾರೆ
ಇನ್ನು ಹೈದರಬಾದ್ ನಿಜಾಮರ ಮಾಲೀಕತ್ವದಲ್ಲಿ ಇದ್ದಂತಹ ಡೆಕ್ಕನ ಗೋಲ್ಡ್ ಮೈನ್ಸ್ ಕಂಪನಿ ಅಲ್ಲಿ ಇದ್ದ ಮೇ ಜೋನ್ ಟೇಲರ್ ಮತ್ತು ಸನ್ಸ್ ಇವರಿಂದ 1980 ರಿಂದ1920 ತನಕ ಚಿನ್ನದ ಗಣಿಗಾರಿಕೆ ನಡಿಯುತೆ ತದನಂತರ 8 ಜುಲೈ 1947 ಸಮಯದಲ್ಲಿ ಹೈದರಬಾದ್ ಗೋಲ್ಡ್ ನಿಯಮಿತ ಸಂಸ್ಥೆ ಆಗುವುದು ಬಳಿಕ 1956 ಅಲ್ಲಿ ಹಟ್ಟಿ ಚಿನ್ನದ ಗಣಿಯನ್ನು ಮೈಸೂರು ಸರಕಾರ ನೋಡಿಕೊಳ್ಳುತ್ತದೆ ಇಂದಿನ ಕಾಲದಲ್ಲಿಯೂ ರಾಜ್ಯ ಸರ್ಕಾರ ಆದೇಶ ಮೇರೆಗೆ ಗಣಿಗಾರಿಕೆ ನಡೆಯುತ್ತಿದೆಇನ್ನೊಂದು ಕರ್ನಾಟಕ ಚಿನ್ನದ ಗಣಿ ಎಂದರೆ ಕೋಲಾರ ಕೆಜಿಎಫ್ ಸಿನಿಮಾ ಬಂದ ನಂತರ ಇನ್ನಷ್ಟು ಪ್ರಸಿದ್ದಿ ಪಡೆದಿದೆ
1802 ಅಲ್ಲಿ ಈ ಗಣಿಯನ್ನು ಪತ್ತೆಹಚ್ಚಿದೆ ಇಂಗ್ಲೆಂಡ್ ನ ಜಾನ್ ಟೇಲರ್ ಆದುನಿಕ ಗಣಿ ತಂತ್ರಜ್ಞಾನಿ ಆಗಿ ಕೋಲಾರ ಜಿಲ್ಲೆಯ ಚಿನ್ನದ ಗಣಿ ಜೀವ ತಂದ ಎಂಬ ಮಾಹಿತಿ ಲಭ್ಯವಾಗಿದೆ ಕೋಲಾರದ ಗಣಿಗಳು ನೆಲದ ಮಟ್ಟದಿಂದ ನೂರು ಕಿಲೋಮೀಟರ್ ಅಷ್ಟು ಆಳವನ್ನು ಹೊಂದಿದ್ದು ಹಾಗೂ ಪ್ರಪಂಚದ ಅತ್ಯಂತ ಹೆಚ್ಚು ಆಳವಾದ ಚಿನ್ನದ ಗಣಿ ಎಂದೇ ಪ್ರಖ್ಯಾತಿ ಪಡೆದಿದೆ ಸತತ ಹತ್ತು ವರ್ಷಗಳ ಗಣಿಗಾರಿಕೆ ಸುಮಾರು 800 ಟನ್ ಅಷ್ಟು ಚಿನ್ನ ಪತ್ತೆಯಾಗಿದೆ ಇದು ಕರ್ನಾಟಕ ಚಿನ್ನದ ಗಣಿ ಸಂಗತಿ ಆಗಿದೆ ಅದೇನೇ ಇರಲಿ ಬಿಹಾರದಲ್ಲಿ ಇರುವ ಗಣಿ ಬಗ್ಗೆ ತಿಳಿಯಲು ಸುಮಾರು 40 ವರ್ಷ ಬೇಕಾಯಿತು ಹಾಗೂ ಅದು ಇರುವೆಗಳ ಸಹಾಯದಿಂದ ಎನ್ನುವುದೇ ಆಶ್ಚರ್ಯ ಹಾಗೂ ರೋಚಕ ಘಟನೆ ಆಗಿದೆ..