ಕೊನೆಗೂ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡಿದೆ ಎಂದು ಹೇಳಬಹುದು. ಬಹುಶಃ 2020ರಲ್ಲಿ ಚೀನಾದ ಮಹಾಮಾರಿ ಕರೋನವೈರಸ್ ಬಿಟ್ಟರೆ ಅತಿ ಹೆಚ್ಚು ಚರ್ಚೆಗೆ ಒಳಪಟ್ಟ ವಿಷಯವೆಂದರೆ ಅದು ಚಿನ್ನದ ಬೆಲೆ. ಮಹಾಮಾರಿಗೆ ತುತ್ತಾಗುವವರ ಸಂಖ್ಯೆ ಗಿಂತ ರಾಕೆಟ್ ವೇಗದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈಗ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಗ್ರಾಹಕರ ಮುಖದಲ್ಲಿ ನಗು ಮೂಡಲಿದೆ. ಆದರೆ ನಿಜಕ್ಕೂ ಚಿನ್ನ ಬೆಳ್ಳಿ ಬೆಲೆಯಲ್ಲಿ ಕಡಿಮೆಯಾಗಿರುವುದು ಎಷ್ಟರಮಟ್ಟಿಗೆ ಈಗಲಾದರೂ ಚಿನ್ನವನ್ನು ಖರೀದಿ ಮಾಡಬಹುದಾ? ಎಲ್ಲದರ ಬಗ್ಗೆ ಈ ಲೇಖನದಲ್ಲಿ ಕೂಲಂಕುಶವಾಗಿ ತಿಳಿದುಕೊಳ್ಳೋಣ.

ಕರೋನವೈರಸ್ ನಿಂದಾಗಿ ಲಾಕ್ಡೌನ್ ಆರಂಭವಾಗಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿತ್ತು. 2020 ಹಾಗೂ ಇನ್ನು 20 ವರ್ಷಗಳ ಹಿಂದಿನ ಬೇಡಿಕೆಯಲ್ಲಿ ಚಿನ್ನದ ಬೆಲೆ ಇಳಿಕೆ ಇದ್ದಿತ್ತು ಆದರೂ ಕೂಡ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದಿತ್ತು. ಆದರೆ ಅದು ಅಂತಿಂಥ ಏರಿಕೆ ಅಲ್ಲ 30 ರಿಂದ 35 ಸಾವಿರದಷ್ಟಿದ್ದ ಚಿನ್ನದ ಬೆಲೆ ಮೂರು ತಿಂಗಳಲ್ಲಿ 55000 ಕ್ಕೆ ಏರಿಕೆಯಾಗಿತ್ತು. ಹಾಗೆ 40ರಿಂದ 45 ಸಾವಿರ ಇದ್ದ ಬೆಳ್ಳಿಯ ಬೆಲೆ ಕೂಡ ಮೂರು ತಿಂಗಳಲ್ಲಿ 75000 ಕ್ಕೆ ಏರಿಕೆಯಾಗಿತ್ತುಆದರೆ ಈಗ 2020ರಲ್ಲಿ ಇದೇ ಮೊದಲ ಬಾರಿಗೆ ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಶೇರು ಮಾರುಕಟ್ಟೆ ಕೂಡ ಚೇತರಿಕೆ ಕಂಡಿದೆ ಮಹಾಮಾರಿಯ ಭಯವಿದ್ದರೂ ಸಹ ಹೆಚ್ಚುಕಡಿಮೆ ಎಲ್ಲಾ ಅಂಗಡಿಗಳು ಆರಂಭವಾಗಿದ್ದರಿಂದ ಜನರು ಕೂಡ ಅಂಗಡಿಯತ್ತ ಬರುತ್ತಿದ್ದಾರೆ.

ಜನರ ಜೀವನ ಸಹಜ ಸ್ಥಿತಿಗೆ ತಲುಪಿದ್ದು ಚಿನ್ನದ ಬೆಲೆಯು ಕೂಡ ಇಳಿಕೆಯಾಗಲು ಶುರುವಾಗಿದೆ ಹಾಗಾಗಿ ಕಳೆದ ಮೂರುದಿನಗಳಿಂದ ಸುಮಾರು ಮೂರು ಸಾವಿರ ರೂಪಾಯಿ ಚಿನ್ನದ ಬೆಲೆ ಕಡಿಮೆಯಾಗಿದ್ದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 54 ಸಾವಿರ ರೂಪಾಯಿಗೆ ಇಳಿದಿದೆ. 10 ಗ್ರಾಂ 22 ಕ್ಯಾರೆಟ್ ಆಭರಣದ ಬೆಲೆ 49 ಸಾವಿರ ರೂಪಾಯಿಗೆ ಬಂದು ನಿಂತಿದೆ. ಇನ್ನು ಬೆಳ್ಳಿಯ ಬೆಲೆ ಕೂಡಾ ಒಂದು ದಿನಕ್ಕೆ ಸುಮಾರು 5174 ರೂಪಾಯಿ ಅಷ್ಟು ಇಳಿಕೆ ಆಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಈಗ 72,756 ರೂಪಾಯಿ ಇದ್ದಿದ್ದು ಈಗ ದಿಢೀರನೆ 67 ಸಾವಿರ ರೂಪಾಯಿಗೆ ಬಂದು ಇಳಿದಿದೆ. ಹೀಗೆ ಪರಿಸ್ಥಿತಿ ಮುಂದುವರೆದು ಮಾರುಕಟ್ಟೆಯಲ್ಲಿ ಇದೆ ರೀತಿ ಚೇತರಿಕೆ ಕಾಣುತ್ತಿದ್ದರೆ ಇದೊಂದು ತಿಂಗಳಲ್ಲಿ ಚಿನ್ನದ ಬೆಲೆ 45 ಸಾವಿರಕ್ಕೆ ಮತ್ತು ಬೆಳ್ಳಿಯ ಬೆಲೆ 55 ಸಾವಿರಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳೂ ಇವೆ. ಇನ್ನಷ್ಟು ಬೆಲೆ ಕಡಿಮೆ ಆಗಿ ಜನಸಾಮಾನ್ಯರಿಗೆ ಹಾಗೂ ಬಡಬಗ್ಗರಿಗೆ ಕೂಡಾ ಚಿನ್ನ ದೊರೆಯುವಂತೆ ಆಗುತ್ತದೆ.

By

Leave a Reply

Your email address will not be published. Required fields are marked *