Ultimate magazine theme for WordPress.

ದೇವಸ್ಥಾನಕ್ಕೆ ಹೋದಾಗ ಇಂತಹ ತಪ್ಪುಗಳನ್ನು ಮಾಡಿದರೆ ಏನಾಗುವುದು ಗೊತ್ತೇ

0 3

ದೇವಸ್ತಾನಗಳಿಗೆ ಹೋಗುವುದು ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸುವುದು ಈ ಎಲ್ಲವೂ ಬಹಳ ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ನಮಗೆ ತೋರಿಸಿಕೊಟ್ಟಂತಹ ಸಂಸ್ಕೃತಿ ಮತ್ತು ಸಂಪ್ರದಾಯಗಳಾಗಿವೆ ಅಷ್ಟೇ ಏಕೆ ದೇವಸ್ಥಾನಗಳು ಮತ್ತು ವಿಗ್ರಹ ಪೂಜೆ ಯುಗಯುಗ ಗಳಿಂದಲೂ ನಡೆದುಕೊಂಡ ಬಂದಂತಹ ಪದ್ದತಿಯು ಕೂಡಾ ಹಾಗಾಗಿ ನಮ್ಮ ಜನರು ಇಂದಿಗೂ ಸಹ ದೇವಸ್ಥಾನಗಳಿಗೆ ಹೋಗುತ್ತಾರೆ ದೇವರ ವಿಗ್ರಹಗಳಿಗೆ ಪೂಜೆ ಮಾಡುತ್ತಾರೆ, ತಮ್ಮ ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ ಅದನ್ನು ಪೂರ್ಣವಾಗಿ ನಂಬಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ.

ಇನ್ನೂ ಕೆಲವರು ಈ ಜಗತ್ತಿನ ಜಂಜಾಟಗಳಿಂದ ಮುಕ್ತಿ ಹೊಂದಲು ತಮ್ಮ ಮನೆಯ ಸಮಸ್ಯೆಗಳಿಂದ ಕೆಲಕಾಲ ದೂರವಿರಲು ಮನಸ್ಸಿನ ಶಾಂತಿಗಾಗಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಬರುತ್ತಾರೆ. ಯಾಕಂದ್ರೆ ದೇವಸ್ಥಾನಗಳಿಗೆ ಮತ್ತು ದೇವರ ವಿಗ್ರಹಗಳಿಗೆ ಮತ್ತು ದೇವರ ಪೂಜೆಗೆ ನಮ್ಮ ಹಿಂದೂ ಧರ್ಮದಲ್ಲಿ ಮೊದಲ ಪ್ರಾಮುಖ್ಯತೆ ಇದೆ ಆದ್ದರಿಂದಲೇ ನಾವು ದೇವರನ್ನು ಶಕ್ತಿಯ ಇನ್ನೊಂದು ಸ್ವರೂಪ ಎಂದೇ ಭಾವಿಸುವುದು ಇಷ್ಟೇ ಅಲ್ಲದೇ ನಾವು ದೇವಸ್ಥಾನಗಳಿಗೆ ಹೋಗುವುದು ಬರುವುದು ಪೂಜೆ ಮಾಡುವುದು ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯವಾಗಿದೆ ಆದರೆ ಈ ರೂಡಿಯಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುತ್ತಿದ್ದೇವೆ ದೇವಸ್ಥಾನಕ್ಕೆ ಹೋದಾಗ ನಾವು ಎಂದಿಗೂ ಈ ತಪ್ಪುಗಳನ್ನು ಮಾಡುವುದು ಸೂಕ್ತವಲ್ಲ ಮತ್ತು ದೇವಸ್ಥಾನದಲ್ಲಿ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗಾದ್ರೆ ಆ ತಪ್ಪುಗಳು ಯಾವುವು ಅಂತಹ ತಪ್ಪುಗಳನ್ನು ನಾವು ಯಾಕೆ ಮಾಡಬಾರದು ಯಾವ ಒಳ್ಳೆಯ ನಿಯಮಗಳನ್ನು ನಾವು ದೇವಸ್ಥಾನಗಳಲ್ಲಿ ಪಾಲಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ನಾವು ದೇವಸ್ಥಾನಕ್ಕೆ ಹೋದಾಗ ಎಂದಿಗೂ ಜೋರಾಗಿ ಮಾತನಾಡುವುದಾಗಲಿ ಅಥವಾ ನಗುವುದಾಗಲಿ ಮಾಡಬಾರದು ಹೀಗೆ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿರುವ ಏಕಾಗ್ರತೆ ಕಡಿಮೆಯಾಗುತ್ತದೆ ಮತ್ತು ದೇವರ ಧ್ಯಾನಕ್ಕೆ ಅಡ್ಡಿಯುಂಟಾಗುತ್ತದೆ ಮತ್ತು ನಾವು ಹೀಗೆ ಮಾಡುವುದು ಇತರೆ ಭಕ್ತಾದಿಗಳಿಗೆ ತೊಂದರೆಯುಂಟುಮಾಡುತ್ತದೆ, ಇನ್ನೂ ದೇವರ ಮುಂದೆ ನಿಂತು ಯಾವುದೇ ವ್ಯಕ್ತಿ ಪ್ರಾರ್ಥನೆ ಸಲ್ಲಿಸುತ್ತಿದ್ದಲ್ಲಿ ನಾವು ಯಾವುದೇ ಕಾರಣಕ್ಕೂ ಅವರ ಮುಂದೆ ಹೋಗಿ ನಿಲ್ಲಬಾರದು ಅಷ್ಟೇ ಅಲ್ಲದೇ ಅವರ ಮಧ್ಯೆ ನಡೆದುಕೊಂಡು ಸಹ ಹೋಗಬಾರದು ಹೀಗೆ ಮಾಡುವುದು ಅವರ ಪ್ರಾರ್ಥನೆಗೆ ಬಂಗ ತರುವಂತಾಗುತ್ತದೆ.

ಇನ್ನೂ ಕೆಲವರಿಗಂತೂ ದೇವಸ್ಥಾನದಲ್ಲಿ ಹೇಗೆ ಪ್ರದಕ್ಷಿಣೆ ಮಾಡಬೇಕೆಂದು ಗೊತ್ತಿರುವುದಿಲ್ಲ ಅವರು ವಿಮುಖವಾದ ಪ್ರದಕ್ಷಿಣೆ ಹಾಕುತ್ತಿರುತ್ತಾರೆ, ಆದರೆ ಹಾಗೆ ಮಾಡುವುದು ಸರಿಯಲ್ಲ ಯಾವಾಗಲೇ ಸರಿ ಪ್ರದಕ್ಷಿಣೆ ಮಾಡುವಾಗ ಬಲ ಭಾಗದಿಂದಲೇ ಪ್ರದಕ್ಷಿಣೆ ಮಾಡಬೇಕು ಮತ್ತು ಶಿವ ಲಿಂಗಕ್ಕೆ ಮಾತ್ರ ಅರ್ಧ ಪ್ರದಕ್ಷಿಣೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಹೋಗುವಾಗ ಚರ್ಮದ ಬೆಲ್ಟ್ ಆಗಲಿ ಚರ್ಮದ ಬ್ಯಾಗ್ ಆಗಲಿ ಇನ್ನಿತರೆ ಯಾವುದೇ ಚರ್ಮದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಚರ್ಮವು ಅಶುದ್ಧತೆಯ ಸಂಖೇತ.

ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಸಹ ದೇವರ ವಿಗ್ರಹದ ಎದುರಿಗೆ ನಿಂತು ಪ್ರಾರ್ಥನೆ ಸಲ್ಲಿಸಬಾರದು ಸ್ವಲ್ಪ ಪಕ್ಕಕ್ಕೆ ಸರಿದು ನಿಂತು ಪ್ರಾರ್ಥನೆ ಸಲ್ಲಿಸುವುದು ಒಳಿತು, ಯಾಕಂದ್ರೆ ದೇವರ ವಿಗ್ರಹದಿಂದ ಬರುವ ಪ್ರಕಾಶಮಾನವಾದ ಕಿರಣಗಳನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಮಾನವನ ಶರೀರಕ್ಕೆ ಇರುವುದಿಲ್ಲ ಆದ್ದರಿಂದ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಇನ್ನು ಮುಂದೆ ದೇವಸ್ಥಾನಗಳಿಗೆ ಹೋದಾಗ ತಪ್ಪದೆ ಈ ನಿಯಮಗಳನ್ನು ಪಾಲಿಸಿ ದೇವರ ಕೃಪೆಗೆ ಪಾತ್ರರಾಗಿ.

Leave A Reply

Your email address will not be published.