ಮಿಥುನ ರಾಶಿಯವರ ಮಾರ್ಚ್ ತಿಂಗಳ ಭವಿಷ್ಯ, ಅದೃಷ್ಟ ಅಂದ್ರೆ ಹೀಗಿರಬೇಕು

0 9,576

ಮಿಥುನ ರಾಶಿಯ ಅಧಿಪತಿ ಬುಧ. ಈ ತಿಂಗಳು ಮಿಥುನ ರಾಶಿಯವರಿಗೆ 80% ಶುಭ ಫಲಗಳು ಮತ್ತು ಕೆಲವು ಸಣ್ಣ ಪುಟ್ಟ ತೊಂದರೆಗಳು ಇವೆ. ಮಿಥುನ ರಾಶಿಯ ವ್ಯಕ್ತಿಗಳಿಗೆ ಮಾರ್ಚ್ ತಿಂಗಳ ಶುಭ ಫಲಗಳು ಏನು ಎಂಬುದನ್ನು ನೋಡೋಣ. ಮಾರ್ಚ್ ತಿಂಗಳಲ್ಲಿ ಈ ರಾಶಿಯವರಿಗೆ ಬಹಳ ಉತ್ತಮ ಸಮಯ ಆಗಿದೆ. ನೀವು ಅಂದುಕೊಂಡ ಎಲ್ಲ ಕೆಲಸಗಳು ಈ ಸಮಯದಲ್ಲಿ ಆಗುತ್ತದೆ. ಮಾರ್ಚ್ ಒಂದರಿಂದ 15 ರ ವರೆಗೆ ವೃತ್ತಿ ಜೀವನದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಹೋಗುತ್ತೀರಾ.

ಉನ್ನತ ಅಧಿಕಾರಿಗಳಿಂದ ನಿಮಗೆ ಪ್ರಶಂಶೆ ಸಿಗುತ್ತದೆ. ಆದರೆ ನೀವು ಯಾವುದೇ ರೀತಿಯ ಹತ್ತನೇ ಮನೆಯಲ್ಲಿನಿರುವ ರಾಹು ಇರುವುದರಿಂದ ಯಂತ್ರದಿಂದ ಕೆಲಸ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ . ಯಂತ್ರಗಳಿಂದ ನಿಮ್ಮ ಕೆಲಸಗಳಿಗೆ ತೊಂದರೆ ಉಂಟಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಈ ಸಮಯವನ್ನು ಬಹಳ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. 7 ನೇ ಮನೆಯಲ್ಲಿ ಗುರುವು ನಿಮಗೆ ಪರಿಪೂರ್ಣವಾಗಿ ದೈವ ಬಲವನ್ನು ನೀಡುತ್ತಾನೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಓದಿದ ಅಥವಾ ಕಲಿತ ವಿಷಯಗಳು ಒಂದು ಅಥವಾ ಎರಡು ಸಾಲಕ್ಕೆ ಪೂರ್ಣವಾಗಿ ಅರ್ಥವಾಗಿ ನಿಮ್ಮ ಪರೀಕ್ಷೆಯ ಸಮಯದಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ.

ಗುರುವಿನ ಅನುಗ್ರಹ ಪೂರ್ಣ ಇರುವುದರಿಂದ ಕಲಿಕೆಯ ವಿಷಯದಲ್ಲಿ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇನ್ನು ಸಂಸಾರಿಕ ವಿಚಾರಗಳ ಬಗ್ಗೆ ತಿಳಿಯುವುದಾದರೆ ಈ ಸಮಯದಲ್ಲಿ ಕುಟುಂಬ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಇರಲಿದೆ. ಯಾವುದೇ ರೀತಿಯ ಜಗಳ ಮನಸ್ತಾಪಗಳು ಈ ಸಮಯದಲ್ಲಿ ಆಗುವುದಿಲ್ಲ. ರಾಜಕೀಯ ವೃತ್ತಿಯಲ್ಲಿನಿರುವರಿಗೆ ಗುರು ಮತ್ತು ದೇವರ ಅನುಗ್ರಹದಿಂದ ಉತ್ತಮ ಸ್ಥಾನ ಮಾನ ದೊರೆಯುತ್ತದೆ.

ಮಿಥುನ ರಾಶಿಯವರಿಗೆ ಈ ತಿಂಗಳ ಶುಭ ದಿನಗಳು 8,13,24,29 ಆಗಿದೆ. ಈ ದಿನದಲ್ಲಿ ಉತ್ತಮ ಕೆಲಸಗಳನ್ನು ಮಾಡಿ. ಈ ತಿಂಗಳಲ್ಲಿ ನೀವು ಹಸಿರು ಹಳದಿ ಮತ್ತು ಬಿಳಿ ಬಣ್ಣದ ಉಡುಪುಗಳನ್ನು ಧರಿಸಿದರೆ ನಿಮಗೆ ಉತ್ತಮ ಫಲ ಸಿಗುತ್ತದೆ. ಮಿಥುನ ರಾಶಿಯ ಸಮಸ್ಯೆಗಳಿಗೆ ನೀವು ವಿಷ್ಣು ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು. ಇಲ್ಲವೇ ವಿಷ್ಣಸಹಸ್ರನಾಮವನ್ನು ಪಠಣ ಅಥವಾ ಶ್ರವಣ ಮಾಡಬೇಕು. ಜೊತೆಗೆ ಸತ್ಯ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಲು ಸತ್ಯ ನಾರಾಯಣ ಪೂಜೆಯನ್ನು ಮಾಡಿಸಬೇಕು ಇಲ್ಲವೇ ಎಲ್ಲಿಯಾದರೂ ಸತ್ಯ ನಾರಾಯಣ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಬೇಕು.

Leave A Reply

Your email address will not be published.