ಶಿವಣ್ಣನ ಪತ್ನಿ ಗೀತಾರ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಯಾಕೆ ಗೊತ್ತಾ, ಇಂಟ್ರೆಸ್ಟಿಂಗ್ ಆಗಿದೆ

0 27

ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ದೊಡ್ಡಮನೆ ಎರಡನೆಯ ರತ್ನ ಹಾಗೆಯೇ ಚಿರಂಜೀವಿ ಸುಧಾಕರ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು ಆದರೆ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಹೊಂದಿದ ನಟ ರಾಘವೇಂದ್ರ ರಾಜಕುಮಾರ್ ಅವರಲ್ಲಿ ರಾಜಕುಮಾರ್ ಅವರ ಗುಣವನ್ನು ನೋಡಬಹುದು

ರಾಘವೇಂದ್ರ ರಾಜಕುಮಾರ್ ಅವರು ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ತಂಗಿಯನ್ನು ಪ್ರೀತಿಸಿ ವಿವಾಹ ಆಗಿದ್ದರು .ತುಂಬಾ ಜನರಿಗೆ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ರಾಜಕುಮಾರ್ ಅವರ ವಿವಾಹ ಮಾತ್ರ ಪ್ರೇಮ ವಿವಾಹ ಎಂಬುದು ಮಾತ್ರ ತಿಳಿದಿದೆ ಆದರೆ ರಾಘವೇಂದ್ರ ರಾಜಕುಮಾರ್ ಅವರದ್ದು ಸಹ ಪೇಮ ವಿವಾಹವಾಗಿದೆ ಕನ್ನಡ ಚಿತ್ರ ರಂಗದಲ್ಲಿ ನಟನಾಗಿ ನಿರ್ಮಾಪಕನಾಗಿ ಕಾಣಿಸಿಕೊಂಡಿದ್ದಾರೆ ನಾವು ಈ ಲೇಖನದ ಮೂಲಕ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಜಕುಮಾರ್ ಅವರ ವಿವಾಹದ ಬಗ್ಗೆ ತಿಳಿದುಕೊಳ್ಳೋಣ.

ದೊಡ್ಡಮನೆ ಎಂದರೆ ಅಲ್ಲಿ ಮೂರು ರತ್ನಗಳು ಅವರಲ್ಲಿ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಶಿವಣ್ಣ ಕನ್ನಡಿಗರ ಪಾಲಿಗೆ ಹೆಟ್ರಿಕ್ ಹೀರೋ ಪುನೀತ್ ರಾಜಕುಮಾರ್ ಅವರು ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿ ಹಾಗೆಯೇ ರಾಜಕುಮಾರ್ ಅವರ ಗುಣಗಳನ್ನು ರಾಘವೇಂದ್ರ ರಾಜಕುಮಾರ್ ಅವರಲ್ಲಿ ನೋಡಬಹುದು ಹಾಗೆಯೇ ಇನ್ನೂ ಮೂರು ರತ್ನಗಳೆಂದರೆ ಗೀತ ಶಿವರಾಜ ಕುಮಾರ್ ಮತ್ತು ಮಂಗಳ ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪ್ರೀತಿಸಿ ವಿವಾಹ ಆಗಿದ್ದಾರೆ

ಇವರಿಗಿಂತಲೂ ಮೊದಲು ಪ್ರೀತಿಸಿ ವಿವಾಹ ಆದವರು ಮಂಗಳಮ್ಮ ನನ್ನು ಪ್ರೀತಿಸಿ ಮದುವೆ ಆಗಿದ್ದರು. ಶಿವಣ್ಣ ನಿಗೆ ಬಂಗಾರಪ್ಪವರ ಮಗಳನ್ನು ತಂದು ಕೊಡಬೇಕು ನಿರ್ಧಾರ ಮಾಡಿದ್ದರು ಹಾಗಾಗಿ ಶಿವಣ್ಣ ಮತ್ತು ಗೀತಾ ಅವರ ಮದುವೆ ನಿಶ್ಚಯ ಆಗುತ್ತದೆ ಈ ವಿವಾಹದಲ್ಲಿ ಒಬ್ಬ ಸುಂದರ ಯುವತಿ ಓಡಾಡಿ ಕೊಂಡು ಇರುತ್ತಾಳೆ ಅವಳು ಯಾರು ಎಂದು ತಿಳಿದುಕೊಳ್ಳಲು ರಾಘವೇಂದ್ರ ರಾಜಕುಮಾರ್ ಅವರು ಯತ್ನಿಸುತ್ತಾರೆ ಅವರ ಅತ್ತಿಗೆಯಾಗಿ ಬರುತ್ತಿರುವರ ಸಹೋದರಿಯಾಗಿ ಇರುತ್ತಾರೆ .

ಮಂಗಳ ಅವರು ಗೀತಾ ಶಿವರಾಜಕುಮಾರ್ ಅವರ ತಾಯಿಯ ತಂಗಿಯ ಮಗಳು ಹಾಗಾಗಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಂಗಳ ರಾಘವೇಂದ್ರ ರಾಜಕುಮಾರ್ ತಂಗಿ ಇವರನ್ನು ನೋಡಿ ರಾಘವೇಂದ್ರ ರಾಜಕುಮಾರ್ ಅವರಿಗೆ ಮೊದಲ ನೋಟದಲ್ಲಿ ಇವರನ್ನೇ ಮದುವೆ ಆಗಬೇಕು ಎಂದು ಕೊಳ್ಳುತ್ತಾರೆ ಕೊನೆಗೆ ಮದುವೆ ಮುಗಿಯುವ ಮುನ್ನವೇ ಮಂಗಳಮ್ಮ ಅವರ ಸ್ನೇಹ ಸಂಪರ್ಕಿಸಿದ್ದರು ಕೊನೆಗೆ ಮದುವೆ ಆಗುತ್ತೇನೆ ಎಂದು ಮಂಗಳಮ್ಮ ಅವರಿಗೆ ಹೇಳಿದಾಗ ಸ್ವಲ್ಪ ಕಸಿ ಬಿಸಿ ಗೆ ಒಳಗಾಗಿದ್ದರು.

ಮಂಗಳಮ್ಮಮನೆಯಲ್ಲಿ ಹೇಳಿಕೊಳ್ಳುವಷ್ಟು ಶ್ರೀಮಂತಿಕೆ ಇರಲಿಲ್ಲ ಮಧ್ಯಮ ಕುಟುಂಬವಾಗಿತ್ತು ಹೀಗಾಗಿ ಮಂಗಳಮ್ಮ ಅವರಿಗೆ ರಾಜಕುಮಾರ್ ಅವರ ಮನೆಯಲ್ಲಿ ಮದುವೆಗೆ ಒಪ್ಪುತ್ತಾರೆಯೇ ಎಂದು ಆತಂಕ ಇತ್ತು ಈಗಾಗಲೇ ಒಂದು ಸಂಬಂಧವನ್ನು ಬೆಳೆಸಿದಿದ್ದಾರೆ ಇನ್ನೊಂದು ಸಂಬಂಧವನ್ನು ಬೆಳೆಸುತ್ತಾರಾ ಎಂದು ಸಹ ಆತಂಕ ಇತ್ತು ಇವೆಲ್ಲ ಗೊಂದಲಗಳನ್ನು ರಾಘವೇಂದ್ರ ರಾಜಕುಮಾರ್ ಅವರಿಗೆ ಹೇಳಿದಾಗ ಅವರು ಇವೆಲ್ಲ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು .

ಶಿವಣ್ಣನ ಮದುವೆಯ ನಂತರ ರಾಘವೇಂದ್ರ ರಾಜಕುಮಾರ್ ಅವರಿಗೆ ಮದುವೆ ಮಾಡಬೇಕು ಎಂದು ಅಣ್ಣಾವ್ರು ಯೋಚನೆ ಮಾಡುತ್ತಾರೆ ಹಾಗೆಯೇ ರಾಘವೇಂದ್ರ ರಾಜಕುಮಾರ್ ಅವರನ್ನು ಸಿನಿಮಾ ಜಗತ್ತಿಗೆ ಪರಿಚಯ ಮಾಡಿಸಬೇಕು ಎನ್ನುವುದು ಸಹ ಇರುತ್ತದೆ ಹಾಗೆಯೇ ಅಣ್ಣಾವ್ರು ಮಕ್ಕಳು ಸಿನಿಮಾದಲ್ಲಿ ನಾಯಕ ನಟನಾಗಿ ಹೋಗಬೇಕು ಎಂದರೆ ಮದುವೆ ಆಗಿ ಹೋಗಬೇಕು ಎಂದು ತೀರ್ಮಾನಿಸಿದ್ದರು ಹೀಗಾಗಿ ರಾಘವೇಂದ್ರ ರಾಜಕುಮಾರ್ ಅವರಿಗೆ ಮದುವೆ ಮಾಡಬೇಕು ಎಂದು ತೀರ್ಮಾನಿಸಿದ್ದರು

ಸಾಮಾನ್ಯ ಮನೆತನದ ಹೆಣ್ಣನ್ನು ರಾಘವೇಂದ್ರ ರಾಜಕುಮಾರ್ ಅವರಿಗೆ ತರಬೇಕು ಎಂದು ಅಣ್ಣಾವ್ರು ತೀರ್ಮಾನಿಸಿದ್ದರು .ತಂದೆಯ ಈ ಮಾತನ್ನು ಕೇಳಿ ರಾಘವೇಂದ್ರ ರಾಜಕುಮಾರ್ ಅವರಿಗೆ ತುಂಬಾ ಖುಷಿ ಆಗಿತ್ತು ಈ ಸಮಯದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ತಂದೆಗೆ ವಿಷಯ ತಿಳಿಸಿದರು ನಾನು ಅತ್ತಿಗೆಯ ತಂಗಿಯನ್ನು ಇಷ್ಟಪಡುತ್ತಿರುವ ವಿಷಯವನ್ನು ತಿಳಿಸಿದರು ಹಾಗೆಯೇ ಮದುವೆ ಆಗಬೇಕು ಎಂದು ಕೊಂಡಿದ್ದೇನೆ ಎಂದು ಸಹ ಹೇಳಿದರು ಅಂತಿಮವಾಗಿ ಮಂಗಳಮ್ಮ ಅವರ ಮನೆಗೆ ಅಣ್ಣಾವ್ರು ಹೋಗಿ ನಿಮ್ಮ ಮಗಳನ್ನು ನಮ್ಮ ಮನೆಗೆ ಸೊಸೆ ಮಾಡಿಕೊಳ್ಳುತ್ತಿವಿ ಎಂದು ಕೇಳಿದ್ದರು ಹೀಗೆ ಮಂಗಳಮ್ಮ ದೊಡ್ಡಮನೆಯ ಸೊಸೆಯಾಗಿ ಬಂದರು.

ದೊಡ್ಡಮನೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರು ಮಂಗಳಮ್ಮ ಮದುವೆ ಆಗಿ ಸ್ವಲ್ಪ ಸಮಯದಲ್ಲಿ ರಾಘವೇಂದ್ರ ರಾಜಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ ರಾಘವೇಂದ್ರ ರಾಜಕುಮಾರ್ ಅವರಿಗೆ ಇಪ್ಪತೊಂಬತ್ತು ವಯಸ್ಸಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು ಇಂತಹ ಸಂಕಷ್ಟದ ಸಮಯದಲ್ಲಿ ರಾಘವೇಂದ್ರ ರಾಜಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತರು .ಸಿನಿಮಾದಿಂದ ರಾಘವೇಂದ್ರ ರಾಜಕುಮಾರ್ ಅವರು ದೂರ ಆಗುತ್ತಾರೆ ಎಲ್ಲ ರೀತಿಯಲ್ಲಿ ಸಹ ರಾಘವೇಂದ್ರ ರಾಜಕುಮಾರ್ ಅವರು ಕಷ್ಟಗಳನ್ನು ಎದುರಿಸುತ್ತಾರೆ ಹಾಗೆಯೇ ಎರಡು ಸಾವಿರದ ಹದಿಮೂರರಲ್ಲಿ ಪಾರ್ಶ್ವವಾಯು ಆಗುತ್ತದೆ ಆಗ ಸಿಂಗಪುರಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಆಗಲು ಸಹ ಮಂಗಳಮ್ಮ ಕಷ್ಟಗಳನ್ನು ಎದುರಿಸಿದ್ದಾರೆ

ಅನೇಕ ಆರೋಗ್ಯದ ಸಮಸ್ಯೆಗಳು ಕಂಡುಬಂದರೂ ಸಹ ಮಂಗಳಮ್ಮ ಅದನ್ನು ಎದುರಿಸಿ ನಿಂತಿದ್ದಾರೆ ಪಾರ್ವತಮ್ಮ ರಾಜಕುಮಾರ್ ಅವರಿಗೆ ಮಂಗಳಮ್ಮ ಎಂದರೆ ತುಂಬಾ ಇಷ್ಟ ಅವರ ಮದ್ದಿನ ಸೊಸೆ ಪಾರ್ವತಮ್ಮ ಅವರ ಎಲ್ಲ ರೀತಿ ರಿವಾಜುಗಳನ್ನು ಹಾಗೆ ರೂಢಿಸಿಕೊಂಡವರು ಮಂಗಳಮ್ಮ ಹಾಗೆಯೇ ಮಂಗಳಮ್ಮ ಹಾಗೂ ರಾಘವೇಂದ್ರ ರಾಜಕುಮಾರ್ ದಂಪತಿಗೆ ವಿನಯ ರಾಜಕುಮಾರ್ ಹಾಗೂ ಯುವ ರಾಜಕುಮಾರ್ ಎನ್ನುವ ಇಬ್ಬರು ಪುತ್ರರು ಇದ್ದಾರೆ ಹೀಗೆ ಮಂಗಳಮ್ಮ ದೊಡ್ಡ ಮನೆಯ ಆದರ್ಶವಂತ ಸೊಸೆ ಪಾರ್ವತಮ್ಮ ಅವರ ರೀತಿ ರಿವಾಜುಗಳನ್ನು ಇಂದಿಗೂ ಅಳವಡಿಸಿಕೊಂಡು ಬಂದಿರುವರು ಮಂಗಳಮ್ಮ.

Leave A Reply

Your email address will not be published.