ಕೊರೋನ ವೈರಸ್ ಬಗ್ಗೆ ಬಹಳಷ್ಟು ಜನರು ನಿರ್ಲಕ್ಷಿಸುತ್ತಿದ್ದಾರೆ. ಒಂದು ಕಡೆ ಆಸ್ಪತ್ರೆ ಸಿಗದೆ ಒದ್ದಾಡುತ್ತಿದ್ದರೆ, ಇನ್ನೊಂದು ಕಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಸಾಯುತ್ತಿದ್ದಾರೆ. ಕೊರೋನ ವೈರಸ್ ನಿಂದ ಸಾವಾಗಿರುವವರ ಮನೆಯವರಿಗೆ ಮಾತ್ರ ಅದರ ನೋವು ಏನೆಂದು ಗೊತ್ತಿದೆ. ಕೊರೋನ ವೈರಸ್ ನಿಂದ ತಮ್ಮವರನ್ನು ಕಳೆದುಕೊಂಡ ನಟ ಪವನ್ ಕುಮಾರ್ ಅವರು ವೈರಸ್ ಬಗ್ಗೆ ಹಾಗೂ ಸರ್ಕಾರ, ರಾಜಕಾರಣಿಗಳ ನಾಟಕದ ಬಗ್ಗೆ ಜನರಿಗೆ ಒಂದಿಷ್ಟು ಅವಶ್ಯಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಪವನ್ ಕುಮಾರ ಅವರು ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಲ್ಲದೆ ಕನ್ನಡ ಕಿರುತೆರೆ ನಟ ಪವನ್ ಕುಮಾರ್ ಅವರು ಕೊರೋನ ವೈರಸ್ ನಿಂದ ಆಗುತ್ತಿರುವ ಅನಾಹುತದ ಬಗ್ಗೆ ಒಂದು ವಿಡಿಯೋದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಪವನ್ ಕುಮಾರ ಅವರು ಎರಡನೆ ಅಲೆಯ ಕೊರೋನಾ ಕಳೆದ ವರ್ಷ ಬಂದಿರುವ ಕೊರೋನಾ ವೈರಸ್ ಗಿಂತ ಭಯಾನಕವಾಗಿದೆ. ರಾಜಕಾರಣಿಗಳು ಹೇಳುತ್ತಿರುವುದು ಸುಳ್ಳು ನಮ್ಮ ಕುಟುಂಬದವರು ಸರ್ಕಾರದ ಅವ್ಯವಸ್ಥೆಗೆ ಬಲಿಯಾಗಿದ್ದಾರೆ. ನಮ್ಮ ಮನೆಯಲ್ಲಿ ಇಬ್ಬರನ್ನು ಕಳೆದುಕೊಂಡಿದ್ದೇನೆ, ಭಾವ ಮತ್ತು ಅವರ ತಂದೆಯವರನ್ನು ಎರಡು ದಿನದ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡಿದ್ದೇವೆ. ವಾಟ್ಸಪ್ ನಲ್ಲಿ ಇಷ್ಟು ಜನ ಪಾಸಿಟಿವ್ ಕೇಸ್, ಇಷ್ಟು ಜನ ಗುಣಮುಖರಾದರು ಎಂಬ ಸುದ್ದಿ ಹರಿದಾಡುತ್ತಿದೆ ಅದರಿಂದ ಧೈರ್ಯ ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ ಆದರೆ ಅದರಿಂದ ಭಂಡ ಧೈರ್ಯ ಬರುತ್ತದೆ. ಇದರಿಂದ ಜನರು ಮನೆಯಿಂದ ಹೊರಗೆ ಹೋಗುತ್ತಾರೆ ಮನೆಯಲ್ಲಿರುವವರಿಗೆ ಕೊರೋನ ಅಂಟಿಸುತ್ತಾರೆ ಇದರಿಂದ ಕೊರೋನ ಕೇಸ್ ಮುಂದುವರೆಯುತ್ತಾ ಹೋಗುತ್ತದೆ, 22 ಲಕ್ಷ ಕೇಸ್ ಪತ್ತೆಯಾಗಿದೆ ಎಂದು ಪವನ್ ಅವರು ಜನರಿಗೆ ತಿಳಿಸಿದರು.

ಅಲ್ಲದೆ ಆವರು ನ್ಯೂಸ್ ಚಾನಲ್ ಗಳಲ್ಲಿ ಸಾವಿನ ಸಂಖ್ಯೆಯನ್ನು ತೋರಿಸುತ್ತಾರೆ ಅದು ಸುಳ್ಳು. ಕೊರೋನ ಇದೆಯಾ ಇಲ್ಲವಾ ಎಂದು ನೋಡಲು ಆರ್ ಟಿಪಿಸಿಆರ್ ಮಾಡುತ್ತಾರೆ. ಅದರಲ್ಲಿ ನೆಗೆಟಿವ್ ಎಂದು ಬಂದರೆ ಕೊರೋನ ಇಲ್ಲ ಎಂದು ಅರ್ಥ, ಬಿಯು ನಂಬರ್ ಜನರೇಟ್ ಆಗುವುದಿಲ್ಲ. ಪಾಸಿಟಿವ್ ಅಂತ ಬಂದರೆ ಬಿಬಿಎಂಪಿಯಿಂದ ಬಿಯು ನಂಬರ್ ಜನರೇಟ್ ಆಗುತ್ತದೆ. ಈ ನಂಬರ್ ಸಹಾಯದಿಂದ ಬಿಬಿಎಂಪಿ ಕಡೆಯಿಂದ ಬೆಡ್ ಸಹಾಯ ಆಗಬಹುದು. ಈ ನಂಬರ್ ಗೆ ಕಾಲ್ ಮಾಡಿದರೆ ಕಾಲ್ ಕನೆಕ್ಟ್ ಆಗುವುದಿಲ್ಲ. ನಿಮ್ಮ ಮನೆಯಲ್ಲಿ ಅಥವಾ ಗೊತ್ತಿರುವವರು ಆಕ್ಸಿಜನ್ ಇಲ್ಲದೆ ಒದ್ದಾಡುತ್ತಿರುತ್ತಾರೆ, ನೀವು ನೋಡುತ್ತಾ ನಿಂತು ಕೊಳ್ಳದೆ ಬೇರೆ ದಾರಿಯೆ ಇರುವುದಿಲ್ಲ. ಇದರೊಂದಿಗೆ ದುಡ್ಡು ಮಾಡಲು ಬಹಳಷ್ಟು ಜನರು ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ 10,000ರೂ ಅಥವಾ ಅವರು ಕೇಳಿದಷ್ಟು ಹಣ ಕೊಟ್ಟರೆ ಎಲ್ಲೊ ಒಂದು ಕಡೆ ಬೆಡ್ ವ್ಯವಸ್ಥೆ ಮಾಡಿಸುತ್ತಾರೆ. ಒಂದು ವೇಳೆ ಆಸ್ಪತ್ರೆ, ಬೆಡ್ ವ್ಯವಸ್ಥೆ ಸಿಕ್ಕಿದರೂ ಆಕ್ಸಿಜನ್ ಇಲ್ಲದೆ ಸಾಯಬೇಕಾಗುತ್ತದೆ. ನಿನ್ನೆ ನನ್ನ ಕಣ್ಣಾರೆ ಒಬ್ಬರು ಮಹಿಳೆ ಆಕ್ಸಿಜನ್ ಇಲ್ಲದೆ ಸಾಯುವುದನ್ನು ನೋಡಿದ್ದೇನೆ. ನಾನು ನನ್ನ ಕಣ್ಣಾರೆ ನೋಡಿರುವ ಸತ್ಯವನ್ನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ, ಎರಡನೆ ಅಲೆಯ ಕೊರೋನವೈರಸ್ ಬಗ್ಗೆ ಜಾಗೃತರಾಗಿರಿ ಎಂದು ಪವನ್ ಕುಮಾರ್ ಅವರು ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಕೊರೋನ ಬಗ್ಗೆ ನಿರ್ಲಕ್ಷ್ಯ ವಹಿಸಿ ನಿಮ್ಮ ಪ್ರಾಣವನ್ನು ಕಳೆದು ಕೊಳ್ಳಬೇಡಿ. ಸರ್ಕಾರ, ರಾಜಕಾರಣಿಗಳನ್ನು ಅವಲಂಬಿಸದೆ ಕೊರೋನ ವೈರಸ್ ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ನಾವೆಲ್ಲರೂ ತಪ್ಪದೆ ಅನುಸರಿಸಬೇಕಾಗಿದೆ. ಪವನ್ ಕುಮಾರ್ ಅವರು ತಿಳಿಸಿದ ಕೊರೋನ ರೋಗಿಗಳ ಚಿಂತಾಜನಕ ಸ್ಥಿತಿಯನ್ನು ಕೇಳಿದ ನಂತರವಾದರೂ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!