ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಗ್ಯಾಸ್, ಅಸಿಡಿಟಿ ಆಗಿದೆ. ಹೊಟ್ಟೆಯಲ್ಲಿ ಉರಿಯುವುದು, ಹುಳಿಯಾದ ತೇಗು ಗಂಟಲಲ್ಲಿ ಅಡ್ಡಬಿದ್ದಂತೆ ಅನಿಸುವುದು ಇದರ ಲಕ್ಷಣವಾಗಿದೆ.
ಪ್ರಸ್ತುತ ಇರುವ ಜೀವನಶೈಲಿಯಿಂದ ಪ್ರತಿಯೊಬ್ಬರು ಈ ಸಮಸ್ಯೆಗೆ ಗುರಿ ಯಾಗುತ್ತಿದ್ದಾರೆ. ಮುಖ್ಯವಾಗಿ ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಮಸಾಲೆ ಪದಾರ್ಥ ಹಾಗೂ ಫಾಸ್ಟ್ ಫುಡ್ ಸೇವಿಸುವುದರಿಂದ ಗ್ಯಾಸ್, ಮಲಬದ್ಧತೆ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ.
ಆದರೆ ಈ ಸಮಸ್ಯೆಬಂದಾಗ ತುಂಬಾ ಜನ ಇಂಗ್ಲೀಷ್ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಹಿಂದಿನ ಕಾಲದವರು ಮೆಡಿಸಿನ್ ತೆಗೆದುಕೊಳ್ಳುತ್ತಿರಲಿಲ್ಲ ಬದಲಾಗಿ ಮನೆಯಲ್ಲೇ ಇರುವ ಅಡುಗೆ ಪದಾರ್ಥ ಬಳಸಿ ಮನೆಮದ್ದು ತಯಾರಿಸಿ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು.
ನೀವು ಕೂಡ ಇಂತಹ ಸಮಸ್ಯೆಗಳಿದ್ದರೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮನೆಮದ್ದು ತಯಾರಿಸಿಕೊಳ್ಳಬಹುದು. ಗ್ಯಾಸ್ ಆಸಿಡಿಟಿ ಸಮಸ್ಯೆಗೆ ಸುಲಭ ಮನೆಮದ್ದು ಹೇಗೆ ಮಾಡೋದು ಅಂತಾ ತಿಳಿಯೋಣ.
ಮನೆಮದ್ದು ಮಾಡುವ ವಿಧಾನ: ಹಂಚಿನ ಮೇಲೆ ಇಂಗಿನ ಪುಡಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ಓಂ ಕಾಳನ್ನು ಹಾಕಿ ಅದನ್ನು ಚೆನ್ನಾಗಿ ಇಂಗಿನೊಂದಿಗೆ ಹುರಿದುಕೊಳ್ಳಬೇಕು ಅದು ಕಂದು ಬಣ್ಣಕ್ಕೆ ಬಂದ ನಂತರ ಇಂಗು ಹಾಗೂ ಓಂಕಾಳಿನ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.ಇದನ್ನು ಒಂದು ಬೌಲ್ ಗೆ ಹಾಕಿ. ಈ ಪುಡಿಯನ್ನು ಒಂದು ಚಮಚದಂತೆ ನೀರಿನೊಂದಿಗೆ ಮಿಕ್ಸಿ ಮಾಡಿ ಪ್ರತಿ ದಿನ ಸೇವಿಸಿದರೆ ನಿಮ್ಮ ಅಸಿಡಿಟಿ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು.