ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಇದ್ದೆ ಇರುತ್ತದೆ ಗ್ಯಾಸ್ ಇಲ್ಲದೆ ಇಂದಿನ ದಿನಗಳಲ್ಲಿ ಅಡುಗೆ ಮಾಡುವುದು ಕಷ್ಟ ಎನಿಸುತ್ತದೆ. ಗ್ಯಾಸನ್ನು ಬಳಸಿಕೊಂಡು ವೇಗವಾಗಿ ಅಡುಗೆ ಮಾದಬಹುದು ಹಿಗಾಗಿ ಪ್ರತಿಯೊಬ್ಬರೂ ಗ್ಯಾಸ್ ನ ಮೊರೆ ಹೋಗುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಬಗ್ಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿದುಕೊಳ್ಳೋಣ.
ಮೊದಲನೇಯದಾಗಿ ಗ್ಯಾಸ್ ಸಿಲಿಂಡರ್ ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸುತ್ತಾರೆ. ಆದರೆ ಎಲ್ಲ ಗ್ಯಾಸ್ ಸಿಲಿಂಡರ್ಗಳು ಕೆಂಪು ಬಣ್ಣದಲ್ಲಿರುತ್ತವೆ ಯಾಕೆ ಎಂಬುದನ್ನು ತಿಳಿದುಕೊಳ್ಳೋಣ ಬಣ್ಣಗಳಲ್ಲಿ ಅತೀ ಎದ್ದು ಕಾಣುವ ಬಣ್ಣ ಕೆಂಪುಬಣ್ಣ ಎಷ್ಟೇ ದೂರದಲ್ಲಿ ಇದ್ದರೂ ಅದು ಕಾಣಿಸುತ್ತದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗ್ಯಾಸ್ ತೆಗೆದುಕೊಂಡು ಹೋಗುವಾಗ ಅದು ಗ್ಯಾಸ್ ಎಂಬುದು ಗೊತ್ತಾಗಲಿ ಎಂಬ ಕಾರಣದಿಂದಲೂ ಅದಕ್ಕೆ ಕೆಂಪು ಬಣ್ಣ ಹಚ್ಚಿರುತ್ತಾರೆ.
ಎರಡನೆಯದಾಗಿ ಎಲ್ ಪಿ ಜಿ ಗ್ಯಾಸ್ ನ ವಾಸನೆ. ಪ್ರತಿಯೊಬ್ಬರಿಗೂ ಎಲ್ ಪಿ ಜಿ ಗ್ಯಾಸ್ ನ ವಾಸನೆ ಗೊತ್ತಿರುತ್ತದೆ. ಅದು ತುಂಬಾ ಕೆಟ್ಟದಾಗಿರುತ್ತದೆ ಆದರೆ ನಿಜವಾಗಿ ಎಲ್ ಪಿ ಜಿ ಗ್ಯಾಸ್ ಗೆ ವಾಸನೆ ಇರುವುದಿಲ್ಲ ಅದಕ್ಕೆ ಇಥೆಲ್ ಎಂಬ ಗ್ಯಾಸ್ ಅನ್ನು ಸೆರಿಸಿರುತ್ತಾರೆ ಅದರಿಂದ ನಮಗೆ ವಾಸನೆ ಗೊತ್ತಾಗುತ್ತದೆ ಗ್ಯಾಸ್ ಲೀಕ್ ಆಗುತ್ತಿದ್ದರೆ ಅದು ನಮಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಇಥೆಲ್ ಅನ್ನು ಸೇರಿಸಿಡುತ್ತಾರೆ
ಮೂರನೆಯದಾಗಿ ಸಿಲಿಂಡರನ್ ತೂಕ. ಒಂದು ಕಾಲಿ ಸಿಲಿಂಡರ್ ತೂಕ ಹದಿನೈದು.ಮೂರು ಕೆಜಿ ಇರುತ್ತದೆ ಅದಕ್ಕೆ ಹದಿನಾಲ್ಕು.ಎರಡು ಕೆಜಿ ಗ್ಯಾಸ್ ತುಂಬುತ್ತಾರೆ ಹಾಗಾಗಿ ಒಟ್ಟು ಇಪ್ಪತ್ತೊಂಬತ್ತು.ಐದು ಕೆಜಿ ತುಂಬಿದ ಸಿಲಿಂಡರ ತೂಕ ಇರುತ್ತದೆ ಇದರಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು.
ನಾಲ್ಕನೆಯದಾಗಿ ಎಲ್ ಪಿ ಜಿ ಸಿಲಿಂಡರ್ ನ ಕೆಳಗಡೆ ಇರುವ ಹೊಲುಗಳು. ಈ ಹೊಲುಗಳನ್ನು ಗಾಳಿ ಆಡುವುದಕ್ಕೆ ಮಾಡಿರುತ್ತಾರೆ. ನೆಲ ಸಾರಿಸಿದಾಗ ನೀರೆಲ್ಲ ಸಿಲಿಂಡರನ ಕೆಳಬಾಗಕ್ಕೆ ತಾಗುತ್ತದೆ ಕಾರಣ ಸಿಲಿಂಡರ್ ತುಕ್ಕು ಹಿಡಿಯುವ ಸಂಭವವಿರುತ್ತದೆ. ಅದಕ್ಕಾಗಿ ಅಲ್ಲಿ ಹೊಲುಗಳನ್ನು ಮಾಡಿರುತ್ತಾರೆ.
ಕೊನೆಯದಾಗಿ ಗ್ಯಾಸ್ ಸಿಲಿಂಡರ್ ಮೇಲೆ ಒಂದು ನಂಬರ್ ಬರೆದಿರುತ್ತಾರೆ ಉದಾಹರಣೆಗೆ ಬಿ ಹದಿಮೂರು ಅದು ಏನು ಅನ್ನುವುದು ನಿಮಗೆ ಗೊತ್ತಿರಬೇಕು ಯಾಕೆಂದರೆ ಪ್ರತಿಯೊಂದು ಗ್ಯಾಸ್ ಸಿಲಿಂಡರ್ ಗೆ ಒಂದು ನಿರ್ದಿಷ್ಟ ಅವಧಿ ಅನ್ನುವುದಿರುತ್ತದೆ ಈ ಬಿ ಹದಿಮೂರು ಅನ್ನುವುದು ಏಪ್ರಿಲ್ ನಿಂದಾ ಜೂನ್ ಅಂದರೆ ಜೂನ್ ತಿಂಗಳಲ್ಲಿ ಇದರ ಅವಧಿ ಮುಕ್ತಾಯ ಆಗುತ್ತದೆ ಎಂದು ಅರ್ಥ ಎ ಅಂತ ಇದ್ದರೆ ಜನವರಿ ಇಂದ ಮಾರ್ಚ್ ವರೆಗೆ ಸಿ ಅಂತ ಇದ್ದರೆ ಜೂಲೈ ಇಂದ ಸೆಪ್ಟೆಂಬರ್ ವರೆಗೆ ಡಿ ಅಂತ ಇದ್ದರೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ.
ಅಲ್ಲಿ ನಮೂದಿಸಿರುವ ನಂಬರ್ ನಿಯಮಿತ ಪರಿಶೀಲನೆಗೆ ಒಳಗಾಗಬೇಕಾಗಿರು ವರ್ಷವನ್ನು ಸೂಚಿಸುತ್ತದೆ. ನಿಮ್ಮ ಮನೆಗಳಲ್ಲಿಯೂ ಸಿಲಿಂಡರ್ ಇರುತ್ತದೆ ಅವುಗಳ ಮುಕ್ತಾಯದ ದಿನಾಂಕವೆನ್ನು ನೋಡಿ ಅದು ಮುಕ್ತಾಯ ಹೊಂದಿದ್ದಾರೆ ಅದನ್ನು ಮೊದಲು ಹಿಂದಿರುಗಿಸಿ ಬೇರೆಯದನ್ನಿ ತೆಗೆದುಕೊಳ್ಳಿ.