ನಮ್ಮ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ ರೈತರ ಪ್ರಗತಿಗಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ದೇಶದಾದ್ಯಂತ ಕೇಂದ್ರದಿಂದ ಎಲ್ಲ ರೈತರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ ರೈತರಿಗೆ ಅತ್ಯಗತ್ಯವಾಗಿ ಕೃಷಿ ಯಂತ್ರೋಪಕರಣಗಳು ಅದರಲ್ಲಿ ಟ್ರ್ಯಾಕ್ಟರ್ ಅತ್ಯಂತ ಪ್ರಮುಖ ರೈತ ಸ್ನೇಹಿ ಎಂದು ಹೇಳಬಹುದು ಇತರೆ ಯಾವುದೇ ಕೃಷಿ ಉಪಕರಣಗಳನ್ನು ಖರೀದಿಸಲು ಬಯಸುವ ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ ನೀಡಿದೆ.

ರೈತರು ಖರೀದಿಸುವ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಡೀಲರ್ ಗಳು ಕಡ್ಡಾಯವಾಗಿ ಗರಿಷ್ಠ ಮಾರಾಟ ದರವನ್ನು ಪ್ರದರ್ಶಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಕೇಂದ್ರ ಕೃಷಿ ಮತ್ತು ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರಾಕ್ಟರ್ ಟಿಲ್ಲರ್ ಸೇರಿದಂತೆ ರೈತರು ಖರೀದಿಸುವ ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಡೀಲರ್ ಗಳು ಕಡ್ಡಾಯವಾಗಿ ಗರಿಷ್ಠ ಮಾರಾಟ ದರವನ್ನು ಪ್ರದರ್ಶಿಸುವಂತೆ ಆದೇಶವನ್ನು ಹೊರಡಿಸಲಾಗಿದೆ.

ಕೃಷಿ ಯಂತ್ರೋಪಕರಣ ಉತ್ಪಾದನಾ ಕಂಪನಿಗಳು ಮಾರಾಟ ಮಾಡುವ ಡೀಲರ್ ಗಳು ಹಾಗೂ ಆಯಾ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಯ ವೆಬ್ ಸೈಟ್ ನಲ್ಲಿ ಕಡ್ಡಾಯವಾಗಿ ದರ ಪ್ರಕಟಿಸಲು ತಿಳಿಸಲಾಗಿದೆ.

ಕೃಷಿ ಯಂತ್ರೋಪರಣ ಖರೀದಿಸುವ ರೈತರಿಗೆ ಉತ್ತೇಜನದ ರೂಪದಲ್ಲಿ ನೀಡಲಾಗುವ ಸಹಾಯಧನ ಸೌಲಭ್ಯದ ಕುರಿತು ಸಮರ್ಪಕ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ ಐವತ್ತರಷ್ಟು ಮತ್ತು ರೈತರಿಗೆ ಶೇಕಡಾ ತೊಂಬತ್ತರಷ್ಟು,ಗರಿಷ್ಠ ಒಂದು ಲಕ್ಷ ಮಿತಿಗೊಳಪಟ್ಟು ಉಪಕರಣಗಳ ಸಹಾಯಧನ ನಿಗಧಿಪಡಿಸಲಾಗಿದೆ.

ದೇಶದ ನಾನಾ ಭಾಗಗಳಲ್ಲಿ ಯಂತ್ರೋಪಕರಣಗಳ ಮಾರಾಟಗಾರರು ಮನ ಬಂದಂತೆ ದರವಿರಿಸಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿರುವುದರಿಂದ ಕೆಲವು. ಮಾನದಂಡ ಗಳನ್ನು ಜಾರಿ ಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಎರಡುಸಾವಿರದಹದಿನಾಲ್ಕರಿಂದ ಎರಡುಸಾವಿರದ ಇಪ್ಪತ್ತೆರಡರವರೆಗೆ ಒಟ್ಟು ಐದುಸಾವಿರ ನಾಲ್ಕುನೂರಾ ತೊಂಬತ್ತು ಕೋಟಿ ಅನುದಾನವನ್ನು ಈ ಯೋಜನೆಯಡಿ ಒದಗಿಸಿದ್ದು ಕರ್ನಾಟಕ ರಾಜ್ಯಕ್ಕೆ ಒಟ್ಟು ಐದುನೂರಾ ಅರವತ್ತು.ಆರು ಏಳು ಕೋಟಿ ರೂಪಾಯಿ ಅನುದಾನ ರೈತರ ಯಂತ್ರೋಪಕರಣಗಳ ಖರಿಧಿಗಾಗಿ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಏಳು ವರ್ಷದ ಅವಧಿಯಲ್ಲಿ ದೇಶದಾದ್ಯಂತ ಗ್ರಾಮ ಪಂಚಾಯತ ಹಾಗೂ ಕೃಷಿ ವಿಜ್ಞಾನಗಳ ಕೇಂದ್ರಗಳ ಮೂಲಕವು ರೈತರಿಗೆ ಯಂತ್ರೋಪಕರಣಗಳು ದೊರೆಯುವಂತೆ ನೋಡಿಕೊಳ್ಳಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆಧುನಿಕ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ಕೃಷಿ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ ರೈತರಿಗೆ ಆರ್ಥಿಕ ಬಲವನ್ನು ನೀಡುತ್ತವೆ.

ಇಂದಿನ ಕಾಲದಲ್ಲಿ ರೈತರಿಗೆ ಸರಿಯಾದ ಬಿತ್ತನೆ, ನೀರಾವರಿ, ಕೊಯ್ಲು ಮತ್ತು ಸಂಗ್ರಹಣೆಗೆ ಸಹಾಯ ಮಾಡುವ ಸಲಕರಣೆಗಳು ಕೃಷಿ ಉಪಕರಣಗಳೊಂದಿಗೆ ಕೃಷಿ ಕೆಲಸ ಮಾಡಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆಯನ್ನು ಒಳಗೊಂಡಂತೆ ಗರಿಷ್ಠ ದರಾಗಳಾಗಿದ್ದು ಇಲಾಖೆಯು ನಿಗದಿಪಡಿಸಿದ ದರಗಳಾಗಿರುವುದಿಲ್ಲ ಆದ್ದರಿಂದ ರೈತರು ನಿಗದಿ ಪಡಿಸಿರುವುದಕ್ಕಿಂತ ಕಡಿಮೆ ದರಕ್ಕೆ ಚೌಕಾಸಿ ಮಾಡಿ ಉಪಕರಣಗಳನ್ನು ಖರೀದಿ ಮಾಡಲು ಸಹ ಅವಕಾಶವಿರುವುದಿಲ್ಲ.

ಒಟ್ಟಾರೆ ದೇಶದ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಹಾಗೂ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹತ್ತಾರು ರೈತರ ಪರ ಯೋಜನೆಗಳನ್ನು ಅನುಷ್ಠಾನ ಗಳಿಸುವಲ್ಲಿ ಸಾಫಲ್ಯ ಕಂಡುಕೊಂಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *