ಇಷ್ಟು ದಿನ ನಾವು ಗ್ಯಾಸ್ ಬುಕ್ ಮಾಡಿದಾಗ ನೇರವಾಗಿ ನಮ್ಮ ನಮ್ಮ ಮನೆಯ ಬಾಗಿಲಿಗೆ ಸಿಲಿಂಡರ್ ತಂದುಕೊಟ್ಟು ಹೋಗುವುದು ರೂಢಿ ಆಗಿತ್ತು. ಆದರೆ ಇನ್ನು ಮುಂದೆ ಈ ರೀತಿಯ ವ್ಯವಸ್ಥೆ ಇರುವುದಿಲ್ಲ ಇದರಲ್ಲಿ ಸರ್ಕಾರ ಏನೋ ಬದಲಾವಣೆಯನ್ನು ತಂದಿದೆ. ಇದೇ ಬರುವ ನವೆಂಬರ್ ಒಂದರಿಂದ ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಯ ವ್ಯವಸ್ಥೆಯು ಈಗ ಸಂಪೂರ್ಣವಾಗಿ ಬದಲಾಗಲಿದೆ. ಸರ್ಕಾರ ಇದರಲ್ಲಿ ಯಾವೆಲ್ಲ ಬದಲಾವಣೆಗಳನ್ನು ತಂದಿದೆ? ಇನ್ಮುಂದೆ ಸಿಲಿಂಡರ್ ಪಡೆಯಲು ಯಾವೆಲ್ಲ ವಿಧಾನ ಅನುಸರಿಸಬೇಕು ಎನ್ನುವುದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈಗ ಬರುವ ನವೆಂಬರ್ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾವಣೆ ಆಗಲಿದ್ದು, ಇದರ ಬಗೆಗಿನ ಹೊಸ ನಿಯಮಗಳು ಕೂಡಾ ನವೆಂಬರ್ 1 ರಿಂದಲೇ ಜಾರಿಗೆ ಬರಲಿದ್ದು, ಹೊಸದಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಈ ಹೊಸ ನಿಯಮಗಳ ಕುರಿತು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಯ ವ್ಯವಸ್ಥೆಯು ಈಗ ಸಂಪೂರ್ಣವಾಗಿ ಬದಲಾಗಲಿದ್ದು. ಸರಕಾರಿ ತೈಲ ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿವೆ. ನವೆಂಬರ್ 1ರಿಂದಲೇ ಹೊಸ ವಿತರಣ ವ್ಯವಸ್ಥೆ ಜಾರಿಗೆ ಬರಲಿದೆ.
ಸಿಲಿಂಡರ್‌ನಿಂದ ಅನಿಲ ಕದಿಯುವುದನ್ನು ತಡೆಯಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸುವ ಮುಖ್ಯ ಉದ್ದೇಶಗಳೊಂದಿಗೆ ಸಿಲಿಂಡರ್ ಹೋಂ ಡೆಲಿವರಿಯಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ತೈಲ ಕಂಪನಿಗಳು ಎಲ್‌ಪಿಜಿ (LPG) ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆ ಜಾರಿ ಮಾಡಿದ ನಂತರ, ಸಿಲಿಂಡರ್ ಪಡೆಯಲು ಕೇವಲ ಗ್ಯಾಸ್ ಬುಕ್ ಮಾಡಿದರಷ್ಟೇ ಸಾಲದು. ಸಿಲಿಂಡರ್ ಪಡೆಯುವಾಗಲೂ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿವೆ. ಈಗ ಜಾರಿಗೆ ತರುವ ಹೊಸ ಡೆಲಿವರಿ ವ್ಯವಸ್ಥೆಯನ್ನು ಆರಂಭದಲ್ಲಿ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಹೊಸ ವ್ಯವಸ್ಥೆಯಲ್ಲಿ ವಿತರಣಾ ದೃಢೀಕರಣ ಕೋಡ್ (ಡಿಎಸಿ) ವಿಧಾನವನ್ನು ಪರಿಚಯಿಸಿದೆ. ಅಂದರೆ ಸಿಲಿಂಡರ್ ಬುಕ್ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ಅನ್ನು ರವಾನಿಸಲಾಗುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ತೋರಿಸಿದರೆ ಮಾತ್ರ ಸಿಲಿಂಡರ್ ವಿತರಣೆಯು ಪೂರ್ಣಗೊಳ್ಳುವುದು ಕೋಡ್ ತೋರಿಸದೆ ಇದ್ದಲ್ಲಿ ನಮಗೆ ಸಿಲಿಂಡರ್ ಸಿಗುವುದಿಲ್ಲ ಮತ್ತು ಸಿಲಿಂಡರ್ ಡೆಲಿವರಿ ಸ್ಟೇಟಸ್ ಕೂಡಾ ಬಾಕಿ ಉಳಿಯುತ್ತದೆ.
ಈಗಾಗಲೇ ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್ ಸಂಖ್ಯೆ ಹಾಗೂ ಗ್ಯಾಸ್ ಏಜೆನ್ಸಿಗೆ ನೀಡಿರುವ ಮೊಬೈಲ್ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವಿತರಣೆಯ ಸಮಯದಲ್ಲಿ ನವೀಕರಿಸಲು ಸಾಧ್ಯವಿದೆ. ಇದಕ್ಕಾಗಿ ಡೆಲಿವರಿ ಹುಡುಗನಿಗೆ ಅಪ್ಲಿಕೇಶನ್ ಒದಗಿಸಲಾಗುವುದು. ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಬಳಿ ನವೀಕರಿಸಿಕೊಳ್ಳಬಹುದು. ಅಪ್ಲಿಕೇಶನ್ ಮೂಲಕ ಮೊಬೈಲ್ ಸಂಖ್ಯೆಯನ್ನು ರಿಯಲ್ ಟೈಮ್ ಆಧಾರದಲ್ಲಿ ನವೀಕರಿಸಲಾಗುತ್ತದೆ. ಇದರ ನಂತರ ಒಂದೇ ಸಂಖ್ಯೆಯಿಂದ ಕೋಡ್ ಅನ್ನು ರಚಿಸುವ ಸೌಲಭ್ಯವಿರುತ್ತದೆ. ಒಂದು ವೇಳೆ ನೀವು ತಪ್ಪು ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೀಡಿದ್ದರೆ, ನಿಮ್ಮ ಸಿಲಿಂಡರ್ ಅನ್ನು ತಡೆಹಿಡಿಯಲಾಗುತ್ತದೆ. ತೈಲ ಕಂಪನಿಗಳು ಮೊದಲು 100 ಸ್ಮಾರ್ಟ್ ಸಿಟಿಗಳಲ್ಲಿ ಈ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದು ಇದನ್ನು ಒಂದು ಪ್ರಾಯೋಗಿಕ ಯೋಜನೆಯಾಗಿ ಮಾಡಲಾಗುತ್ತದೆ. ಕ್ರಮೇಣ ಅದೇ ವ್ಯವಸ್ಥೆಯನ್ನು ಇಡೀ ದೇಶದಾದ್ಯಂತ ಇತರ ಭಾಗಗಳಲ್ಲಿ ಕೂಡಾ ಜಾರಿಗೆ ತರಲಾಗುವುದು. ಪ್ರಸ್ತುತ ಈ ವ್ಯವಸ್ಥೆಯು ಎರಡು ನಗರಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ವ್ಯವಸ್ಥೆಯು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೊಸ ವ್ಯವಸ್ಥೆಯಿಂದ ಹೊರಗಿಡಲಾಗಿದೆ.