ಬೆಳ್ಳುಳ್ಳಿಯಿಂದ ಹಲವಾರು ರೀತಿಯ ಉಪಯೋಗಗಳು ಇವೆ. ನಮಗೆ ಗೊತ್ತಿರುವ ಹಾಗೆ ನಾವು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಮಾತ್ರ ನಮ್ಮ ದೇಹಕ್ಕೆ ಆರೋಗ್ಯಕರ ಲಾಭಗಳು ಇದೆ ಅಂತ ತಿಳಿದುಕೊಂಡಿದ್ದೇವೆ. ಬೆಳ್ಳುಳ್ಳಿಯನ್ನು ಕೇವಲ ನಾವು ತಿನ್ನುವುದರಿಂದ ಮಾತ್ರ ಅಲ್ಲ ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಸಹ ಅದರಿಂದ ಹಲವಾರು ಉಪಯೋಗಗಳಿವೆ. ಉಪಯೋಗಗಳೇನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಂಡು ಮಲಗಬೇಕು ಇದರಿಂದ ಯಾರಿಗೆಲ್ಲ ನಿದ್ದೆ ಬರುತ್ತೆ ನಿದ್ರಾಹೀನತೆ ಇರುತ್ತದೆ ಈ ರೀತಿ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಅಷ್ಟೇ ಅಲ್ಲದೆ ಹೀಗೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಕೂಡ ಸರಿಯಾಗುತ್ತದೆ ಈ ಮೂಲಕ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ನಾವು ಯಾವುದೇ ರೀತಿಯ ಆಹಾರವನ್ನು ಸೇವಿಸಿದರೂ ಹೇಗೆ ಎಷ್ಟೇ ಕಷ್ಟಪಟ್ಟರೂ ಅದು ಜೀರ್ಣ ಆಗದಿದ್ದಾಗ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳನ್ನು ಇಟ್ಟುಕೊಂಡು ಮಲಗುವುದರಿಂದ ಆಹಾರ ಜೀರ್ಣವಾಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಅಂತಹ ಯಾವುದೇ ಸಮಸ್ಯೆ ಇದ್ದರೂ ಸಹ ಹಾಗೂ ರಾತ್ರಿ ಸಮಯದಲ್ಲಿ ಉಸಿರಾಟದ ಸಮಸ್ಯೆ ಇದ್ದವರು ಈ ರೀತಿ ದಿನಗಳಲ್ಲಿ ಹೆಸರನ್ನು ಇಟ್ಟುಕೊಂಡು ಮಲಗುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ ಒಂದು ಒಳ್ಳೆಯ ಆಂಟಿಬಯೋಟಿಕ್ ಆಗಿದ್ದು ಇದರಲ್ಲಿ ಆಂಟಿ ಫಂಗಲ್ ಗುಣ ಇರುತ್ತದೆ. ಅಂಶಗಳಿರುವುದರಿಂದ ಶೀತ ಕೆಮ್ಮು ಆಗೋದನ್ನು ತಡೆಗಟ್ಟಬಹುದು. ಯಾವುದೇ ರೀತಿಯ ಇನ್ಫೆಕ್ಷನ್ ಆಗದಂತೆ ತಡೆಗಟ್ಟಬಹುದು. ಬೆಳ್ಳುಳ್ಳಿಯನ್ನು ಈ ರೀತಿಯಾಗಿ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಅದು ನಮ್ಮ ಕೂದಲು ಉದುರುವ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ. ಹೇಗೆಂದರೆ ಬೆಳ್ಳುಳ್ಳಿ ಇಂದ ಬರುವಂತಹ ವಾಸನೆಗೆ ರಕ್ತ ಸಂಚಾರ ಸರಾಗವಾಗಿ ನಡೆದು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶಗಳು ಕರಗಲು ಸಹ ಸಹಾಯ ಮಾಡುತ್ತದೆ. ನಿಮ್ಮ ಮೆದುಳಿನ ಕಾರ್ಯಕ್ಷಮತೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಫಂಗಲ್, ಅಂಟಿ ಬ್ಯಾಕ್ಟರಿಯಲ್, ಆಂಟಿ ವೈರಲ್ ಗುಣಗಳು ಇರುತ್ತದೆ. ಈ ಎಲ್ಲ ಗುಣಗಳು ಇರುವುದರಿಂದಲೇ ಬೆಳ್ಳುಳ್ಳಿ ನಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಗಳು ಆಗದೆ ಇರುವ ಹಾಗೆ ತಡೆಯುತ್ತದೆ.

ಬೆಳ್ಳುಳ್ಳಿಯನ್ನು ರಾತ್ರಿ ಮಾತ್ರ ಅಲ್ಲದೆ ಬೆಳಗ್ಗೆ ಕಾಲು ಹೊಟ್ಟೆಯಲ್ಲಿ ಸೇವಿಸುವುದರಿಂದಲೂ ಸಹ ಹಲವಾರು ರೀತಿಯ ಉಪಯೋಗಗಳು ನಮಗೆ ಇವೆ. ಬೆಳ್ಳುಳ್ಳಿ ಆಂಟಿ ವೈರಲ್ ಆಗಿರುವುದರಿಂದ ಕೆಮ್ಮು ಶೀತ ಇಂತಹ ಕಾಯಿಲೆಗಳನ್ನು ತಡೆಗಟ್ಟುತ್ತದೆ. ನಮ್ಮ ಬ್ಲಡ್ ಪ್ರೆಶರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುವುದರಿಂದ ಹಿಡಿದು ಹಾರ್ಟ್ ಅಟ್ಯಾಕ್ ಆಗುವಂತಹ ಸಮಯದಲ್ಲಿ ಕೂಡ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ. ಕ್ಯಾನ್ಸರ್ನ ಗುಣಗಳನ್ನು ತಡೆಯುತ್ತದೆ. ನಮ್ಮ ದೇಹದಲ್ಲಿರುವ ಇಂತಹ ಕೆಟ್ಟ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ದೂರವಿರಬಹುದು. ಈ ರೀತಿಯಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಾಗೂ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಒಂದು ಅಥವಾ ಎರಡು ಎಸಳು ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗುವುದರಿಂದ ಇಷ್ಟೆಲ್ಲ ಲಾಭಗಳಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!