ಮಸಾಲೆಯು ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಬಹುದು. ಸಾಮಾನ್ಯವಾಗಿ ಇದನ್ನು ಭಾರತೀಯ ಮೇಲೋಗರಗಳಲ್ಲಿ ಅಥವಾ ಫಲಾವ್ ಮತ್ತು ಬಿರಿಯಾನಿಯಂತಹ ರೆಸಿಪಿಗಳಲ್ಲಿ ಬಳಸಲಾಗುತ್ತದೆ. ಅಂತಹ ಒಂದು ಸರಳ ಮತ್ತು ವಿವಿಧೋದ್ದೇಶ ಮೇಲೋಗರ ಮಿಶ್ರಣವೆಂದರೆ ಮನೆಯಲ್ಲಿ ತಯಾರಿಸಿದ ಈ ಗರಂ ಮಸಾಲೆ ಮಿಶ್ರಣ ಪುಡಿ ಆಗಿದೆ. ಅದರ ತೀಕ್ಷ್ಣವಾದ ಪರಿಮಳ ಮತ್ತು ಸುವಾಸನೆಗೆ ಇದು ಹೆಸರುವಾಸಿಯಾಗಿದೆ. ಆದ್ದರಿಂದ ನಾವು ಇಲ್ಲಿ ಗರಂ ಮಸಾಲಾ ಪುಡಿಯನ್ನು ಮನೆಯಲ್ಲಿ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದಾಗಿ ಬಾಣಲೆಯಲ್ಲಿ ಮುಕ್ಕಾಲು ಕಪ್ ಕೊತ್ತಂಬರಿ ಬೀಜ ತೆಗೆದುಕೊಂಡು ಕಡಿಮೆ ಉರಿಯಲ್ಲಿ ಹುರಿಯಬೇಕು. ಮಸಾಲೆಗಳು ಪರಿಮಳ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಪಕ್ಕಕ್ಕೆ ಇರಿಸಬೇಕು.ಅದೇ ಬಾಣಲೆಯಲ್ಲಿ ಅರ್ಧ ಕಪ್ ಜೀರಿಗೆ, 1 ಟೀಸ್ಪೂನ್ ಓಮ್ ಕಾಳು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಬೇಕು.ಇದನ್ನು ಸಹ ಪರಿಮಳ ಬರುವವರೆಗೆ ಹುರಿಯಬೇಕು. ಹಾಗೆಯೇ 2 ಟೀಸ್ಪೂನ್ ಕಾಳುಮೆಣಸು ಮತ್ತು 3 ಒಣಗಿದ ಕೆಂಪು ಮೆಣಸಿನಕಾಯಿ ತೆಗೆದುಕೊಳ್ಳಬೇಕು.
ನಂತರ ಮೆಣಸಿನಕಾಯಿ ಗರಿಗರಿಯಾಗುವವರೆಗೆ ಹುರಿಯಬೇಕು. ನಂತರದಲ್ಲಿ 5 ಸ್ಟಾರ್, 3 ಇಂಚಿನ ದಾಲ್ಚಿನ್ನಿ, 2 ಮೆಸ್, 5 ಕಪ್ಪು ಏಲಕ್ಕಿ, 2 ಜಾಯಿಕಾಯಿ, 3 ಟೀಸ್ಪೂನ್ ಏಲಕ್ಕಿ, 1 ಟೀಸ್ಪೂನ್ ಲವಂಗ, 2 ಟೀಸ್ಪೂನ್ ಬಡೇ ಸೋಂಪು ಮತ್ತು 5 ಬೇವಿನ ಎಲೆ ಸೇರಿಸಬೇಕು. ನಂತರದಲ್ಲಿ ಎಲ್ಲಾ ಮಸಾಲೆಗಳು ಸುಡದೆ ಪರಿಮಳ ಬರುವವರೆಗೆ ಹುರಿಯಬೇಕು. ಚೆನ್ನಾಗಿ ಹುರಿದುಕೊಂಡ ಎಲ್ಲಾ ಮಸಾಲೆಗಳನ್ನು ತಣ್ಣಗಾಗಿಸಿ ಮಿಕ್ಸಿಗೆ ಹಾಕಬೇಕು. ಬಿಸಿಯಿರುವಾಗಲೇ ಸಾಮಗ್ರಿಗಳನ್ನು ಬೀಸಬಾರದು.
ಈಗ ಮಿಕ್ಸರ್ ಗೆ 1 ಟೀಸ್ಪೂನ್ ಶುಂಠಿ ಪುಡಿಯನ್ನು ಸೇರಿಸಿ ಒರಟಾದ ಪುಡಿಯನ್ನಾಗಿ ರುಬ್ಬಿಕೊಳ್ಳಬೇಕು. ಕೊನೆಯದಾಗಿ ಗರಂ ಮಸಾಲಾ ಸಿದ್ಧವಾಗುತ್ತದೆ. ನಂತರದಲ್ಲಿ ಇದನ್ನು ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಯಾವಾಗ ಬೇಕಾದರೂ ತೆಗೆದುಕೊಂಡು ಬಳಸಬಹುದು. ಇದನ್ನು ಖಾರವಾಗಿ ಮಾಡಬಹುದಾದ ಎಲ್ಲಾ ರೀತಿಯ ಪದಾರ್ಥಗಳಿಗೆ ಬಳಕೆ ಮಾಡಬಹುದು. ಹಾಗೆಯೇ ಇದನ್ನು ಹಾಕಿದರೆ ಅಡುಗೆಯು ಬಹಳ ರುಚಿಯಾಗಿ ಇರುತ್ತದೆ. ಆದ್ದರಿಂದ ಇದನ್ನು ಸುಲಭವಾಗಿ ಮಾರುಕಟ್ಟೆಯಲ್ಲಿ ಕೊಳ್ಳುವುದರ ಬದಲು ಮನೆಯಲ್ಲಿ ಮಾಡಿಕೊಂಡು ಬಳಕೆ ಮಾಡಬಹುದು.
ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287