ಮಕ್ಕಳನ್ನು ಹೆತ್ತರೆ ಸಾಲುವುದಿಲ್ಲ ತಂದೆ-ತಾಯಿಯಾದವರು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಉತ್ತಮ ಜೀವನವನ್ನು ಕಟ್ಟಿಕೊಳ್ಳುವಂತೆ ಮಾಡಬೇಕು. ಕೆಟ್ಟ ಚಟಕ್ಕೆ ಬಲಿಯಾಗುವ ಹುಡುಗರ ಜೀವನವೆ ಹಾಳಾಗುತ್ತದೆ. ಕೆಟ್ಟ ಚಟಕ್ಕೆ ಬಲಿಯಾಗದಂತೆ ಮಕ್ಕಳನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ತೆಲಂಗಾಣದಲ್ಲಿ ತನ್ನ ಮಗ ಗಾಂಜಾ ವ್ಯಸನಿಯಾಗಿದ್ದಾನೆ ಎಂದು ತಾಯಿ ಮಗನನ್ನು ಥಳಿಸಿದ ಘಟನೆಯನ್ನು ನೋಡಬಹುದಾಗಿದೆ. ಈ ಘಟನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಮಗನನ್ನು ತಾಯಿಯೊಬ್ಬಳು ಕಂಬಕ್ಕೆ ಕಟ್ಟಿ, ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಮೆಣಸಿನ ಪುಡಿ ಹಚ್ಚಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಹೌದು ಮಗ ಗಾಂಜಾ ವ್ಯಸನಿಯಾಗಿರುವುದನ್ನು ನೋಡಿ ಸಹಿಸಲಾಗದೆ ತಾಯಿ ತನ್ನ ಮಗನಿಗೆ ಥಳಿಸಿ ಮುಖಕ್ಕೆ ಮೆಣಸಿನಕಾಯಿ ಪುಡಿ ಹಚ್ಚಿದ್ದಾರೆ. ಒಂದು ವರ್ಷದೊಳಗೆ ಗಾಂಜಾ ಸೇವಸುವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ. ಇದೀಗ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಿನಗೂಲಿ ಕೆಲಸ ಮಾಡುತ್ತಿದ್ದ ರಮಣ ಅವರು ಆರಂಭದಲ್ಲಿ ಮಗನಿಗೆ ಗಾಂಜಾ ಸೇವನೆ ಬಿಡುವಂತೆ ಕೇಳಿಕೊಂಡಿದ್ದಾರೆ ಆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ಮಗನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ಒಂದು ದಿನ ತಮ್ಮ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನಕಾಯಿಯ ಪುಡಿ ಎರಚಿ ಶಿಕ್ಷಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು ರಾಜ್ಯದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೆ ಬಿಟೆಕ್ ವಿದ್ಯಾರ್ಥಿಯೊಬ್ಬ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೆ ಈ ವಾರದ ಆರಂಭದಲ್ಲಿ ಹೈದರಾಬಾದ್ ಪೊಲೀಸರು ಸ್ಟಾರ್ ಹೋಟೆಲ್‍ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಹೈ-ಪ್ರೊಫೈಲ್ ಕುಟುಂಬಗಳಿಗೆ ಸೇರಿದ ಸುಮಾರು 150 ಜನರನ್ನು ಬಂಧಿಸಿದ್ದಾರೆ. ಯಾವ ತಾಯಿಗೆ ತಾನೆ ತನ್ನ ಮಗ ಕೆಟ್ಟ ಚಟಕ್ಕೆ ಬಲಿಯಾದರೆ ಇಷ್ಟ ಆಗುತ್ತದೆ.
ತಾಯಿ ಮಗನನ್ನು ಕೆಟ್ಟ ಚಟದಿಂದ ದೂರ ಮಾಡಲು ಸತತ ಪ್ರಯತ್ನ ಮಾಡಿದ್ದಾಳೆ ಆದರೆ ಅವನು ಮಾತು ಕೇಳದೆ ಇದ್ದಾಗ ಇಂತಹ ಶಿಕ್ಷೆಯನ್ನು ಕೊಟ್ಟಿದ್ದಾಳೆ. ಮಕ್ಕಳನ್ನು ಕೆಟ್ಟ ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳುವುದು ತಂದೆ ತಾಯಿಯ ಕರ್ತವ್ಯವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮಕಳನ್ನು ತಪ್ಪು ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳಿ.