Ultimate magazine theme for WordPress.

ನಟಿ ಅನುಪ್ರಭಾಕರ್ ಅವರ ಮುದ್ದು ಫ್ಯಾಮಿಲಿ ಹಾಗೂ ಸುಂದರ ಮನೆ ಹೇಗಿದೆ ನೋಡಿ ಮೊದಲಬಾರಿಗೆ

0 2

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯರಲ್ಲಿ ಅನು ಪ್ರಭಾಕರ್ ಒಬ್ಬರು. ಅನು ಪ್ರಭಾಕರ್ ಅವರು ಜನಿಸಿದ್ದು 9 ನವೆಂಬರ್ 1980 ಬೆಂಗಳೂರಿನಲ್ಲಿ, ಇವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿರ್ಮಲಾ ರಾಣಿ ಹೈಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾರೆ. ಇವರ ತಂದೆ ಎಮ್ .ವಿ ಪ್ರಭಾಕರ್, ತಾಯಿ ಗಾಯತ್ರಿ ಪ್ರಭಾಕರ್. ಇವರ ಸಹೋದರನ ಹೆಸರು ವಿಕ್ರಮ್. ಅನು ಅವರು ಬೆಂಗಳೂರಿನ ಉಪನಗರವಾದ ಮಲ್ಲೇಶ್ವರಂನಲ್ಲಿ ಬೆಳೆದರು. ಅಲ್ಲಿ ಅವರು ನಿರ್ಮಲಾ ರಾಣಿ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು. ನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು.

ಇವರು ಚಿಕ್ಕ ವಯಸಿನಲ್ಲಿಯೇ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.
1999ರಲ್ಲಿ ಬಿಡುಗಡೆಯಾದ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅನು ಪ್ರಭಾಕರ್ ಕೆಲವೇ ದಿನಗಳ ಹಿಂದೆ 22 ವರ್ಷಗಳ ಕಾಲ ಸಿನಿ ಜರ್ನಿ ಪೂರೈಸಿದ್ದಾರೆ. ಕಾಲೇಜು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಂಪೂರ್ಣವಾಗಿ ಅಭಿನಯದಲ್ಲಿ ತೊಡಗಿಸಿಕೊಂಡಿದ್ದ ಅವರು ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಹಲವು ಸಿನೆಮಾಗಳಲ್ಲಿ ಅಭಿನಯಿಸಿ ಇವರು “ಅಭಿನಯ ಸರಸ್ವತಿ”ಯಾಗಿ ಕನ್ನಡ ಚಿತ್ರ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರು ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಅನು ಪ್ರಭಾಕರ್ ಅವರು ಮಾರ್ಚ್ ೨೦೦೨ರಲ್ಲಿ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು. ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು. ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು. ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ.

ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು ಅಭಿನಯ ಸರಸ್ವತಿ ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು. ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧ ಮತ್ತು ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ. ಸದ್ಯ ಅನುಪ್ರಭಾಕರ್ ಅವರು ಬೆಂಗಳೂರಿನ ಒಂದು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ತಮ್ಮದೇ ಆದ ಸ್ವಂತ ಫ್ಲ್ಯಾಟ್ ಅನ್ನೂ ಖರೀದಿಸಿ ಅಲ್ಲೇ ತಮ್ಮ ಪತಿ ಪುತ್ರಿಯೊಂದಿಗೆ ಸುಂದರ ಜೀವನವನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.