ಇಂದು ನಾವು ನಿಮಗೆ ತಿಳಿಸುತ್ತಿರುವ ವಿಷಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಡೆಯಿಂದ ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ ರೈತರಿಗೆ ತಮ್ಮ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡುವುದಕ್ಕೆ ಬೆಳೆ ಬೆಳೆಯುವುದಕ್ಕೆ ನೀರಿನ ವ್ಯವಸ್ಥೆ ಇರುವುದಿಲ್ಲ
ಅಂತಹ ರೈತರ ಹೊಲ ಗದ್ದೆಯಲ್ಲಿ ಒಂದು ಕೊಳವೆಬಾವಿಯನ್ನು ಹಾಕಿಸಲಾಗುತ್ತದೆ ನಂತರ ಅಲ್ಲಿ ಒಂದು ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಅದಕ್ಕೆ ಪೈಪಿನ ಮೂಲಕ ರೈತರ ಹೊಲಗದ್ದೆಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಇದನ್ನ ಮಾಡಿಸುವುದಕ್ಕೆ ಏನೆಲ್ಲ ಖರ್ಚು ಬರುತ್ತದೆ ಅದನ್ನು ಕರ್ನಾಟಕ ಸರ್ಕಾರವೇ ನಿಭಾಯಿಸುತ್ತದೆ. ಮೂರು ಲಕ್ಷದವರೆಗೆ ಸರ್ಕಾರವೇ ಉಚಿತವಾಗಿ ಹಣವನ್ನ ನೀಡುತ್ತದೆ.
ಹಾಗಾದರೆ ಈ ಗಂಗಾ ಕಲ್ಯಾಣ ಯೋಜನೆಯ ಸಂಪೂರ್ಣವಾದ ಲಾಭವನ್ನು ಪಡೆಯುವುದಕ್ಕೆ ರೈತರು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಮತ್ತು ಯಾವ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಒಂದು ನಿನಗೆ ತಿಳಿಸಿಕೊಡುತ್ತೇವೆ.
ಅರ್ಜಿ ಸಲ್ಲಿಸುವುದಕ್ಕೆ ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಆಫೀಸಿಯಲ್ ವೆಬ್ಸೈಟನ್ನು ತೆರೆದುಕೊಳ್ಳಬೇಕು. ಅದನ್ನು ತೆರೆದ ನಂತರ ಕೆಳಗಡೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಡೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಅದರಲ್ಲಿ ಗಂಗಾ ಕಲ್ಯಾಣ ಯೋಜನೆಯ ಮೇಲೆ ನೀವು ಕ್ಲಿಕ್ ಮಾಡಬೇಕು. ಅಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಕಂಡುಬರುತ್ತವೆ.
ಮೂರು ಲಕ್ಷದವರೆಗೆ ಉಚಿತ ಹಣದ ಸಹಾಯವನ್ನು ಕರ್ನಾಟಕ ಸರ್ಕಾರ ನೀಡುತ್ತದೆ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಂದ ಯಾರು ಅರ್ಜಿಯನ್ನು ಸಲ್ಲಿಸುತ್ತಾರೆ ಅವರಿಗೆ ಮೂರು ಲಕ್ಷದವರೆಗೆ ಕೊಳವೆಬಾವಿಯನ್ನು ತೆಗೆಯುವುದಕ್ಕೆ ಸರಕಾರ ಸಹಾಯಧನ ನೀಡುತ್ತದೆ.
ಉಳಿದ ಜಿಲ್ಲೆಗಳಲ್ಲಿ ಒಂದುವರೆ ಲಕ್ಷ ರೂಪಾಯಿ ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಕೊಳವೆ ಬಾವಿಯನ್ನು ಕೊರೆಸಿ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದಕ್ಕೆ ಶೇಕಡಾ ನಾಲ್ಕರ ಬಡ್ಡಿ ದರದಲ್ಲಿ ಐವತ್ತು ಸಾವಿರ ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಅದನ್ನು ನೀವು ಮೂವತ್ತಾರು ತಿಂಗಳುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ನೋಡೋಣ.
ಮೊದಲನೆಯದಾಗಿ ರೈತರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು ಎರಡನೆಯದಾಗಿ ಕರ್ನಾಟಕದಲ್ಲಿ ವಾಸವಾಗಿರಬೇಕು ಮತ್ತು ಅರ್ಜಿ ಸಲ್ಲಿಸುವ ರೈತ ಸಣ್ಣ ಹಾಗೂ ಅತಿ ಸಣ್ಣ ರೈತ ನಾಗಿರಬೇಕು ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುತ್ತಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ವರಮಾನ ತೊಂಬತ್ತಾರು ಸಾವಿರ ರೂಪಾಯಿ ಒಳಗಡೆ ಇರಬೇಕು.
ಇಷ್ಟು ಅರ್ಹತೆಯನ್ನು ಹೊಂದಿದ್ದರೆ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಅದರ ಲಾಭವನ್ನು ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎನ್ನುವುದನ್ನು ನೋಡುವುದಾದರೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಪಹಣಿ ಪತ್ರಿಕೆ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ಗುರುತಿಸುವುದಕ್ಕೆ ಹಿಡುವಳಿದಾರರ ಪ್ರಮಾಣ ಪತ್ರ ಬೇಕಾಗುತ್ತದೆ.
ಜೊತೆಗೆ ಬ್ಯಾಂಕ್ ಪಾಸ್ ಬುಕ್ ಭೂಕಂದಾಯ ತೆರಿಗೆ ಪಾವತಿ ರಶೀದಿ ಜೊತೆಗೆ ಸ್ವಯಂ ಘೋಷಣಾ ಪತ್ರ ಮತ್ತು ಖಾತರಿ ನೀಡುವವರ ಸ್ವಯಂ ಘೋಷಣಾ ಪತ್ರ ಅರ್ಜಿದಾರನ ಫೋಟೋ. ಇದಿಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರನ್ನು ಕೇಳಲಾಗುತ್ತದೆ ಅದನ್ನ ಹಾಕಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಕೇಳುತ್ತದೆ ಅದನ್ನು ನಮೂದಿಸಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ನಮೂದಿಸಿ ಕಂಟಿನ್ಯೂ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ ಅಲೋ ಬಟನ್ ಇರುತ್ತದೆ ಅದರ ಕ್ಲಿಕ್ ಮೇಲೆ ಮಾಡಬೇಕು ನಂತರ ನೀವು ಕೊಟ್ಟ ಮೊಬೈಲ್ ನಂಬರ್ ಗೆ ಮತ್ತೊಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಿ ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಐದು ಹಂತಗಳನ್ನು ಪೂರ್ತಿ ಗೊಳಿಸಬೇಕಾಗುತ್ತದೆ.
ಮೊದಲನೇ ಹಂತದಲ್ಲಿ ಅರ್ಜಿದಾರರ ವಿವರಗಳನ್ನು ಹಾಕಬೇಕಾಗುತ್ತದೆ ಅದರಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಕೇಳುತ್ತದೆ ಅದನ್ನು ನಮೂದಿಸಬೇಕು. ನಂತರ ನಿಮ್ಮ ವಿಳಾಸವನ್ನು ನಮೂದಿಸಬೇಕು ಎರಡನೆಯದಾಗಿ ಬ್ಯಾಂಕ್ ಮತ್ತು ಸಾಲದ ವಿವರಗಳ ಬಗ್ಗೆ ಅಲ್ಲಿ ನೀರಿನ ಮೂಲದ ಬಗ್ಗೆ ಮತ್ತು ಬ್ಯಾಂಕ್ ವಿವರಗಳ ಬಗ್ಗೆ ಕೇಳುತ್ತದೆ.
ಮೂರನೇ ಹಂತದಲ್ಲಿ ನಿಮ್ಮ ಭೂಮಿಗೆ ಸಂಬಂಧಿಸಿದ ವಿವರಗಳನ್ನು ಕೇಳಲಾಗುತ್ತದೆ ನಾಲ್ಕನೇ ಹಂತದಲ್ಲಿ ಕೆಲವೊಂದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಐದನೇ ಹಂತದಲ್ಲಿ ನೀಡಿರುವ ದಾಖಲೆಗಳು ಮತ್ತು ಮಾಹಿತಿಗಳು ಸರಿಯಾಗಿವೆ ಎಂಬುದನ್ನು ಒಂದು ಸಾರಿ ಪರಿಶೀಲನೆ ಮಾಡಿಕೊಳ್ಳಬೇಕು ನಂತರ ಸಬ್ಮಿಟ್ ಮಾಡಿದಾಕ್ಷಣ ಒಂದು ಪ್ರತಿ ಕಾಣಿಸುತ್ತದೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಬೇಕು.
ಈ ರೀತಿಯಾಗಿ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರುವ ಬಡರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಮೂಲಕ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಕೃಷಿ ಚಟುವಟಿಕೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು.