ಅಂತೂ ಇಂತೂ ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾಗಿರುವ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ಸಿನಿಮಾ ಥಿಯೇಟರ್ ಗಳಿಗೆ ನುಗ್ಗುತ್ತಿದ್ದಾರೆ.

ನಿಜಕ್ಕೂ ಕೂಡ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಇನ್ನು ಮುಂದೆ ಅವರ ಹೊಸ ಸಿನಿಮಾಗಳನ್ನು ನಾವು ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳಲು ಕೂಡ ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮ ರಾಜ್ಯದ ವನಸರಿಯನ್ನು ಇಂಚಿಂಚಾಗಿ ಪ್ರತಿಯೊಬ್ಬರಿಗೂ ತೋರಿಸುವಂತಹ ವಿಶೇಷ ಪ್ರಯತ್ನವೇ ಗಂಧದಗುಡಿ. ಈ ವಿಶೇಷ ಪ್ರಯತ್ನವನ್ನು ಪವರ್ ಸ್ಟಾರ್ ಅಲ್ಲದೆ ಮತ್ತಿನ್ಯಾರು ಮಾಡುವುದಕ್ಕೆ ಸಾಧ್ಯವೇ ಇಲ್ಲ.

ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಿರುವ ಗಂಧದಗುಡಿ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನೆಗೆದ್ದಿದ್ದು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಗಂಧದಗುಡಿ ಸಿನಿಮಾವನ್ನು ನೋಡಿ ಥಿಯೇಟರ್ ನಿಂದ ಆಚೆಗೆ ಬರುವಾಗ ಕಣ್ಣೀರು ಹಾಕಿಕೊಂಡು ಭಾವುಕರಾಗಿ ಬರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಅಪ್ಪು ಅವರನ್ನು ಕೊನೆಯ ಬಾರಿಗೆ ಕಣ್ಣು ತುಂಬಿಕೊಳ್ಳುವುದು ಒಂದು ಕಡೆಯಾದರೆ ಅಪ್ಪು ಅವರು ನಮ್ಮ ರಾಜ್ಯದ ವನ್ಯ ಸಂಪತ್ತನ್ನು ವಿಶೇಷವಾಗಿ ತೋರಿಸಿರುವುದು ಇನ್ನೊಂದು ಕಡೆ ಆಗಿದೆ.

ನಿಜಕ್ಕೂ ಇದನ್ನು ಸಿನಿಮಾ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಜೀವಮಾನದಲ್ಲೇ ಎಂದು ನೋಡಿದಂತಹ ಒಂದು ಅಮೂಲ್ಯ ಅನುಭವ ಎಂದರೆ ತಪ್ಪಾಗಲಾರದು. ಯಾರೊಬ್ಬರೂ ಕೂಡ ಇದನ್ನು ಮಿಸ್ ಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ ತಪ್ಪದೆ ನಿಮ್ಮ ಕುಟುಂಬದ ಜೊತೆಗೆ ನಿಮ್ಮ ಹತ್ತಿರದ ಹಾಗೂ ನೆಚ್ಚಿನ ಚಿತ್ರಮಂದಿರಗಳಲ್ಲಿ ಗಂಧದಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸಿ ಹಾಗೂ ಕರುನಾಡಿನ ರಾಜಕುಮಾರನನ್ನು ಕೊನೆಯ ಬಾರಿಗೆ ಕಣ್ತುಂಬಿಸಿ ಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!