ನಿಮ್ಮ ಮನೆಯ ಸಾಕು ಪ್ರಾಣಿಗಳಿಗೆ ಏನೇ ತೊಂದ್ರೆ ಆದ್ರೂ ಜಸ್ಟ್ ಕಾಲ್ ಮಾಡಿ ಸಾಕು, ನಿಮ್ಮ ಮನೆಗೆ ಬಂದು ಉಚಿತ ಚಿಕಿತ್ಸೆ ನೀಡ್ತಾರೆ ವೈದ್ಯರು

0 389

Free treatment for pets: ನಿಮ್ಮ ದನ ಕರುಗಳಿಗೆ ಹಾಗೂ ಸಾಕು ಪ್ರಾಣಿಗಳಿಗೆ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ನಿಮ್ಮ ಮನೆಗೆ ವೆಟರ್ನರಿ ವೈದ್ಯರು ಬಂದು ಚಿಕಿತ್ಸೆ ನೀಡಲಿದ್ದಾರೆ. ಕರ್ನಾಟಕದ ಜನರು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಒತ್ತು ನೀಡುವುದರ ಜೊತೆಗೆ ಹೈನುಗಾರಿಕೆಗೂ ಮಹತ್ವವನ್ನು ನೀಡುತ್ತಾರೆ ಇಲ್ಲಿನ ಜನರು ಹೈನುಗಾರಿಕೆಯನ್ನು ಬಹಳ ನಿಷ್ಠೆಯಿಂದ ನಡೆಸುತ್ತಾರೆ ಪಶು ಸಂಗೋಪನೆ ಮಾಡುವುದು ಇಲ್ಲಿನ ರೈತರಿಗೆ ತುಂಬಾ ಇಷ್ಟವಾದ ಕೆಲಸ ಇದನ್ನು ಮನಗಂಡ ಸರ್ಕಾರ ಪಶುಸಂಗೋಪನೆ ಮತ್ತು ಹೈನುಗಾರಿಕೆಗಳಿಗೆ ಪ್ರೋತ್ಸಾಹವನ್ನು ಒದಗಿಸುತ್ತಿದೆ.

ಪಶುಗಳಿಗಾಗಿ ವೆಟರ್ನರಿ ವೈದ್ಯರ ಸಂಚಾರಿ ಕ್ಲಿನಿಕ್ ವ್ಯವಸ್ಥೆಯನ್ನು ಮಾಡಿ ಕೊಟ್ಟಿದ್ದು ಇದರ ಜೊತೆಗೆ ಪಶು ಸಂಜೀವಿನಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಯ ಮುಖಾಂತರ ರೈತರು ತಾವು ಸಾಕಿಕೊಂಡಿರುವ ಹಸು ಕುರಿ ಎಮ್ಮೆ ಇತ್ಯಾದಿ ಪ್ರಾಣಿಗಳ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂತಹ ವೈದ್ಯರು ರೈತರು ಸಾಕಿದ ಪ್ರಾಣಿಗಳಿಗೆ ಏನಾದರೂ ತೊಂದರೆ ಉಂಟಾದಲ್ಲಿ ತಮ್ಮ ಮನೆಗೆ ಬಂದು ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ ಏಕೆಂದರೆ ಎಲ್ಲಾ ಗ್ರಾಮಗಳಲ್ಲಿ ವೆಟರ್ನರಿ ಆಸ್ಪತ್ರೆ ಇರುವುದಿಲ್ಲ ಇದ್ದರೂ ಸಹ ಈ ಆಸ್ಪತ್ರೆಯಲ್ಲಿ ಮೂಲಭೂತ ಕೊರತೆ ಕಂಡುಬರುತ್ತವೆ ಚಿಕಿತ್ಸೆ ನೀಡಲು ಬೇಕಾದ ಪರಿಕರಗಳು ಸಹ ಲಭ್ಯವಿರುವುದಿಲ್ಲ ಇದೆಲ್ಲಾ ಕಾರಣಗಳಿಂದಾಗಿ ಸರ್ಕಾರ ಈ ಸಂಚಾರಿ ವೈದ್ಯರ ನೇಮಕ ಮಾಡಿದೆ.

ಕೇವಲ ಒಂದು ಕರೆ ಮಾಡಿದರೆ ಸಾಕು ವೈದ್ಯರು ಉಚಿತವಾಗಿ ಮನೆ ಬಾಗಿಲಿಗೆ ಬಂದು ನೀವು ಸಾಕುವ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಾರೆ ಇದರ ಜೊತೆಯಲ್ಲಿ ಪ್ರಾಣಿಗಳ ಆರೋಗ್ಯ ಹಾಗೂ ರೋಗ ನಿಯಂತ್ರಣ ಯೋಜನೆಯ ಅಡಿಯಲ್ಲಿ ಇನ್ನೂ ಈ ರೀತಿಯ ಅನೇಕ ಚಿಕಿತ್ಸಾಲಯಗಳನ್ನು ಆರಂಭಿಸುವುದಕೋಸ್ಕರ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರು ತಿಳಿಸಿದ್ದಾರೆ ಈ ಯೋಜನೆಗಳು ರೈತರಿಗೆ ಬಹಳ ಉಪಯುಕ್ತವಾಗಲಿದೆ.

ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 275 ಸಂಚಾರಿ ಕ್ಲಿನಿಕ್ ಸ್ಥಾಪನೆ ಮಾಡಲು ಹೊಸದಾಗಿ ಯೋಜನೆಯ ರೂಪಿಸಿದ್ದು ಈ ವ್ಯವಸ್ಥೆ ಹಳ್ಳಿಗಳ ಕಡೆಯಲ್ಲಿ ಹೆಚ್ಚು ಸ್ಥಾಪಿತವಾಗಲಿದೆ ಬೆಂಗಳೂರು ವಿಭಾಗಕ್ಕೆ 70 ವಾಹನಗಳು ಬೆಳಗಾವಿ ವಿಭಾಗಕ್ಕೆ 82 ವಾಹನಗಳು ಹಾಗೂ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 68 ಸಂಚಾರಿ ವಾಹನಗಳನ್ನು ಮಂಜೂರು ಮಾಡಲಾಗಿದೆ ಈ ಸಂಚಾರಿ ವಾಹನಗಳಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಔಷಧಗಳು ಸಾಧನ ಸಲಕರಣೆಗಳು ಹಾಗೂ ಶಸ್ತ್ರಚಿಕಿತ್ಸೆಯ ಸಾಧನಗಳನ್ನು ವ್ಯವಸ್ತೆ ಮಾಡಲಾಗಿರುತ್ತದೆ ಇದರ ಜೊತೆಗೆ ಒಬ್ಬ ವೇದಿಯರು ಹಾಗೂ ಒಬ್ಬ ಸಹಾಯಕರು ಇರುತ್ತಾರೆ.

ಜನರು ತಮ್ಮ ಆರೋಗ್ಯಕ್ಕೆ ತೊಂದರೆಯಾದಾಗ 108 ಗೆ ಕರೆ ಮಾಡುವಂತೆ ತಮ್ಮ ಸಾಕು ಪ್ರಾಣಿಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡಾಗ ಪಶು ಸಂಚಾರಿ ಚಿಕಿತ್ಸೆ ಸಹಾಯವಾಣಿ 1962 ಅಥವಾ 8277100200 ಈ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಉಚಿತಚಿಕಿತ್ಸೆಯನ್ನ ಮಾಡಿಸಬಹುದು. ಸರ್ಕಾರದ ಈ ಒಂದು ಉತ್ತಮ ಸೌಲಭ್ಯವು ಪ್ರತಿಯೊಬ್ಬ ರೈತನು ತಮ್ಮ ಜಾನುವಾರುಗಳ ಆರೋಗ್ಯಕ್ಕೆ ಕಾಳಜಿ ವಹಿಸಿಕೊಳ್ಳಲು ಸಹಕಾರಿಯಾಗಿದೆ.

Leave A Reply

Your email address will not be published.